ಕೀಳು ಹೇಳಿಕೆ: ಖಳನಟನ ವಿರುದ್ಧ ರೊಚ್ಚಿಗೆದ್ದ ನಟಿ ತ್ರಿಷಾ

Trisha-Mansoor: ಮನ್ಸೂರ್ ಅಲಿ ಖಾನ್, ತಮ್ಮ ಬಗ್ಗೆ ಆಡಿರುವ ಕೀಳು ಹೇಳೀಕೆಗಳನ್ನು ನಟಿ ತ್ರಿಷಾ ಕೃಷ್ಣನ್ ಖಂಡಿಸಿದ್ದಾರೆ. ನಿರ್ದೇಶಕ ಲೋಕೇಶ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಕೀಳು ಹೇಳಿಕೆ: ಖಳನಟನ ವಿರುದ್ಧ ರೊಚ್ಚಿಗೆದ್ದ ನಟಿ ತ್ರಿಷಾ
Follow us
ಮಂಜುನಾಥ ಸಿ.
|

Updated on: Nov 19, 2023 | 3:52 PM

ಸಿನಿಮಾಗಳಲ್ಲಿ ಖಳನಟನ ಪಾತ್ರ ನಿರ್ವಹಿಸುವ ವ್ಯಕ್ತಿಯೊಬ್ಬ, ನಟಿ ತ್ರಿಷಾ (Trisha Krishnan) ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ನೀಡಿ ಪರದೇಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ತಾನು ಖಳನ ಮನಸ್ಥಿತಿಯವನೇ ಎಂದು ತೋರಿಸಿಕೊಟ್ಟಿದ್ದಾರೆ. ಖಳನಟನ ಕೀಳು ಅಭಿರುಚಿಯ ಹೇಳಿಕೆ ಬಗ್ಗೆ ನಟಿ ತ್ರಿಷಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಆ ಖಳನಟನಿಗೆ ತಮ್ಮ ಇತ್ತೀಚೆಗಿನ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದ ನಿರ್ದೇಶಕ ಸಹ ಖಳನಟನ ಹೇಳಿಕೆಯನ್ನು ಖಂಡಿಸಿದ್ದಾರೆ.

ವಿಜಯ್ ನಟನೆಯ ಇತ್ತಿಚೆಗಿನ ಸೂಪರ್ ಹಿಟ್ ಸಿನಿಮಾ ‘ಲಿಯೋ’ನಲ್ಲಿ ನಟಿಸಿದ್ದ ನಟ ಮನ್ಸೂರ್ ಅಲಿ ಖಾನ್ ಇತ್ತೀಚೆಗಿನ ತಮ್ಮ ಸಂದರ್ಶನವೊಂದರಲ್ಲಿ ‘ಲಿಯೋ’ ಸಿನಿಮಾ ಬಗ್ಗೆ ಮಾತನಾಡುತ್ತಾ, ಆ ಸಿನಿಮಾದ ನಟಿ ತ್ರಿಷಾ ಬಗ್ಗೆ ಕೀಳು ಅಭಿರುಚಿಯ ಹೇಳಿಕೆಯನ್ನು ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ಮನ್ಸೂರ್ ಅಲಿ ಖಾನ್, ‘ನಾನು ‘ಲಿಯೋ’ ಸಿನಿಮಾದಲ್ಲಿ ನಟಿಸುತ್ತಿದ್ದೆ. ಆ ಸಿನಿಮಾದ ನಾಯಕಿ ತ್ರಿಷಾ ಎಂದು ತಿಳಿದಾಗ ಸಂತೋಷವಾಯ್ತು. ನನ್ನ ಹಾಗೂ ತ್ರಿಷಾ ನಡುವೆ ಒಳ್ಳೆಯ ಬೆಡ್​ರೂಂ ಸೀನ್​ಗಳಿರುತ್ತವೆ ಎಂದು ನಿರೀಕ್ಷಿಸಿದ್ದೆ. ಆದರೆ ಅದೆಲ್ಲ ಸುಳ್ಳಾಯಿತು. ತ್ರಿಷಾಳನ್ನು ಬೆಡ್​ರೂಂಗೆ ಎತ್ತಿಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಅಂದುಕೊಂಡಿದ್ದೆ. ನಾನು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದಾಗ ಅಂಥಹಾ ಹಲವು ಸೀನ್​ಗಳಲ್ಲಿ ನಟಿಸಿದ್ದೇನೆ. ಸಿನಿಮಾದಲ್ಲಿ ಹಲವು ನಟಿಯರನ್ನು ರೇಪ್ ಮಾಡಿದ್ದೀನಿ. ಆದರೆ ‘ಲಿಯೋ’ ಸಿನಿಮಾನವರು ತ್ರಿಷಾರ ಮುಖವನ್ನು ಸಹ ನನಗೆ ತೋರಿಸಲಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ತ್ರಿಷಾ ಕೃಷ್ಣನ್ ಕನ್ನಡದಲ್ಲಿ ನಟಿಸಿದ್ದು ಒಂದೇ ಚಿತ್ರ, ಅದರಲ್ಲಿ ಪುನೀತ್ ರಾಜ್ ಕುಮಾರ್ ನಾಯಕರಾಗಿದ್ದರು!

ಮನ್ಸೂರ್ ಅಲಿ ಖಾನ್ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನಟಿ ತ್ರಿಷಾ, ” ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿರುವ ವೀಡಿಯೊ ಇತ್ತೀಚೆಗೆ ನನ್ನ ಗಮನಕ್ಕೆ ಬಂದಿದೆ. ಆ ನಟನ ಮಾತುಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅಗೌರವ, ಸ್ತ್ರೀದ್ವೇಷ, ಕೆಟ್ಟ ಅಭಿರುಚಿ ಹಾಗೂ ಲೈಂಗಿಕ ಲೋಭವನ್ನು ಹೊಂದಿದೆ. ನನ್ನೊಂದಿಗೆ ನಟಿಸಲು ಅವರು ಬಯಸಬಹುದು ಆದರೆ ನಾನು ಅವರಂತಹ ಕೆಟ್ಟ ವ್ಯಕ್ತಿಯೊಂದಿಗೆ ಎಂದಿಗೂ ಪರದೆಯನ್ನು ಹಂಚಿಕೊಳ್ಳುವುದಿಲ್ಲ. ಈ ಹಿಂದೆ ಪರದೆ ಹಂಚಿಕೊಂಡಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಮತ್ತು ನನ್ನ ಉಳಿದ ಚಲನಚಿತ್ರ ವೃತ್ತಿಜೀವನದಲ್ಲಿ ನಾನು ಅವರೊಟ್ಟಿಗೆ ಎಂದಿಗೂ ಪರದೆ ಹಂಚಿಕೊಳ್ಳದಂತೆ ಎಚ್ಚರವಹಿಸುತ್ತೇನೆ. ಅವರಂತಹವರು ಮನುಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ’’ ಎಂದಿದ್ದಾರೆ.

‘ಲಿಯೋ’ ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜು ಸಹ ಮನ್ಸೂರ್ ಅಲಿ ಖಾನ್​, ನಟಿ ತ್ರಿಷಾ ಬಗ್ಗೆ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ”ನಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದರಿಂದ ಮನ್ಸೂರ್ ಅಲಿ ಖಾನ್ ಅವರು ಮಾಡಿದ ಸ್ತ್ರೀದ್ವೇಷದ ಕಾಮೆಂಟ್‌ಗಳನ್ನು ಕೇಳಿ ಅಸಮಾಧಾನ ಮತ್ತು ಕೋಪಗೊಂಡಿದ್ದೇವೆ. ಮಹಿಳೆಯರು, ಸಹ ಕಲಾವಿದರು ಮತ್ತು ವೃತ್ತಿಪರರಿಗೆ ಗೌರವ ನೀಡುವುದು ಯಾವುದೇ ಉದ್ಯಮದಲ್ಲಿ ಅತ್ಯಂತ ಅವಶ್ಯಕ. ನಾನು, ಮನ್ಸೂರ್ ಅಲಿ ಖಾನ್​ರ ಈ ನಡವಳಿಕೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆಜ್’ ಎಂದಿದ್ದಾರೆ. ಇತ್ತೀಚೆಗಷ್ಟೆ ಮನ್ಸೂರ್ ಅಲಿ ಖಾನ್, ನಟಿ ತಮನ್ನಾ ಬಗ್ಗೆಯೂ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ