‘ಪಠಾಣ್’ ಗೆದ್ದ ಖುಷಿಯಲ್ಲಿ ಜಾನ್ ಅಬ್ರಹಾಂ ಕೇಳಿದ್ದೆಲ್ಲ ಕೊಡಿಸಿದ್ದ ಶಾರುಖ್ ಖಾನ್

ಜಾನ್ ಅಬ್ರಹಾಂ ನಟನೆಯ ‘ವೇದ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸಾಧಾರಣ ಪ್ರತಿಕ್ರಿಯೆ ಪಡೆದಿದೆ. ಈ ಸಿನಿಮಾ ಬಗ್ಗೆ ಪ್ರಚಾರ ಮಾಡೋಕೆ ಜಾನ್ ಅಬ್ರಹಾಂ ಅವರು ನಾನಾ ಕಡೆಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈಗ ಅವರು ಶಾರುಖ್ ಖಾನ್ ಬಗ್ಗೆ ಮಾತನಾಡಿದ್ದಾರೆ.

‘ಪಠಾಣ್’ ಗೆದ್ದ ಖುಷಿಯಲ್ಲಿ ಜಾನ್ ಅಬ್ರಹಾಂ ಕೇಳಿದ್ದೆಲ್ಲ ಕೊಡಿಸಿದ್ದ ಶಾರುಖ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on:Aug 21, 2024 | 9:29 AM

ಶಾರುಖ್ ಖಾನ್ ಹಾಗೂ ಜಾನ್ ಅಬ್ರಹಾಂ ‘ಪಠಾಣ್’ ಸಿನಿಮಾದಲ್ಲಿ ಮುಖಾಮುಖಿ ಆಗಿದ್ದರು. ಜಾನ್ ಅಬ್ರಹಾಂ ಅವರು ಖಡಕ್ ವಿಲನ್ ಆಗಿ ಮಿಂಚಿದರೆ ಶಾರುಖ್ ಖಾನ್ ಅವರು ಸೈನಿಕನ ಪಾತ್ರದಲ್ಲಿ ಗಮನ ಸೆಳೆದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ ರೂಪಾಯಿ ಕ್ಲಬ್ ಸೇರಿದೆ. ವಿಶೇಷ ಎಂದರೆ ಈ ಸಿನಿಮಾ ಗೆದ್ದ ಖುಷಿಯಲ್ಲಿ ಟೀಂನವರು ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಡೆದ ಘಟನೆ ಬಗ್ಗೆ ಶಾರುಖ್ ಖಾನ್ ಅವರು ವಿವರಿಸಿದ್ದಾರೆ.

ಜಾನ್ ಅಬ್ರಹಾಂ ಅವರಿಗೆ ರಾತ್ರಿ ಬೇಗ ಮಲಗಿ ಅಭ್ಯಾಸ. ಹೀಗಾಗಿ, ಶಾರುಖ್ ಖಾನ್ ಪಾರ್ಟಿಯನ್ನು ಮಿಸ್ ಮಾಡುವ ಆಲೋಚನೆ ಅವರಿಗೆ ಇತ್ತು. ‘ಶಾರುಖ್ ಖಾನ್ ಜೊತೆ ನಾನು ನಟಿಸಿದ ಮೊದಲ ಸಿನಿಮಾ ಪಠಾಣ್. ಸಿನಿಮಾ ರಿಲೀಸ್ ಆದ ಬಳಿಕ ಸಕ್ಸಸ್ ಪಾರ್ಟಿ ಇಡಲಾಗಿತ್ತು. ಜಾನ್ ಅವರೇ ಬನ್ನಿ ಪಾರ್ಟಿ ಮಾಡೋಣ. ನಮ್ಮ ಸಿನಿಮಾ ಗೆದ್ದಿದೆ ಎಂದು ಶಾರುಖ್ ಹೇಳಿದ್ದರು. ನಾನು ಹೋಗಿ ನಿದ್ರಿಸಬೇಕು ಎಂದು ಹೇಳಿದೆ’ ಎಂದಿದ್ದಾರೆ ಜಾನ್ ಅಬ್ರಹಾಂ. ಈ ಮಾತಿಗೆ ಶಾರುಖ್ ಪ್ರತಿಕ್ರಿಯೆ ಕೇಳಿ ಜಾನ್ ಶಾಕ್ ಆಗಿದ್ದರು.

‘ನಿಮಗೆ ಏನು ಬೇಕು ಹೇಳಿ ಎಂದು ಶಾರುಖ್ ಕೇಳಿದರು. ಒಂದು ಬೈಕ್ ಕೊಡಿಸಿ ಎಂದು ಕೇಳಿದೆ. ನನಗೆ ಅವರು ಬೈಕ್ ಗಿಫ್ಟ್ ಮಾಡಿದರು. ನಾನು ಖುಷಿಯಿಂದ ಮನೆಗೆ ಹೋದೆ’ ಎಂದು ಶಾರುಖ್ ಖಾನ್ ಹೇಳಿದ್ದಾರೆ. ಝಾಕಿರ್ ಖಾನ್ ಅವರ ಶೋನಲ್ಲಿ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ‘ನಾನು ಸಾವನ್ನು ಮಾರಲ್ಲ’; ಅಜಯ್ ದೇವಗನ್, ಶಾರುಖ್​ಗೆ ಟಾಂಟ್ ಕೊಟ್ಟ ಜಾನ್ ಅಬ್ರಹಾಂ

ಜಾನ್ ಅಬ್ರಹಾಂ ನಟನೆಯ ‘ವೇದಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಚಿತ್ರ ಸಾಧಾರಣ ಯಶಸ್ಸು ಕಂಡಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 16 ಕೋಟಿ ರೂಪಾಯಿ ಬಾಚಿಕೊಂಡಿದೆ. ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:57 am, Wed, 21 August 24

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್