ಮಗಳಿಗೆ ಮಾತು ಕೊಟ್ಟಿದ್ದ ತಂದೆ, ಆ ತಂದೆಯ ಮಾತು ಈಡೇರಿಸಿದ ಚಿರಂಜೀವಿ

Megastar Chiranjeevi: ಮೆಗಾಸ್ಟಾರ್ ಚಿರಂಜೀವಿ, ಅಭಿಮಾನಿಗಳ ನಟ. ಇತರೆ ಸ್ಟಾರ್ ನಟರುಗಳಂತೆ ಜನರೊಟ್ಟಿಗೆ ಹೆಚ್ಚು ಅಂತರ ಕಾಯ್ದುಕೊಳ್ಳುವುದಿಲ್ಲ. ಚಿರಂಜೀವಿಯನ್ನು ನೋಡಲು ಕೆಲವರು ಪಾದಯಾತ್ರೆ ಮಾಡುತ್ತಾ, ಕೆಲವರು ನೂರಾರು ಕಿ.ಮೀ ಸೈಕಲ್ ತುಳಿಯುತ್ತ ಬರುತ್ತಾರೆ ಎಲ್ಲರನ್ನೂ ಪ್ರೀತಿಯಿಂದ ಎದುರುಗೊಂಡು ಮನೆಯಲ್ಲಿ ಊಟ ಮಾಡಿಸಿ ಕಳಿಸುತ್ತಾರೆ ನಟ. ಇದೀಗ ತಂದೆಯೊಬ್ಬ ತಮ್ಮ ಮಗಳಿಗೆ ಕೊಟ್ಟಿದ್ದ ಮಾತನ್ನು ಈಡೇರಿಸಲು ಮೆಗಾಸ್ಟಾರ್ ಚಿರಂಜೀವಿ ನೆರವಾಗಿದ್ದಾರೆ.

ಮಗಳಿಗೆ ಮಾತು ಕೊಟ್ಟಿದ್ದ ತಂದೆ, ಆ ತಂದೆಯ ಮಾತು ಈಡೇರಿಸಿದ ಚಿರಂಜೀವಿ
Megastar Chiranjeevi

Updated on: May 22, 2026 | 11:56 AM

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ಅಭಿಮಾನಿಗಳ ನಟ. ಇತರೆ ಸ್ಟಾರ್ ನಟರುಗಳಂತೆ ಜನರೊಟ್ಟಿಗೆ ಹೆಚ್ಚು ಅಂತರ ಕಾಯ್ದುಕೊಳ್ಳುವುದಿಲ್ಲ. ಚಿರಂಜೀವಿಯನ್ನು ನೋಡಲು ಕೆಲವರು ಪಾದಯಾತ್ರೆ ಮಾಡುತ್ತಾ, ಕೆಲವರು ನೂರಾರು ಕಿ.ಮೀ ಸೈಕಲ್ ತುಳಿಯುತ್ತ ಬರುತ್ತಾರೆ ಎಲ್ಲರನ್ನೂ ಪ್ರೀತಿಯಿಂದ ಎದುರುಗೊಂಡು ಮನೆಯಲ್ಲಿ ಊಟ ಮಾಡಿಸಿ ಕಳಿಸುತ್ತಾರೆ ನಟ. ಇದೀಗ ತಂದೆಯೊಬ್ಬ ತಮ್ಮ ಮಗಳಿಗೆ ಕೊಟ್ಟಿದ್ದ ಮಾತನ್ನು ಈಡೇರಿಸಲು ಮೆಗಾಸ್ಟಾರ್ ಚಿರಂಜೀವಿ ನೆರವಾಗಿದ್ದಾರೆ.

ತೆಲಂಗಾಣದ ಎಮ್ ರುಶಿ, ಇತ್ತೀಚೆಗೆ ಫಲಿತಾಂಶ ಪ್ರಕಟವಾದ TEGAPCET ಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಸಂಪಾದಿಸಿದ್ದಾರೆ. ರುಶಿ, ಮೆಗಾಸ್ಟಾರ್ ಚಿರಂಜೀವಿ ಅವರ ಅಪ್ಪಟ ಅಭಿಮಾನಿ. ಪರೀಕ್ಷೆಗೂ ಮುನ್ನ ಅವರ ರುಶಿ ಅವರ ತಂದೆ ಮಗಳಿಗೆ ಮಾತು ಕೊಟ್ಟಿದ್ದರಂತೆ, ‘ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬಂದರೆ ಚಿರಂಜೀವಿ ಅವರನ್ನು ಭೇಟಿ ಮಾಡಿಸುತ್ತೇನೆ’ ಎಂದು. ಆದರಂತೆ ಚೆನ್ನಾಗಿ ಓದಿದ ರುಶಿ, ತೆಲಂಗಾಣ ರಾಜ್ಯ ಎಂಜಿನಿಯರಿಂಗ್, ಕೃಷಿ ಮತ್ತು ವೈದ್ಯಕೀಯ ಸಿಇಟಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕು ಗಳಿಸಿದ್ದಾರೆ.

ಇದನ್ನೂ ಓದಿ:ಹಿಂದಿ ಟಿವಿ ಚಾನೆಲ್​​ಗಳ ಉಳಿಸಿದ್ದು ಮೆಗಾಸ್ಟಾರ್ ಚಿರಂಜೀವಿ: ಕ್ರೇಜ್ ಹೇಗಿತ್ತು ಗೊತ್ತೆ?

ಮಗಳಿಗೆ ಕೊಟ್ಟಿದ್ದ ಮಾತು ಉಳಿಸಲು ರುಶಿ ಅವರ ತಂದೆ ಚಿರಂಜೀವಿ ಅವರನ್ನು ಅವರಿವರ ನೆರವಿನ ಮೂಲಕ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಜನಾನುರಾಗಿ ಆಗಿರುವ ಚಿರಂಜೀವಿ ಕೂಡಲೇ ಒಪ್ಪಿಗೆ ಸೂಚಿಸಿ, ರುಶಿ ಹಾಗೂ ಅವರ ಪೋಷಕರನ್ನು ಮನೆಗೆ ಆಹ್ವಾನಿಸಿದ್ದಾರೆ. ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ರುಶಿಯನ್ನು ಖುದ್ದು ಚಿರಂಜೀವಿ ಅವರು ಸನ್ಮಾನ ಮಾಡಿದ್ದು ಮಾತ್ರವೇ ಅಲ್ಲದೆ, ಯುವತಿಗೆ ಲ್ಯಾಪ್​ಟಾಪ್ ಒಂದನ್ನು ಉಡುಗೊರೆಯಾಗಿ ನೀಡಿ ಮುಂದಿನ ವಿಧ್ಯಾಭ್ಯಾಸಕ್ಕೆ ಶುಭ ಹಾರೈಸಿದ್ದಾರೆ. ಚಿರಂಜೀವಿ ಅವರು ರುಶಿಯನ್ನು ಭೇಟಿ ಮಾಡಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಮೆಗಾಸ್ಟಾರ್ ಚಿರಂಜೀವಿ ಇದೀಗ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಟನೆಯ ಹೊಸ ಸಿನಿಮಾ ಒಂದು ಇತ್ತೀಚೆಗಷ್ಟೆ ಸೆಟ್ಟೇರಿದ್ದು ಕೆವಿಎನ್ ಪ್ರೊಡಕ್ಷನ್ಸ್​​ನವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅದರ ಜೊತೆಗೆ ನಟ ನಾನಿ ನಿರ್ಮಾಣ ಮಾಡುತ್ತಿರುವ ಮತ್ತೊಂದು ಸಿನಿಮಾನಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ‘ವಿಶ್ವಂಭರ’ ಹೆಸರಿನ ಮತ್ತೊಂದು ಸಿನಿಮಾನಲ್ಲಿ ಚಿರಂಜೀವಿ ನಟಿಸಿದ್ದು ಆ ಸಿನಿಮಾ ಸಹ ಶೀಘ್ರವೇ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us