‘ಎಂಥ ಮನುಷ್ಯನಿಗೂ ದುಃಖ ಆಗುತ್ತದೆ’; ದೊಡ್ಮನೆಗೆ ಮರಳಿ ಗಳಗಳನೆ ಅತ್ತ ಮೈಕಲ್ ಅಜಯ್

ದೊಡ್ಮನೆಗೆ ಮರಳುತ್ತಿದ್ದಂತೆ ಮೈಕಲ್ ಕಣ್ಣೀರು ಹಾಕಿದ್ದಾರೆ. ‘ಮೈಕಲ್ ಅಜಯ್ ಅಳುತ್ತಿರುವುದನ್ನು ನೋಡುತ್ತಿರುವುದು ಇದೇ ಮೊದಲು’ ಎಂದು ಕೆಲ ಸ್ಪರ್ಧಿಗಳು ಹೇಳಿದ್ದಾರೆ.  

‘ಎಂಥ ಮನುಷ್ಯನಿಗೂ ದುಃಖ ಆಗುತ್ತದೆ’; ದೊಡ್ಮನೆಗೆ ಮರಳಿ ಗಳಗಳನೆ ಅತ್ತ ಮೈಕಲ್ ಅಜಯ್
ಮೈಕಲ್

Updated on: Dec 26, 2023 | 7:31 AM

ಬಿಗ್ ಬಾಸ್​ನ ಭಾನುವಾರದ (ಡಿಸೆಂಬರ್ 24) ಎಪಿಸೋಡ್​ನಲ್ಲಿ ಮೈಕಲ್ ಅಜಯ್ (Michael Ajay) ಹಾಗೂ ಅವಿನಾಶ್ ಶೆಟ್ಟಿ ಇಬ್ಬರೂ ಎಲಿಮಿನೇಟ್ ಆದ ರೀತಿಯಲ್ಲಿ ತೋರಿಸಲಾಯಿತು. ಆದರೆ, ಸೋಮವಾರದ (ಡಿಸೆಂಬರ್ 25) ಎಪಿಸೋಡ್​ನಲ್ಲಿ ಮೈಕಲ್ ಮರಳಿ ಬಂದಿರುವುದನ್ನು ತೋರಿಸಲಾಗಿದೆ. ಅವರು ದೊಡ್ಮನೆಗೆ ಬರಬೇಕು ಅನ್ನೋದು ಎಲ್ಲರ ಕೋರಿಕೆ ಆಗಿತ್ತು. ಈ ಕೋರಿಕೆಯನ್ನು ಬಿಗ್ ಬಾಸ್ ಈಡೇರಿಸಿದ್ದಾರೆ. ಅವರು ದೊಡ್ಮನೆಗೆ ಮರಳುತ್ತಿದ್ದಂತೆ ಕಣ್ಣೀರು ಹಾಕಿದ್ದಾರೆ. ‘ಮೈಕಲ್ ಅಜಯ್ ಅಳುತ್ತಿರುವುದನ್ನು ನೋಡುತ್ತಿರುವುದು ಇದೇ ಮೊದಲು’ ಎಂದು ಕೆಲ ಸ್ಪರ್ಧಿಗಳು ಹೇಳಿದ್ದಾರೆ.

ಮೈಕಲ್ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಕಲಿಯುವತ್ತ ಅವರು ಹಾಕುತ್ತಿರುವ ಶ್ರಮ ಅನೇಕರಿಗೆ ಇಷ್ಟ ಆಗಿದೆ. ಇದು ಬಿಗ್ ಬಾಸ್​ನ ಪಯಣಕ್ಕೆ ಮೈಲೇಜ್ ನೀಡಿದೆ. ಕನ್ನಡ ಕಲಿಕೆ ವಿಚಾರದಲ್ಲಿ ಸುದೀಪ್ ಅವರಿಂದ ಮೈಕಲ್ ‘ಕಿಚ್ಚನ ಚಪ್ಪಾಳೆ’ ಕೂಡ ಪಡೆದಿದ್ದಾರೆ. ಕಳೆದ ವೀಕೆಂಡ್​ನಲ್ಲಿ ಮೈಕಲ್ ಅವರು ಒಮ್ಮೆ ಬಿಗ್ ಬಾಸ್​ನಿಂದ ಹೊರ ಹೋಗಿ ಒಳಗೆ ಬಂದಿದ್ದಾರೆ. ಈ ಪ್ರಕ್ರಿಯೆ ಅವರಿಗೆ ಶಾಕ್ ನೀಡಿದೆ. ಸದಾ ಚಿಲ್ ಆಗಿ ಇರುತ್ತಿದ್ದ ಅವರು ಕೂಡ ಕಣ್ಣೀರು ಹಾಕಿದ್ದಾರೆ. ಇದನ್ನು ನೋಡಿ ಮನೆ ಮಂದಿ ಅಚ್ಚರಿಗೊಂಡಿದ್ದಾರೆ.

ಮೈಕಲ್ ಅವರು ಮರಳಿ ಬಂದಿದ್ದನ್ನು ನೊಡಿ ಮನೆಯವರಿಗೆ ಖುಷಿ ಆಯಿತು. ಅವರನ್ನು ಸ್ವಾಗತಿಸಿದರು. ‘ನಿಮ್ಮ ವಾಸ್ತವ್ಯ ಈ ಮನೆಯಲ್ಲಿ ಮುಂದುವರಿಯುತ್ತಿದೆ’ ಎಂದು ಬಿಗ್ ಬಾಸ್ ಕೂಡ ಘೋಷಣೆ ಮಾಡಿದರು. ಈ ಘೋಷಣೆ ಬೆನ್ನಲ್ಲೇ ಎಲ್ಲರೂ ಮೈಕಲ್​ನ ಸ್ವಾಗತಿಸಿದರು. ‘ಕೆಲವೊಮ್ಮೆ ಜೀವನದಲ್ಲಿ ನಮ್ಮ ನಿಯಂತ್ರಣದಲ್ಲಿ ಯಾವುದೂ ಇರುವುದಿಲ್ಲ’ ಎಂದರು ಮೈಕಲ್. ಈ ವೇಳೆ ಅವರು ಅಳುತ್ತಿದ್ದರು.

ಇದನ್ನೂ ಓದಿ: ತಮ್ಮ ತಂಡದ ಲೀಡರ್ ಸಂಗೀತಾ ವಿರುದ್ಧವೇ ತಿರುಗಿ ಬಿದ್ದ ಮೈಕಲ್​; ಕಣ್ಣೀರಿಟ್ಟ ಚಾರ್ಲಿ ಬೆಡಗಿ

ಮೈಕಲ್ ಕಣ್ಣೀರು ಹಾಕುವುದನ್ನು ತುಕಾಲಿ ಸಂತೋಷ್ ಗಮನಿಸಿದರು. ‘ಅಣ್ಣ ನೀನು ಅಳುತ್ತಾ ಇದ್ದೀಯಾ? ನೀನೆ ಅತ್ತರೆ ಹೇಗೆ? ನಿನ್ನನ್ನೇ ನಾವು ಮಾದರಿ ಆಗಿ ಇಟ್ಟುಕೊಂಡಿದ್ದೇವೆ’ ಎಂದರು ತುಕಾಲಿ ಸಂತೋಷ್. ‘ಎಂಥ ಮನುಷ್ಯನಿಗೂ ದುಃಖ ಆಗುತ್ತದೆ. ಎಲ್ಲರಿಗೂ ಭಾವನೆಗಳು ಇರುತ್ತವೆ’ ಎಂದರು ವರ್ತೂರು ಸಂತೋಷ್. ಅವಿನಾಶ್ ಶೆಟ್ಟಿಗೆ ಕೊನೆಯದಾಗಿ ಬೈ ಹೇಳಲೂ ಸಾಧ್ಯವಾಗಿಲ್ಲ ಎನ್ನುವ ಕೊರಗು ಮೈಕಲ್​ಗೆ ಕಾಡಿದೆ. ಹೀಗಾಗಿ ಅವರು ಅತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ