AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳ ಸಿನಿಮಾಗೆ ಅಪ್ಪನದ್ದೇ ಬಂಡವಾಳ; ಶ್ರುತಿ ಹಾಸನ್​ಗೆ ಸಿಕ್ತು ದೊಡ್ಡ ಆಫರ್

ಕಮಲ್ ಹಾಸನ್ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅವರು ನಿರ್ಮಾಣ ಮಾಡಿದ ‘ವಿಕ್ರಮ್’ ಸಿನಿಮಾ ದೊಡ್ಡ ಗೆಲುವು ಕಂಡಿದೆ. ಈ ಚಿತ್ರದಲ್ಲಿ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದರು. ಈ ಸಿನಿಮಾ ಗೆದ್ದ ಬಳಿಕ ಅವರು ಹೊಸ ಹೊಸ ಸಿನಿಮಾ ಘೋಷಣೆ ಮಾಡುತ್ತಿದ್ದಾರೆ.

ಮಗಳ ಸಿನಿಮಾಗೆ ಅಪ್ಪನದ್ದೇ ಬಂಡವಾಳ; ಶ್ರುತಿ ಹಾಸನ್​ಗೆ ಸಿಕ್ತು ದೊಡ್ಡ ಆಫರ್
ಶ್ರುತಿ ಹಾಸನ್-ಲೋಕೇಶ್​
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 08, 2024 | 8:05 AM

Share

ನಟಿ ಶ್ರುತಿ ಹಾಸನ್ (Shruti Haasan) ಅವರು ಭಿನ್ನವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಕಮಲ್ ಹಾಸನ್ ಮಗಳಾದರೂ ಎಲ್ಲಿಯೂ ತಂದೆಯ ಹೆಸರನ್ನು ಉಪಯೋಗಿಸಿಕೊಂಡಿಲ್ಲ. ‘ನಾನು ಕಮಲ್ ಹಾಸನ್ ಮಗಳು. ನನಗೆ ಚಾನ್ಸ್’ ನೀಡಿ ಎಂದು ಯಾರಲ್ಲೂ ಕೇಳಿಲ್ಲ. ‘ಅಪ್ಪ ನನಗೆ ದೊಡ್ಡ ಬಜೆಟ್ ಸಿನಿಮಾ ಕೊಡಿಸು’ ಎಂದು ಅವರು ಕಮಲ್ ಹಾಸನ್ ಬಳಿ ಹೋಗಿ ಮನವಿ ಮಾಡಿಲ್ಲ. ತಮ್ಮ ಸ್ವಂತ ಪರಿಶ್ರಮದಿಂದ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಈಗ ಕಮಲ್ ಹಾಸನ್ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಶ್ರುತಿ ಹಾಸನ್​ಗೆ ಸಿಕ್ಕಿದೆ. ಹಾಗಂತ ಇದು ವದಂತಿ ಅಲ್ಲ. ಈ ಬಗ್ಗೆ ಕಮಲ್ ಹಾಸನ್ ಕಡೆಯಿಂದಲೇ ಅಧಿಕೃತ ಘೋಷಣೆ ಆಗಿದೆ.

‘ರಾಜ್ ಕಮಲ್ ಫಿಲ್ಮ್ಸ್ ಇಂಟರ್​ನ್ಯಾಷನಲ್’ ಮೂಲಕ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಕಮಲ್ ಹಾಸನ್. ಅವರ ನಿರ್ಮಾಣದಲ್ಲೇ ಮೂಡಿ ಬಂದ ‘ವಿಕ್ರಮ್’ ಸಿನಿಮಾ ದೊಡ್ಡ ಗೆಲುವು ಕಂಡಿತ್ತು. ಈ ಚಿತ್ರದಲ್ಲಿ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದರು. ಈ ಸಿನಿಮಾ ಗೆದ್ದ ಬಳಿಕ ಅವರು ಹೊಸ ಹೊಸ ಸಿನಿಮಾ ಘೋಷಣೆ ಮಾಡುತ್ತಿದ್ದಾರೆ. ಈಗ ಅವರು ಮಗಳಿಗಾಗಿ ಒಂದು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಲೋಕೇಶ್ ಕನಗರಾಜ್ ಅವರು ‘ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್’ ನಿರ್ಮಾಣ ಮಾಡಿದ್ದಾರೆ. ಇದರ ಅಡಿಯಲ್ಲಿ ‘ಕೈದಿ’, ‘ವಿಕ್ರಮ್’ ಹಾಗೂ ‘ಲಿಯೋ’ ಸಿನಿಮಾ ಮೂಡಿ ಬಂದಿದೆ. ಈಗ ಅವರು ಶ್ರುತಿ ಹಾಸನ್ ಜೊತೆ ಕೆಲಸ ಮಾಡುತ್ತಿದ್ದು ಇದು ಕೂಡ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ ಅಡಿಯಲ್ಲಿ ಸಿದ್ಧವಾಗಲಿದೆಯೇ ಎನ್ನುವ ಕುತೂಹಲ ಮೂಡಿದೆ. ಕೆಲವು ಮೂಲಗಳ ಪ್ರಕಾರ ಇದು ಪ್ರತ್ಯೇಕ ಸಿನಿಮಾ ಎಂದು ಹೇಳಲಾಗುತ್ತಿದೆ.

ಇದು ಮಹಿಳಾ ಪ್ರಧಾನ ಸಿನಿಮಾ ಆಗಿರಲಿದೆ. ಶ್ರುತಿ ಹಾಸನ್ ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಸದ್ಯ ಪೋಸ್ಟರ್​ನಲ್ಲಿ ಶ್ರುತಿ ಹಾಸನ್ ಹಾಗೂ ಲೋಕೇಶ್ ಕನಗರಾಜ್ ಎದುರು ಬದುರು ನಿಂತಿದ್ದಾರೆ. ಹಿಂಭಾಗದಲ್ಲಿ ಸಂಪೂರ್ಣ ಕತ್ತಲಿದೆ. ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬರಲಿದೆ, ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಮಗಳಿಗಾಗಿ ಕಮಲ್ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಇದೇ ಮೊದಲು ಅನ್ನೋದು ವಿಶೇಷ.

ಇದನ್ನೂ ಓದಿ: ‘ಸಲಾರ್​’ ನಟಿ ಶ್ರುತಿ ಹಾಸನ್​ ಗುಟ್ಟಾಗಿ ಮದುವೆ ಆಗಿದ್ದಾರಾ? ಸ್ಪಷ್ಟನೆ ನೀಡಿದ ಕಮಲ್​ ಪುತ್ರಿ

ಶ್ರುತಿ ಹಾಸನ್ ನಟನೆಯ ‘ಸಲಾರ್’ ಸಿನಿಮಾ ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಯಿತು. ಈ ಚಿತ್ರ ದೊಡ್ಟ ಮಟ್ಟದಲ್ಲಿ ಹೈಪ್ ಪಡೆದುಕೊಂಡಿತ್ತು. ಪ್ರಭಾಸ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಪ್ರಶಾಂತ್ ನೀಲ್ ಅವರು ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳಿದ್ದರು. ಈ ಸಿನಿಮಾ ‘ಕೆಜಿಎಫ್ 2’ ಚಿತ್ರದಷ್ಟು ದೊಡ್ಡ ಗೆಲುವು ಕಂಡಿಲ್ಲ. ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ 700 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾದಿಂದ ಶ್ರುತಿ ಖ್ಯಾತಿ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್