ಕ್ಷಮೆ ಕೇಳುವುದಿಲ್ಲ: ಪಟ್ಟು ಬಿಡದ ‘ಖಳ’ನಟ ಮನ್ಸೂರ್ ಅಲಿ ಖಾನ್
Mansoor Ali Khan: ನಟಿ ತ್ರಿಷಾ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ಕೊಟ್ಟ ಮನ್ಸೂರ್ ಅಲಿ ಖಾನ್, ಇಂದು ಸುದ್ದಿಗೋಷ್ಠಿ ನಡೆಸಿ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.
ನಟಿ ತ್ರಿಷಾ (Trisha) ಬಗ್ಗೆ ಕೀಳಾಗಿ ಹೇಳಿಕೆ ನೀಡಿದ್ದ ಖಳನಟ ಮನ್ಸೂರ್ ಅಲಿ ಖಾನ್ (Mansoor Ali Khan), ವಿರುದ್ಧ ತ್ರಿಷಾ ಸೇರಿದಂತೆ ಹಲವು ನಟ-ನಟಿಯರು ಆಕ್ರೋಶ ವ್ಯಕ್ತಪಡಿಸಿದ್ದರು. ಮನ್ಸೂರ್ ವಿರದ್ಧ ದೂರು ದಾಖಲಿಸುವಂತೆ ಮಹಿಳಾ ಆಯೋಗ ಶಿಫಾರಸ್ಸು ಸಹ ಮಾಡಿತ್ತು. ನಟಿ, ಸಚಿವೆ ರೋಜಾ ಸಹ ಈ ಸಂಬಂಧ ಪ್ರತಿಕ್ರಿಯೆ ನೀಡಿ ಮನ್ಸೂರ್ ಅಲಿ ಖಾನ್ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸುವಂತೆ ಆಗ್ರಹಿಸಿದ್ದರು. ತಮಿಳುನಾಡು ಚಿತ್ರರಂಗದ ನಡಿಗರ್ ಸಂಘ ಸಹ ಮನ್ಸೂರ್ ಅಲಿ ಖಾನ್ ರ ಸದಸ್ಯತ್ವ ರದ್ದು ಮಾಡುವುದಾಗಿ ಹೇಳಿದೆ. ಇದೆಲ್ಲ ಘಟನೆಗಳ ಬಳಿಕ ಇಂದು (ನವೆಂಬರ್ 21) ಸುದ್ದಿಗೋಷ್ಠಿ ನಡೆಸಿದ ಮನ್ಸೂರ್ ಅಲಿ ಖಾನ್, ತಮ್ಮ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.
ಸೂಕ್ತ ವಿಚಾರಣೆ ಇಲ್ಲದೆ ನಡಿಗರ್ ಸಂಘ ತಮ್ಮ ಸದಸ್ಯತ್ವ ರದ್ದು ಮಾಡುವ ಬೆದರಿಕೆ ಒಡ್ಡಿದೆ ಎಂದಿರುವ ಮನ್ಸೂರ್ ಅಲಿ ಖಾನ್, ನನ್ನ ಪರವಾದ ವಾದವನ್ನು ಕೇಳದೆ ನನ್ನದೇ ತಪ್ಪು ಎಂದು ಹೇಳಲಾಗುತ್ತಿದೆ ಎಂದಿದ್ದಾರೆ. ತಮಿಳುನಾಡಿನ ಜನರ ಬೆಂಬಲಕ್ಕೆ ಮನವಿ ಮಾಡಿದ್ದಲ್ಲದೆ, ಈ ಘಟನೆಯಲ್ಲಿ ಕ್ಷಮೆ ಕೇಳುವ ಅವಶ್ಯಕತೆಯಾದರೂ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಘಟನೆಯಲ್ಲಿ ನನ್ನ ವಾದವನ್ನು ಯಾರೂ ಆಲಿಸುತ್ತಿಲ್ಲ. ಈ ವಿಷಯ ವೈರಲ್ ಆಗಿರುವ ಬಗ್ಗೆ ಅವರು ವ್ಯಂಗ್ಯವಾಗಿ ತಮ್ಮ ಸಂತೋಷವನ್ನೇ ವ್ಯಕ್ತಪಡಿಸಿದ ಮನ್ಸೂರ್ ಅಲಿ ಖಾನ್ ನನ್ನ ಹೀರೋ ಮಾಡಿದ್ದಕ್ಕೆ ಧನ್ಯವಾದ ಎಂದರು.
‘ಸಿನಿಮಾಗಳಲ್ಲಿ ರೇಪ್ ದೃಶ್ಯಗಳು ನಿಜಕ್ಕೂ ರೇಪ್ ದೃಶ್ಯಗಳಾ? ಅಲ್ಲ ತಾನೆ. ಸಿನಿಮಾಗಳಲ್ಲಿ ನಾಯಕರು ಯಾರನ್ನಾದರೂ ಹೊಡೆದಾಗ ವಿಲನ್ ಅನ್ನು ಸಾಯಿಸಿದಾಗ ನಾವು ಎಂಜಾಯ್ ಮಾಡುತ್ತೀವಲ್ಲ. ಅವೆಲ್ಲ ನಿಜವಾದ ಕೊಲೆಗಳಾ? ಸಿನಿಮಾದಲ್ಲಿ ರೇಪ್ ಸೀನ್ ಎಂದರೆ ನಿಜವಾದ ರೇಪ್ ಸೀನ್ ಅಲ್ಲ ಹಾಗಿದ್ದಮೇಲೆ ನಾನು ಆಡಿದ ಮಾತು ನಿಜಕ್ಕೂ ರೇಪ್ ಬಗ್ಗೆ ಆಡಿದ ಮಾತು ಎಂದು ಹೇಗೆ ಪರಿಗಣಿಸಿದಿರಿ” ಎಂದು ಮನ್ಸೂರ್ ಅಲಿ ಖಾನ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:KBC 14: ಸೈಫ್ ತಂದೆ, ಮಾಜಿ ಕ್ರಿಕೆಟರ್ ಮನ್ಸೂರ್ ಅಲಿ ಖಾನ್ ಬಗ್ಗೆ ಅಚ್ಚರಿಯ ಮಾಹಿತಿ ತೆರೆದಿಟ್ಟ ಅಮಿತಾಭ್
ಮೀರಾ ಜಾನ್ಸಿಮ್ ಜೊತೆಗಿನ ಸೀನ್ ಒಂದನ್ನು ನೆನಪು ಮಾಡಿಕೊಂಡ ಮನ್ಸೂರ್ ಅಲಿ ಖಾನ್, ”ನಾನು ಮೀರಾ ಜಾಸ್ಮಿನ್ ಜೊತೆಗೆ ಹಿಂದೊಮ್ಮೆ ರೇಪ್ ಸೀನ್ ಒಂದರಲ್ಲಿ ನಟಿಸಿದ್ದೆ. ಆ ದೃಶ್ಯದಲ್ಲಿ ನಟಿಸುವಾಗ ಆಕೆ ಗಾಯಗೊಂಡರು ಆಗ ನಾನೇ ಅವರನ್ನು ಸಂಭಾಳಿಸಿದೆ, ಅವರನ್ನು ನೋಡಿಕೊಂಡೆ’’ ಎಂದಿದ್ದಾರೆ.
ಇತ್ತೀಚೆಗಿನ ಸಂದರ್ಶನದಲ್ಲಿ ಮಾತನಾಡಿದ್ದ ಮನ್ಸೂರ್ ಅಲಿ ಖಾನ್, ‘‘ಲಿಯೋ ಸಿನಿಮಾದಲ್ಲಿ ತ್ರಿಷಾ ಜೊತೆಗೆ ಬೆಡ್ರೂಂ ಸೀನ್ ಅಥವಾ ರೇಪ್ ಸೀನ್ ಇರುತ್ತದೆ ಅಂದುಕೊಂಡಿದ್ದೆ. ಆದರೆ ತ್ರಿಷಾ ಮುಖವನ್ನೂ ಸಹ ನನಗೆ ತೋರಿಸಲಿಲ್ಲ. ಹಿಂದೆ ಹಲವು ಹೀರೋಯಿನ್ಗಳ ಜೊತೆಗೆ ರೇಪ್ ಸೀನ್ ಮಾಡಿದ್ದೇನೆ, ರೋಜಾ ಅನ್ನು ಎತ್ತಿ ಬೆಡ್ ಮೇಲೆ ಬಿಸಾಕಿದ್ದೆ. ಹಾಗೆ ‘ಲಿಯೋ’ ಸಿನಿಮಾದಲ್ಲಿಯೂ ಅವಕಾಶ ಸಿಗುತ್ತದೆ ಅಂದುಕೊಂಡಿದ್ದೆ’’ ಎಂದಿದ್ದರು.
ಮನ್ಸೂರ್ ಅಲಿ ಖಾನ್ರ ಹೇಳಿಕೆಯನ್ನು ನಟಿ ತ್ರಿಷಾ ತೀವ್ರವಾಗಿ ಖಂಡಿಸಿದ್ದರು. ‘ಲಿಯೋ’ ಸಿನಿಮಾದ ನಿರ್ದೇಶಕ ಲೋಕೇಶ್ ಸಹ ಹೇಳಿಕೆಯನ್ನು ಖಂಡಿಸಿದ್ದರು. ಮೆಗಾಸ್ಟಾರ್ ಚಿರಂಜೀವಿ ಇನ್ನೂ ಹಲವು ನಟರು ಮನ್ಸೂರ್ ಅಲಿ ಖಾನ್ರ ಹೇಳಿಕೆಯನ್ನು ಖಂಡಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ