- Kannada News Photo gallery Jyothi Rai aka Jyothi Poorvaj shares stunning pics Entertainment News in Kannada
ಜ್ಯೋತಿ ರೈ ಗ್ಲಾಮರ್ ಕಂಡು ಸುಸ್ತಾದ ಅಭಿಮಾನಿ ಬಳಗ; ವೈರಲ್ ಆಗಿವೆ ಫೋಟೋಸ್
ನಟಿ ಜ್ಯೋತಿ ರೈ ಅವರು ಇತ್ತೀಚೆಗೆ ಅತ್ಯಾಕರ್ಷಕವಾದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಖತ್ ಗ್ಲಾಮರಸ್ ಆಗಿ ಪೋಸ್ ನೀಡಿರುವ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ. ಬಗೆಬಗೆಯ ಫೋಟೋಶೂಟ್ ಮೂಲಕ ಜ್ಯೋತಿ ರೈ ಅವರು ಗಮನ ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ತುಂಬಾನೆ ಆ್ಯಕ್ಟೀವ್ ಆಗಿದ್ದಾರೆ.
Updated on: Aug 22, 2024 | 9:48 PM

ಕಿರುತೆರೆಯ ಅನೇಕ ಸೀರಿಯಲ್ಗಳಲ್ಲಿ ನಟಿಸಿರುವ ಜ್ಯೋತಿ ರೈ ಅವರು ಇತ್ತೀಚೆಗೆ ಅಭಿಮಾನಿಗಳ ಕಣ್ಮನ ಸೆಳೆಯುವಂತಹ ರೀತಿಯಲ್ಲಿ ಫೋಟೋಶೂಟ್ ಮಾಡಿಸುತ್ತಿದ್ದಾರೆ. ಅವರ ಅನೇಕ ಫೋಟೋಗಳು ವೈರಲ್ ಆಗುತ್ತಿವೆ.

ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವಾಗ ಜ್ಯೋತಿ ರೈ ಅವರ ಗೆಟಪ್ ಬೇರೆ ರೀತಿ ಇತ್ತು. ಆದರೆ ಈಗ ಅವರು ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಬಹಳ ಗ್ಲಾಮರಸ್ ಆಗಿ ಪೋಸ್ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಜ್ಯೋತಿ ರೈ ಅವರು ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿ ಆಗುತ್ತಿದ್ದಾರೆ. ವೈರಲ್ ಫೋಟೋಗಳಿಗೆ ನೆಟ್ಟಿಗರು ಬಗೆಬಗೆಯ ಕಮೆಂಟ್ ಮಾಡುತ್ತಿದ್ದಾರೆ.

ಜ್ಯೋತಿ ರೈ ಅವರ ಪಳಪಳ ಹೊಳೆಯುವ ಗೋಲ್ಡನ್ ಬಣ್ಣದ ಡ್ರೆಸ್ ಧರಿಸಿದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಪಡ್ಡೆ ಹುಡುಗರ ನಿದ್ದೆ ಹಾರಿ ಹೋಗುವಂತಿರುವ ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸಿಕ್ಕಿದೆ.

ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ‘ಗ್ಲಾಮರ್ ಕ್ವೀನ್’ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಮೆಂಟ್ಗಳ ಮೂಲಕ ಫ್ಯಾನ್ಸ್ ಹೊಗಳುತ್ತಿದ್ದಾರೆ. ವೈಯಕ್ತಿಕ ಕಾರಣಗಳಿಂದಲೂ ಜ್ಯೋತಿ ಅವರು ಆಗಾಗ ಸುದ್ದಿ ಆಗುತ್ತಾರೆ.

ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಜ್ಯೋತಿ ರೈ ಅವರಿಗೆ ಸಖತ್ ಬೇಡಿಕೆ ಇದೆ. ಅನೇಕ ಸೀರಿಯಲ್ಗಳಲ್ಲಿ ನಟಿಸಿರುವ ಅವರು ಅನುಭವಿ ಕಲಾವಿದೆ ಆಗಿದ್ದಾರೆ. ಹಲವು ಆಫರ್ಗಳು ಜ್ಯೋತಿ ರೈ ಅವರ ಕೈಯಲ್ಲಿವೆ.

ಸೀರಿಯಲ್ಗಳು ಅಷ್ಟೇ ಅಲ್ಲದೇ ಹಲವು ಸಿನಿಮಾಗಳಲ್ಲೂ ಜ್ಯೋತಿ ರೈ ನಟಿಸಿದ್ದಾರೆ. ಒಂದಷ್ಟು ದಿನಗಳ ಹಿಂದೆ ನಕಲಿ ವಿಡಿಯೋದಿಂದಾಗಿ ಅವರ ಹೆಸರು ವಿವಾದದಲ್ಲಿ ಸಿಲುಕಿಕೊಂಡಿತ್ತು. ಅದಕ್ಕೆ ಜ್ಯೋತಿ ರೈ ಸ್ಪಷ್ಟನೆ ನೀಡಿದ್ದರು.




