ಬಿಗ್ ಬಾಸ್ ಗ್ಯಾಂಗ್ ಜೊತೆ ಭರ್ಜರಿ ಪಾರ್ಟಿ; ವಿಡಿಯೋ ವೈರಲ್
ಮೈಕಲ್ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ‘ಗುಂಪು ಪಾರ್ಟಿ ವಿಡಿಯೋ’ ಎನ್ನುವ ಶೀರ್ಷಿಕೆ ನೀಡಿದ್ದಾರೆ. ಜೊತೆಗೆ ಯಾರ ಸ್ವಭಾವ ಯಾವ ರೀತಿ ಎಂಬುದನ್ನು ಅವರು ವಿವರಿಸಿದ್ದಾರೆ. ಈ ಪಾರ್ಟಿಯಲ್ಲಿ ವಿನಯ್, ಮೈಕಲ್, ರಕ್ಷಕ್, ನಮ್ರತಾ, ಈಶಾನಿ , ಪವಿ ಇದ್ದರು.

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ (BBK 10) ಗುಂಪುಗಾರಿಕೆ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಇದಕ್ಕೆ ಕಾರಣ ಆಗಿದ್ದು ವಿನಯ್ ಗೌಡ. ಅವರು ತಮ್ಮದೇ ಒಂದು ಗ್ಯಾಂಗ್ ಕಟ್ಟಿಕೊಂಡಿದ್ದರು. ಇದರಲ್ಲಿ ಪ್ರಮುಖವಾಗಿ ಹೈಲೈಟ್ ಆದವರು ವಿನಯ್ ಗೌಡ, ಮೈಕಲ್ ಅಜಯ್, ರಕ್ಷಕ್ ಬುಲೆಟ್, ನಮ್ರತಾ ಗೌಡ, ಈಶಾನಿ, ಪವಿ ಪೂವಪ್ಪ (ವೈಲ್ಡ್ ಕಾರ್ಡ್ ಎಂಟ್ರಿ) ಹಾಗೂ ಸ್ನೇಹಿತ್ ಗೌಡ. ಬಿಗ್ ಬಾಸ್ ಮುಗಿದ ಬಳಿಕವೂ ಇವರು ಬೇಟಿ ಆಗುತ್ತಿದ್ದಾರೆ. ಈಗ ಸ್ನೇಹಿತ್ನ ಹೊರತುಪಡಿಸಿ ವಿನಯ್ ಗುಂಪಿನ ಉಳಿದ ಎಲ್ಲರೂ ಪಾರ್ಟಿ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋನ ಮೈಕಲ್ ಅವರು ಯೂಟ್ಯೂಬ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮೈಕಲ್ ಅಜಯ್, ರಕ್ಷಕ್, ನಮ್ರತಾ ಹಾಗೂ ವಿನಯ್ ಅವರು ಇತ್ತೀಚೆಗೆ ಮೈಸೂರಿಗೆ ತೆರಳಿದ್ದರು. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದರು. ಇದಾದ ಬಳಿಕ ಅಭಿಮಾನಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಎಲ್ಲರ ಸೆಲ್ಫಿಗೆ ಪೋಸ್ ನೀಡಿದ್ದರು. ಈಗ ಪಾರ್ಟಿ ಸಮಯ. ಈ ಸಂದರ್ಭದ ವಿಡಿಯೋನ ಮೈಕಲ್ ಶೇರ್ ಮಾಡಿಕೊಂಡಿದ್ದಾರೆ.
ಮೈಕಲ್ ಹಂಚಿಕೊಂಡ ವಿಡಿಯೋ..
View this post on Instagram
ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಒಂದನ್ನು ಹಂಚಿಕೊಂಡಿದ್ದಾರೆ ಮೈಕಲ್. ಅದಕ್ಕೆ ‘ಗುಂಪು ಪಾರ್ಟಿ ವಿಡಿಯೋ’ ಎಂದು ಶೀರ್ಷಿಕೆ ನೀಡಿದ್ದಾರೆ. ಜೊತೆಗೆ ಯಾರ ಸ್ವಭಾವ ಯಾವ ರೀತಿ ಎಂಬುದನ್ನು ಅವರು ವಿವರಿಸಿದ್ದಾರೆ. ಈ ಪಾರ್ಟಿಯಲ್ಲಿ ವಿನಯ್, ಮೈಕಲ್, ರಕ್ಷಕ್, ಈಶಾನಿ, ನಮ್ರತಾ, ಪವಿ ಇದ್ದರು. ಈ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: ‘ಮೈಸೂರಲ್ಲಿ ಸಿಕ್ತೀವಿ, ಎಲ್ಲರಿಗೂ ಸೆಲ್ಫಿ ಕೊಡ್ತೀವಿ’; ಮಾಹಿತಿ ಕೊಟ್ಟ ವಿನಯ್, ನಮ್ರತಾ, ಮೈಕಲ್
ಮೈಕಲ್ ಅಜಯ್ ಅವರಿಗೆ ಬಿಗ್ ಬಾಸ್ ಮನೆಯಿಂದ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರು ಮಣ್ಣಿನ ಮಗ ಎಂದೇ ಫೇಮಸ್ ಆಗಿದ್ದಾರೆ. ವಿಶೇಷ ಎಂದರೆ ಬಿಗ್ ಬಾಸ್ನಿಂದ ಬಂದ ಬಳಿಕ ಅವರು ‘ಮಣ್ಣಿನ ಮಗ’ ಎಂದು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ ಅವರ ಟ್ಯಾಟೂ ಸ್ಟುಡಿಯೋದಲ್ಲಿ ಈ ಟ್ಯಾಟೂನ ಅವರು ಹಾಕಿಸಿಕೊಂಡಿದ್ದಾರೆ. ಇನ್ನು, ವಿನಯ್, ನಮ್ರತಾ ಮೊದಲಾದವರ ಖ್ಯಾತಿ ಕೂಡ ಹೆಚ್ಚಿದೆ. ರಕ್ಷಕ್ ಅವರು ಬಿಗ್ ಬಾಸ್ ಬಗ್ಗೆ ಹಾಗೂ ಸುದೀಪ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ವಿವಾದ ಮಾಡಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




