‘ರಶ್ಮಿಕಾ ಊಟ’ ಮಾರಾಟಕ್ಕಿದೆ; ಇದನ್ನು ತಿನ್ನೋದು ಹೇಗೆ? ವಿಡಿಯೋ ಸಮೇತ ವಿವರಿಸಿದ ನಟಿ

Rashmika Mandanna: ಮಾರುಕಟ್ಟೆಯಲ್ಲಿ ಈಗ ‘ದಿ ರಶ್ಮಿಕಾ ಮೀಲ್​’ ಲಭ್ಯವಿದೆ. ಪ್ರತಿಷ್ಠಿತ ‘ಮ್ಯಾಕ್​ ಡೊನಾಲ್ಡ್ಸ್​’ ಕಂಪನಿ ಈ ಊಟವನ್ನು ಪರಿಚಯಸಿದೆ. ಇದನ್ನು ಹೇಗೆ ಸೇವಿಸಬೇಕು ಎಂದು ಸ್ವತಃ ರಶ್ಮಿಕಾ ಮಂದಣ್ಣ ಮಾಹಿತಿ ನೀಡಿದ್ದಾರೆ.

‘ರಶ್ಮಿಕಾ ಊಟ’ ಮಾರಾಟಕ್ಕಿದೆ; ಇದನ್ನು ತಿನ್ನೋದು ಹೇಗೆ? ವಿಡಿಯೋ ಸಮೇತ ವಿವರಿಸಿದ ನಟಿ
ರಶ್ಮಿಕಾ ಮಂದಣ್ಣ
Follow us
TV9 Web
| Updated By: ಮದನ್​ ಕುಮಾರ್​

Updated on: Nov 21, 2021 | 12:05 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಹತ್ತು ಹಲವು ಕಾರಣಗಳಿಗಾಗಿ ಸದ್ದು ಮಾಡುತ್ತಿದ್ದಾರೆ. ಈಗಂತೂ ಅವರಿಗೆ ಸಿನಿಮಾ ಮಾತ್ರವಲ್ಲದೇ ಜಾಹೀರಾತು ಕ್ಷೇತ್ರದಲ್ಲಿ ಡಿಮ್ಯಾಂಡ್​ ಹೆಚ್ಚಿದೆ. ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಜನಪ್ರಿಯ ಬ್ರ್ಯಾಂಡ್​ಗಳಿಗೆ ರಶ್ಮಿಕಾ ರಾಯಭಾರಿ ಆಗುತ್ತಿದ್ದಾರೆ. ಅವುಗಳ ಜಾಹೀರಾತಿನಲ್ಲಿ ಕೊಡಗಿನ ಕುವರಿ ಮಿಂಚುತ್ತಿದ್ದಾರೆ. ರಶ್ಮಿಕಾ ಹೆಸರಿಗೆ ಈಗ ದೊಡ್ಡ ತೂಕ ಇದೆ. ಅದನ್ನು ಬಳಸಿಕೊಂಡು ಮಾರ್ಕೆಟಿಂಗ್​ ಮಾಡಲು ಕೆಲವು ಕಂಪನಿಗಳು ಮುಂದೆಬಂದಿವೆ. ಆ ಪೈಕಿ ‘ಮ್ಯಾಕ್​ ಡೊನಾಲ್ಡ್ಸ್​’ (McDonald’s) ಕಂಪನಿ ಒಂದು ವಿಶೇಷ ಪ್ರಯೋಗ ಮಾಡಿದೆ. ರಶ್ಮಿಕಾ ಮಂದಣ್ಣ ಹೆಸರಿನಲ್ಲಿಯೇ ಊಟವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದಕ್ಕೆ ‘ದಿ ರಶ್ಮಿಕಾ ಮೀಲ್​’ (The Rashmika Meal) ಎಂದು ಹೆಸರು ಇಡಲಾಗಿದೆ. ಅದರ ಜಾಹೀರಾತುಗಳು ಈಗ ರಾರಾಜಿಸುತ್ತಿವೆ.

ಅಮೆರಿಕಾ ಮೂಲದ ‘ಮ್ಯಾಕ್​ ಡೊನಾಲ್ಡ್ಸ್​’ ಕಂಪನಿ ವಿಶ್ವಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ. ಭಾರತದಲ್ಲೂ ಇದು ಫೇಮಸ್​ ಆಗಿದೆ. ಮ್ಯಾಕ್​ ಡೊನಾಲ್ಡ್ಸ್​ ಕಡೆಯಿಂದ ಈಗ ‘ದಿ ರಶ್ಮಿಕಾ ಮೀಲ್​’ ಪರಿಚಯಿಸಲಾಗಿದೆ. ಅದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ. ಈ ಊಟವನ್ನು ಹೇಗೆ ಸೇವಿಸಬೇಕು ಎಂದು ‘ಕಿರಿಕ್​ ಪಾರ್ಟಿ’ ಬ್ಯೂಟಿ ಮಾಹಿತಿ ನೀಡಿದ್ದಾರೆ.

‘ಮೊದಲು ಸ್ಪೈಸೀ ಫ್ರೈಡ್​ ಚಿಕನ್​ ತಿನ್ನಬೇಕು. ಆನಂತರ ಮಿಕ್ಸ್​ ಸ್ಪೈಸಿ ಚಿಕನ್​ ಬರ್ಗರ್​ ಜೊತೆ ಪಿರಿಪಿರಿ ಫ್ರೈಸ್​ ಸೇವಿಸಬೇಕು. ಆ ಮೇಲೆ ನಿಂಬೂ ಫಿಜ್​ ಕುಡಿಯಬೇಕು. ಕೊನೆಯದಾಗಿ ಮ್ಯಾಕ್​ ಫ್ಲರಿ ಐಸ್​ ಕ್ರೀಮ್​ ಸವಿಯಬೇಕು’ ಎಂದು ರಶ್ಮಿಕಾ ಮಂದಣ್ಣ ವಿವರಿಸಿದ್ದಾರೆ. ಅವರ ಅಭಿಮಾನಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಊಟದ ಪ್ಯಾಕೇಜ್​ ಅನ್ನು ಪರಿಚಯಿಸಲಾಗಿದೆ. ಇದು ಎಷ್ಟರಮಟ್ಟಿಗೆ ಸಕ್ಸಸ್​ ಆಗುತ್ತೋ ಬಿಡುತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ರಶ್ಮಿಕಾಗೆ ಸಿಕ್ಕಿರುವ ಜನಪ್ರಿಯತೆಯನ್ನು ದೊಡ್ಡ ದೊಡ್ಡ ಕಂಪನಿಗಳು ಈ ರೀತಿ ಉಪಯೋಗಿಸಿಕೊಳ್ಳುತ್ತಿರುವುದು ವಿಶೇಷ.

ಸದ್ಯ ರಶ್ಮಿಕಾ ಮಂದಣ್ಣ ಬಹುಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ಪುಷ್ಪ’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಅವರು ಅಲ್ಲು ಅರ್ಜುನ್​ಗೆ ಜೋಡಿಯಾಗಿ ನಟಿಸಿದ್ದಾರೆ. ಡಿ.17ರಂದು ಕ್ರಿಸ್​ ಮಸ್​ ಹಬ್ಬದ ಪ್ರಯುಕ್ತ ವಿಶ್ವಾದ್ಯಂತ ‘ಪುಷ್ಪ’ ಬಿಡುಗಡೆ ಆಗಲಿದೆ. ಈ ಸಿನಿಮಾದಿಂದ ರಶ್ಮಿಕಾ ವೃತ್ತಿ ಜೀವನಕ್ಕೆ ದೊಡ್ಡ ಯಶಸ್ಸು ಸಿಗುವ ಸಾಧ್ಯತೆ ಇದೆ. ಬಾಲಿವುಡ್​ನಲ್ಲಿ ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ ಬೈ’, ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ.

ಇದನ್ನೂ ಓದಿ:

ತಮಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆ ಡೇಟಿಂಗ್​ ಮಾಡುವ ಬಗ್ಗೆ ರಶ್ಮಿಕಾ ಮಂದಣ್ಣ ಹೇಳೋದೇನು?

Rashmika Mandanna: ಮುಂಬೈನಲ್ಲಿ ಹೆಚ್ಚಿದೆ ರಶ್ಮಿಕಾ ಮಂದಣ್ಣ ತಿರುಗಾಟ; ಕೊಡಗಿನ ಕುವರಿ ಹೋದಲ್ಲೆಲ್ಲ ಕ್ಯಾಮೆರಾ ಕಣ್ಣು