ಟಾಲಿವುಡ್ ನಟ ಚಿರಂಜೀವಿ ಅವರಿಗೆ ಇಂದು (ಆಗಸ್ಟ್ 22 ) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಅವರಿಗೆ ಇದು 69ನೇ ವರ್ಷದ ಜನ್ಮದಿನ. ಈ ವಯಸ್ಸಿನಲ್ಲೂ ಅವರು ಫಿಟ್ ಆಗಿದ್ದಾರೆ. ಹಲವು ಚಿತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಫಿಟ್ನೆಸ್ಗಾಗಿ ಜಿಮ್ ಮಾಡುತ್ತಾರೆ. ಅವರು ದಕ್ಷಿಣ ಭಾರತದ ಶ್ರೀಮಂತ ನಟರಲ್ಲಿ ಅವರೂ ಒಬ್ಬರ. ಅವರ ಆಸ್ತಿ ಬಗ್ಗೆ, ಅವರು ಹೊಂದಿರುವ ದುಬಾರಿ ವಸ್ತುಗಳ ಬಗ್ಗೆ ಇಲ್ಲಿದೆ ವಿವರ.
ಚಿರಂಜೀವಿ ಅವರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಪದ್ಮಭೂಷಣ ಮತ್ತು ಪದ್ಮವಿಭೂಷಣ ರೀತಿಯ ಅವಾರ್ಡ್ಗಳನ್ನು ಪಡೆದಿದ್ದಾರೆ. ಅವರು ನಟ, ನಿರ್ಮಾಪಕ, ರಾಜಕಾರಣಿಯೂ ಹೌದು. ಅವರ ಆಸ್ತಿ ಮೌಲ್ಯ 1650 ಕೋಟಿ ರೂಪಾಯಿ ಎನ್ನಲಾಗಿದೆ. ಅವರು ಅನೇಕ ಕಡೆಗಳಲ್ಲಿ ದುಬಾರಿ ಮನೆಗಳನ್ನು ಹೊಂದಿದ್ದಾರೆ.
ಹೈದರಾಬಾದ್ನ ಜುಬ್ಲಿ ಹಿಲ್ಸ್ನಲ್ಲಿ ಅವರು 25 ಸಾವಿರ ಸ್ಕ್ವೇರ್ ಫೀಟ್ನ ಮನೆ ಹೊಂದಿದ್ದಾರೆ. ಬೆಂಗಳೂರಿನ ಏರ್ಪೋರ್ಟ್ ಬಳಿ ಫಾರ್ಮ್ಹೌಸ್ ಹೊಂದಿದ್ದಾರೆ. ಇದನ್ನು ಅವರು ಸಾಕಷ್ಟು ಇಷ್ಟಪಡುತ್ತಾರೆ. ಚೆನ್ನೈನಲ್ಲಿಯೂ ಚಿರಂಜೀವಿ ಮನೆ ಹೊಂದಿದ್ದಾರೆ. 90ರ ದಶಕದಲ್ಲಿ ಫಿಲ್ಮ್ನಗರದಲ್ಲಿ ಭೂಮಿ ಖರೀದಿ ಮಾಡಿದ್ದರು. ಇದನ್ನು 70 ಕೋಟಿ ರೂಪಾಯಿಗೆ ಅವರು ಮಾರಿದ್ದಾರೆ.
ಚಿರಂಜೀವಿ ಅವರ ಬಳಿ ಖಾಸಗಿ ಜೆಟ್ ಇದೆ. ಭಾರತದಲ್ಲಿ ಸುತ್ತಾಡಲು ಅವರು ಇದನ್ನು ಬಳಸುತ್ತಾರೆ. ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಇದೆ. ಇದರ ಬೆಲೆ 9-10 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ರೇಂಜ್ ರೋವರ್, ಟೊಯೋಟಾ ಲ್ಯಾಂಡ್ ಕ್ರೂಜರ್ ಕಾರುಗಳ ಒಡೆಯನೂ ಹೌದು. ಕೇರಳ ಬ್ಲಾಸ್ಟರ್ ಎಫ್ಸಿಯ ಸಹ ಮಾಲೀಕರಾಗಿದ್ದಾರೆ. ನಾಗಾರ್ಜುನ ಹಾಗೂ ಸಚಿನ್ ತೆಂಡೂಲ್ಕರ್ ಕೂಡ ಇದರ ಮಾಲೀಕರು. ಅವರಿಗೆ ಕ್ರೀಡೆ ಬಗ್ಗೆಯೂ ಆಸಕ್ತಿ ಇದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.
ಇದನ್ನೂ ಓದಿ:1 ಕೋಟಿ ರೂಪಾಯಿ ದೇಣಿಗೆ ನೀಡಿ ಭೂಕುಸಿತದ ಸಂತ್ರಸ್ತರಿಗೆ ನೆರವಾದ ಚಿರಂಜೀವಿ, ರಾಮ್ ಚರಣ್
ಚಿರಂಜೀವಿ ನಿರ್ಮಾಣ ಸಂಸ್ಥೆ ಹೊಂದಿದ್ದು, ಇದಕ್ಕೆ ಅಂಜನಾ ಪ್ರೊಡಕ್ಷನ್ಸ್ ಎಂದು ಹೆಸರು ಇಟ್ಟಿದ್ದಾರೆ. ಇದನ್ನು ಸ್ಥಾಪಿಸಿದ್ದು 1988ರಲ್ಲಿ. ಸಹೋದರ ನಾಗೇಂದ್ರ ಬಾಬು ಜೊತೆ ಸೇರಿ ಅವರು ಇದನ್ನು ಆರಂಭಿಸಿದರು. ಚಿರಂಜೀವಿ ತಾಯಿ ಅಂಜನಾ ದೇವಿ ಹೆಸರಲ್ಲಿ ಇದನ್ನು ಮಾಡಿದರು. ತೆಲುಗು ಚಿತ್ರರಂಗದ ಪ್ರಮುಖ ಬ್ಯಾನರ್ಗಳಲ್ಲಿ ಇದೂ ಒಂದು.
ಚಿರಂಜೀವಿ ಅವರು ಸಿನಿಮಾ ಕೆಲಸಗಳ ಜೊತೆಗೆ ಸಾಕಷ್ಟು ಸಾಮಾಜಿಕ ಕೆಲಸ ಮಾಡುತ್ತಾರೆ. ಅವರು ಹಲವು ಒಳ್ಳೆಯ ಕೆಲಸಗಳನ್ನು ಈವರೆಗೆ ಮಾಡಿದ್ದಾರೆ. ಅವರ ಹೆಸರಲ್ಲಿ ಬ್ಲಡ್ ಬ್ಯಾಂಕ್ ಕೂಡ ಇದೆ. ಹಲವು ಕಡೆಗಳಲ್ಲಿ ಚಿರಂಜೀವಿ ಹೂಡಿಕೆ ಮಾಡಿದ್ದಾರೆ. ಚಿರಂಜೀವಿ ಅವರು ಜನ್ಮದಿನಕ್ಕೂ ಮುನ್ನ ಅವರು ತಿರುಮಲಕ್ಕೆ ಭೇಟಿ ನೀಡಿದ್ದರು. ಅವರು ದೇವರ ದರ್ಶನ ಪಡೆದು ಬಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ