ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ ತ್ರಿಶಾ ವಿಲನ್; ಏನಿದು ಟ್ವಿಸ್ಟ್?
ಕೆಲವು ವರದಿಗಳ ಪ್ರಕಾರ ಪ್ರಭಾಸ್ ಅವರು ಪೊಲೀಸ್ ಪಾತ್ರ ಮಾಡುತ್ತಿದ್ದಾರಂತೆ. ತ್ರಿಶಾ ಅವರು ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರಕ್ಕೆ ನೆಗೆಟಿವ್ ಶೇಡ್ ಇರಲಿದೆ. ಪ್ರಭಾಸ್ ಅವರಿಗೆ ದ್ವಿಪಾತ್ರ ಇರಲಿದೆ. ಪ್ರಭಾಸ್ ಅವರು ಹೀರೋ ಹಾಗೂ ವಿಲನ್ ಎರಡೂ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ,
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಚಿತ್ರದ ಮೂಲಕ ಪ್ರಭಾಸ್ ಬೇಡಿಕೆ ಹೆಚ್ಚಾಗಿದೆ. ಸದ್ಯ ಪ್ರಭಾಸ್ ಅವರು ‘ರಾಜಾಸಾಬ್’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್ಗಾಗಿ ಫ್ಯಾನ್ಸ್ ಕಾದಿದ್ದಾರೆ. ಈಗ ಅವರು ‘ಸ್ಪಿರಿಟ್’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ತ್ರಿಶಾ ಅವರು ವಿಲನ್ ಪಾತ್ರ ಮಾಡುತ್ತಾರೆ ಎಂದು ವರದಿ ಆಗಿದೆ.
ಸಂದೀಪ್ ರೆಡ್ಡಿ ವಂಗ ಅವರು ‘ಸ್ಪಿರಿಟ್’ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಗೊತ್ತೇ ಇದೆ. ಅವರ ನಿರ್ದೇಶನದ ಸಿನಿಮಾಗಳಲ್ಲಿ ಹೀರೋ ಮಾಡೋದು ಕೆಟ್ಟದ್ದನ್ನೇ. ಆದರೂ ಆತ ಹೀರೋ ಎನಿಸಿಕೊಳ್ಳುತ್ತಾನೆ. ಈಗ ‘ಸ್ಪಿರಿಟ್’ ಚಿತ್ರದಲ್ಲಿ ಪ್ರಭಾಸ್ ಪಾತ್ರ ಯಾವ ರೀತಿಯ ಪಾತ್ರ ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ. ಹೀಗಿರುವಾಗಲೇ ಸಂದೀಪ್ ರೆಡ್ಡಿ ವಂಗ ಅವರು ತ್ರಿಶಾ ಅವರನ್ನು ಆಯ್ಕೆ ಮಾಡಿಕೊಳ್ಳಲು ರೆಡಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಲವು ವರದಿಗಳ ಪ್ರಕಾರ ಪ್ರಭಾಸ್ ಅವರು ಪೊಲೀಸ್ ಪಾತ್ರ ಮಾಡುತ್ತಿದ್ದಾರಂತೆ. ತ್ರಿಶಾ ಅವರು ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರಕ್ಕೆ ನೆಗೆಟಿವ್ ಶೇಡ್ ಇರಲಿದೆ. ಪ್ರಭಾಸ್ ಅವರಿಗೆ ದ್ವಿಪಾತ್ರ ಇರಲಿದೆ. ಪ್ರಭಾಸ್ ಅವರು ಹೀರೋ ಹಾಗೂ ವಿಲನ್ ಎರಡೂ ಪಾತ್ರ ಮಾಡುತ್ತಿದ್ದಾರೆ. ವಿಲನ್ ಪಾತ್ರ ಮಾಡೋ ಪ್ರಭಾಸ್ಗೆ ತ್ರಿಶಾ ಜೊತೆ ಆಗಲಿದ್ದಾರೆ. ಈ ವಿಚಾರ ಇನ್ನೂ ಅಧಿಕೃತ ಆಗಿಲ್ಲ.
ತ್ರಿಶಾ ಅವರು ವೃತ್ತಿ ಜೀವನದಲ್ಲಿ ಹೀರೋಯಿನ್ ಆಗಿ ಮಿಂಚಿದ್ದೇ ಹೆಚ್ಚು. ಅವರು ಗ್ಲಾಮರ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಈಗ ಅವರಿಗೆ ವಿಲನ್ ಪಾತ್ರ ಸಿಕ್ಕಿದ್ದು, ಅದನ್ನು ಹೇಗೆ ನಿರ್ವಹಿಸುತ್ತಾರೆ ಎಂಬ ಕುತೂಹಲ ಮೂಡಿದೆ. ‘ಸ್ಪಿರಿಟ್’ ಚಿತ್ರದಲ್ಲಿ ಕೊರಿಯಾದ ಸ್ಟಾರ್ ಡಾ ಲೀ ಅವರು ಪ್ರಮುಖ ವಿಲನ್ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದಾಕೆ ಈಗ ಪ್ರಭಾಸ್ ಸಿನಿಮಾಕ್ಕೆ ನಾಯಕಿ
ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಪಾತ್ರದ ಬಗ್ಗೆ ನಟ ಅರ್ಷದ್ ವಾರ್ಸಿ ಅವರು ಟೀಕೆ ಮಾಡಿದ್ದರು. ಪ್ರಭಾಸ್ ಅವರನ್ನು ಜೋಕರ್ ರೀತಿ ತೋರಿಸಲಾಗಿದೆ ಎಂದು ಹೇಳಿದ್ದರು. ಇನ್ನು, ‘ಅನಿಮಲ್’ ಸಿನಿಮಾ ಕಾರಣಕ್ಕೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ಸಾಕಷ್ಟು ಟೀಕೆ ಎದುರಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.