AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್​ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದಾಕೆ ಈಗ ಪ್ರಭಾಸ್ ಸಿನಿಮಾಕ್ಕೆ ನಾಯಕಿ

ಇನ್​ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದ ಚೆಲುವೆ ಈಗ ಪ್ರಭಾಸ್ ಹೊಸ ಸಿನಿಮಾಕ್ಕೆ ನಾಯಕಿ. ಯಾರು ಈ ಚೆಲುವೆ? ಈಕೆಯನ್ನು ಸಿನಿಮಾ ಆಯ್ಕೆ ಮಾಡಿದ್ದು ಏಕೆ?

ಇನ್​ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದಾಕೆ ಈಗ ಪ್ರಭಾಸ್ ಸಿನಿಮಾಕ್ಕೆ ನಾಯಕಿ
ಮಂಜುನಾಥ ಸಿ.
|

Updated on: Aug 21, 2024 | 11:04 AM

Share

ಪ್ರಭಾಸ್ ಸಿನಿಮಾದಲ್ಲಿ ನಾಯಕಿಯಾಗಲು ದೇಶದ ಟಾಪ್ ನಾಯಕ ನಟಿಯರೇ ತುದಿಗಾಲಲ್ಲಿ ನಿಂತಿದ್ದಾರೆ. ಪ್ರಭಾಸ್ ನಟಿಸಿರುವ ಇತ್ತೀಚೆಗಿನ ಎಲ್ಲ ಸಿನಿಮಾಗಳಿಗೂ ದೇಶದ ಟಾಪ್ ನಟಿಯರೇ ನಾಯಕಿಯರು. ದೀಪಿಕಾ ಪಡುಕೋಣೆ, ಕೃತಿ ಸನೊನ್, ಶ್ರದ್ಧಾ ಕಪೂರ್, ದಿಶಾ ಪಟಾನಿ, ಪೂಜಾ ಹೆಗ್ಡೆ ಹೀಗೆ ದೊಡ್ಡ ನಟಿಯರು ಪ್ರಭಾಸ್ ಜೊತೆ ನಟಿಸಲು ಸುಲಭವಾಗಿ ಒಪ್ಪಿಕೊಳ್ಳುವ ಪರಿಸ್ಥಿತಿ ಇದ್ದಾಗಲೂ ಸಹ ಪ್ರಭಾಸ್​ರ ಹೊಸ ಸಿನಿಮಾಕ್ಕೆ ಇನ್​ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿಯನ್ನು ನಾಯಕಿಯನ್ನಾಗಿ ಹಾಕಿಕೊಳ್ಳಲಾಗಿದೆ. ಅಂದಹಾಗೆ ಯಾರು ಈ ಯುವತಿ? ಈಕೆಯನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲು ಕಾರಣವೇನು?

‘ಸೀತಾ ರಾಮಂ’ ಅಂಥಹಾ ಸುಂದರ ಸಿನಿಮಾ ನಿರ್ದೇಶಿಸಿರುವ ರಘು ಹನುಪುಡಿ ಇದೀಗ ಪ್ರಭಾಸ್ ಜೊತೆಗೆ ಹೊಸ ಸಿನಿಮಾ ಪ್ರಾರಂಭ ಮಾಡುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನೆರವೇರಿದೆ. ಮುಹೂರ್ತ ಸಮಾರಂಭಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು. ಮುಹೂರ್ತದಲ್ಲಿ ಗಮನ ಸೆಳೆದಿದ್ದು ಸಿನಿಮಾದ ನಾಯಕಿ. ಹೌದು, ಸಿನಿಮಾದ ಮುಹೂರ್ತದ ಚಿತ್ರಗಳು ಹೊರಬಿದ್ದಾಗ ಪ್ರಭಾಸ್ ಪಕ್ಕ ನಿಂತಿದ್ದ ನಾಯಕಿ ಯಾರೆಂಬುದು ಸಹ ಹಲವರಿಗೆ ಗೊತ್ತಾಗಿರಲಿಲ್ಲ.

ಪ್ರಭಾಸ್​ರ ಹೊಸ ಸಿನಿಮಾದ ನಾಯಕಿಯ ಹೆಸರು ಇಮಾನ್ ಇಸ್ಮಾಯಿಲ್ ಇನ್​ಸ್ಟಾಗ್ರಾಂನಲ್ಲಿ ಇಮಾನ್ವಿ ಎಂದೇ ಪರಿಚಿತರು. ಇಮಾನ್ವಿ ಈ ವರೆಗೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಬಹಳ ಒಳ್ಳೆಯ ಡ್ಯಾನ್ಸರ್ ಆಗಿರುವ ಇಮಾನ್ವಿ, ಇನ್​ಸ್ಟಾಗ್ರಾಂ, ಯೂಟ್ಯೂಬ್​ಗಳಲ್ಲಿ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಅಪ್​ಲೋಡ್ ಮಾಡುತ್ತಿರುತ್ತಾರೆ. ಸಿನಿಮಾದ ಮುಹೂರ್ತಕ್ಕೆ ಮುಂಚೆ ಇಮಾನ್ವಿಗೆ ಇನ್​ಸ್ಟಾಗ್ರಾಂನಲ್ಲಿ ಸುಮಾರು ಏಳು ಲಕ್ಷ ಫಾಲೋವರ್​ಗಳಿದ್ದರು. ಈಗ ಸಂಖ್ಯೆ ಹೆಚ್ಚಾಗಿದೆ. ಯೂಟ್ಯೂಬ್​ನಲ್ಲಿ 16 ಲಕ್ಷ ಸಬ್​ಸ್ಕ್ರೈಬರ್​ಗಳಿದ್ದರು. ಆ ಸಂಖ್ಯೆಯೂ ಈಗ ಹೆಚ್ಚಾಗಿದೆ.

ಇದನ್ನೂ ಓದಿ:ಪ್ರಭಾಸ್ ನಟನೆಯ ಎರಡು ಸಿನಿಮಾಗಳ ಮರು ಬಿಡುಗಡೆ

ಇಮಾನ್ವಿ, ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದ ‘ತಾಲ್’ ಸಿನಿಮಾದ ರಮ್ತಾ ಜೋಗಿ ಹಾಡಿಗೆ ಡ್ಯಾನ್ಸ್ ಮಾಡಿದ್ದ ಅವರ ವಿಡಿಯೋ ಬಹಳ ವೈರಲ್ ಆಯ್ತು. ತಮ್ಮ ಡ್ಯಾನ್ಸ್​ ವಿಡಿಯೋಗಳಿಗೆ ಸ್ವತಃ ಇಮಾನ್ವಿ ಅವರೇ ಕೊರಿಯೋಗ್ರಫಿ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಇವರ ತುಮ್-ತುಮ್ ಹಾಡಿನ ಡ್ಯಾನ್ಸ್ ಸಹ ಸಖತ್ ವೈರಲ್ ಆಗತ್ತು. 29 ವರ್ಷ ವಯಸ್ಸಿನ ಇಮಾನ್ವಿ ಜನಿಸಿದ್ದು ಭಾರತದಲ್ಲೇ ಆದರು ನೆಲೆಸಿರುವುದು ಅಮೆರಿಕದ ಲಾಸ್ ಏಂಜಲ್ಸ್​ನಲ್ಲಿ. ಅಲ್ಲಿ ಒಂದು ಡ್ಯಾನ್ಸ್ ಶಾಲೆ ಹಾಗೂ ಟ್ರೂಪ್​ ಅನ್ನು ಹೊಂದಿರುವ ಇಮಾನ್ವಿ, ಅಮೆರಿಕದ ಹಲವೆಡೆ ಡ್ಯಾನ್ಸ್ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ.

ಇಮಾನ್ವಿ, ಭರತ ನಾಟ್ಯ, ಕುಚುಪುಡಿ ಸೇರಿದಂತೆ ಹಲವು ಮಾದರಿಯ ನೃತ್ಯ ಪ್ರಾಕಾರಗಳಲ್ಲಿ ಪರಿಣಿತಿ ಹೊಂದಿದ್ದಾರೆ. ರಘು ಹನುಪುಡಿ ನಿರ್ದೇಶನ ಮಾಡುತ್ತಿರುವ ಪ್ರಭಾಸ್​ರ ಸಿನಿಮಾದಲ್ಲಿ ನಾಯಕಿಯ ನೃತ್ಯಗಾರ್ತಿ ಆಗಿರುತ್ತಾರೆ, ಹಾಗೂ ಸಿನಿಮಾದಲ್ಲಿ ನೃತ್ಯದ ಸಾಕಷ್ಟು ದೃಶ್ಯಗಳು ಇವೆ ಎನ್ನಲಾಗುತ್ತಿದೆ. ಅಲ್ಲದೆ ಇಮಾನ್ವಿಯ ಮುಖ ಸಹ ಮೃದು ಸ್ವಭಾವದ ಮುಗ್ಧ ಹುಡುಗಿಯ ಮುಖದಂತೆ ಇದೆ. ಹಾಗಾಗಿ ಇಮಾನ್ವಿಯನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ನಾಯಕಿಯಾಗಿ ಆಯ್ಕೆ ಮಾಡುವ ಮುನ್ನ ಹಲವು ಬಾರಿ ಸ್ಕ್ರೀನ್ ಟೆಸ್ಟ್, ಆಡಿಷನ್​ಗಳನ್ನು ಮಾಡಲಾಗಿದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್