‘ಕೆಸಿಸಿ’ ನಾಲ್ಕನೇ ಸೀಸನ್ ವಿನ್ನರ್ ‘ಗಂಗ ವಾರಿಯರ್ಸ್’; ಶಿವಣ್ಣನ ತಂಡಕ್ಕೆ ಫೈನಲ್ನಲ್ಲಿ ಸೋಲು
KCC Season 4 Winners: ಗಣೇಶ್ ಅವರಿಗೆ ಕನ್ನಡ ಚಲನಚಿತ್ರ ಕಪ್ ಅನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಡಿದರು. ಈ ವೇಳೆ ಸುದೀಪ್, ದುನಿಯಾ ವಿಜಯ್, ಶಿವಣ್ಣ ಕೂಡ ಹಾಜರಿದ್ದರು.
ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳೆ ನಡೆಸುವ ಕನ್ನಡ ಚಲನಚಿತ್ರ ಕಪ್ನ ನಾಲ್ಕನೇ ಆವೃತ್ತಿಯ ಫೈನಲ್ ಪಂದ್ಯ ಸೋಮವಾರ (ಡಿಸೆಂಬರ್ 25) ನಡೆಯಿತು. ಫೈನಲ್ ಪಂದ್ಯದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Golde Star Ganesh) ನಾಯಕತ್ವದ ‘ಗಂಗ ವಾರಿಯರ್ಸ್’ ತಂಡ ಶಿವರಾಜ್ಕುಮಾರ್ ನಾಯಕತ್ವದ ‘ರಾಷ್ಟ್ರಕೂಟ ಪ್ಯಾಂತರ್ಸ್’ ತಂಡವನ್ನು ನಾಲ್ಕು ರನ್ಗಳಿಂದ ಮಣಿಸಿದೆ. ಈ ಮೂಲಕ ಗಣೇಶ್ ತಂಡ ನಾಲ್ಕನೇ ಸೀಸನ್ನ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿಸೆಂಬರ್ 23, ಡಿಸೆಂಬರ್ 24 ಹಾಗೂ ಡಿಸೆಂಬರ್ 25ರಂದು ಕೆಸಿಸಿ ಪಂದ್ಯಗಳು ನಡೆದವು. ಗಣೇಶ್, ಸುದೀಪ್, ದುನಿಯಾ ವಿಜಯ್ ಸೇರಿ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಿದ್ದರು. ಗಣೇಶ್ ತಂಡ ಲೀಗ್ ಮ್ಯಾಚ್ನಲ್ಲಿ ಐದು ಪಂದ್ಯಗಳ ಪೈಕಿ ನಾಲ್ಕು ಮ್ಯಾಚ್ನ ಗೆದ್ದಿತ್ತು. ಫಿನಾಲೆ ತಲುಪಿ ಕಪ್ ಗೆದ್ದಿದೆ.
ಶಿವಣ್ಣನ ನಾಯಕತ್ವದ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಗಂಗಾ ವಾರಿಯ್ಸ್ ತಂಡ 10 ಓವರ್ನಲ್ಲಿ ಐದು ವಿಕೆಟ್ ನಷ್ಟಕ್ಕೆ 111 ರನ್ಗಳನ್ನು ಕಲೆ ಹಾಕಿತು. ರಾಷ್ಟ್ರಕೂಟ ತಂಡವು ಉತ್ತಮ ಆರಂಭವನ್ನೇ ಕಂಡಿತು. ಆದರೆ, ಟಾರ್ಗೆಟ್ ರೀಚ್ ಆಗುವ ಮೊದಲು ಸೋಲು ಒಪ್ಪಿದರು.
Team Ganesh won the KCC cup 🏆 🥳💥#Gangawarriors won KCC FINALS!! 🥳🥳#Gangawarriors vs #Rashtrakotapanthers #KCCpartIV #KCCpart4 #KCC4 #finals #shivanna #KicchaSudeep pic.twitter.com/Nb4MkVR702
— Gk (@Ggk_here) December 25, 2023
ಇದನ್ನೂ ಓದಿ: ಬಿಡುಗಡೆಗೆ ಹತ್ತಿರವಾಗುತ್ತಿದೆ ‘ಗೋಲ್ಡನ್ ಸ್ಟಾರ್’ ಗಣೇಶ್ ನಟನೆಯ ಹೊಸ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’
Team Ganesh won the KCC cup 🏆 🥳💥#Gangawarriors won KCC FINALS!! 🥳🥳#Gangawarriors vs #Rashtrakotapanthers #KCCpartIV #KCCpart4 #KCC4 #finals #shivanna #KicchaSudeep pic.twitter.com/Nb4MkVR702
— Gk (@Ggk_here) December 25, 2023
ಗಣೇಶ್ ಅವರಿಗೆ ಕನ್ನಡ ಚಲನಚಿತ್ರ ಕಪ್ ಅನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಡಿದರು. ಈ ವೇಳೆ ಸುದೀಪ್, ದುನಿಯಾ ವಿಜಯ್, ಶಿವಣ್ಣ ಕೂಡ ಹಾಜರಿದ್ದರು. ಸಿನಿಮಾ ಕೆಲಸಗಳ ಮಧ್ಯೆ ಬ್ರೇಕ್ ಪಡೆದು ಕೆಲವು ದಿನಗಳ ಕಾಲ ಆಟದತ್ತ ಸೆಲೆಬ್ರಿಟಿಗಳು ಗಮನ ಹರಿಸಿದ್ದಾರೆ. ಸೆಲೆಬ್ರಿಟಿಗಳು ಕ್ರಿಕೆಟ್ ಆಡುವುದನ್ನು ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:35 am, Tue, 26 December 23