‘ಇದು ಫೈಟ್ ಅಲ್ಲ, ಗೇಮ್ ಅಷ್ಟೇ’; ಕೆಸಿಸಿ ಕಪ್ಗೆ ರೆಡಿ ಆದ ಶಿವರಾಜ್ಕುಮಾರ್
ಕೆಸಿಸಿ ನಡೆಯುವಾಗ ಒಂದಷ್ಟು ಹೀರೋಗಳು ಬರುವುದಿಲ್ಲ. ಇದಕ್ಕೆ ಹಲವು ಕಾರಣಗಳು ಇರುತ್ತವೆ. ಈ ಬಗ್ಗೆ ಯಾವಾಗಲೂ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಶಿವಣ್ಣ ಈ ಬಗ್ಗೆ ಮಾತನಾಡಿದ್ದಾರೆ.
ಕೆಸಿಸಿ (KCC) ಕಪ್ನ ಮೂರನೇ ಸೀಸನ್ ಆರಂಭಕ್ಕೆ ದಿನ ಗಣನೆ ಶುರುವಾಗಿದೆ. ಚಿತ್ರರಂಗದ ಅನೇಕರು ಇದರಲ್ಲಿ ಭಾಗಿ ಆಗುತ್ತಾರೆ. ದೊಡ್ಡ ಪರದೆ ಮೇಲೆ ಅಬ್ಬರಿಸುವ ಕಲಾವಿದರು ಮೈದಾನದಲ್ಲಿ ಕ್ರಿಕೆಟ್ ಆಡುವುದನ್ನು ನೋಡಲು ಫ್ಯಾನ್ಸ್ ಕೂಡ ಕಾದಿರುತ್ತಾರೆ. ಕೆಲವು ಹೀರೋಗಳು ಇದಕ್ಕೆ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಶಿವರಾಜ್ಕುಮಾರ್ ಅವರು ಇಂದು (ಡಿಸೆಂಬರ್ 15) ಮುಂಜಾನೆಯೇ ಮೈದಾನಕ್ಕೆ ಇಳಿದಿದ್ದಾರೆ. ಅವರು ಕ್ರಿಕೆಟ್ ಪ್ರಾಕ್ಟಿಸ್ ಮಾಡಿದ್ದಾರೆ. ಆಟದ ಮಧ್ಯೆ ಬಿಡುವು ಮಾಡಿಕೊಂಡು ಗೇಮ್ ಬಗ್ಗೆ ಒಂದಷ್ಟು ವಿಚಾರಗಳನ್ನು ಅವರು ಟಿವಿ9 ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.
ಎಲ್ಲರೂ ಬರೋಕೆ ಆಗಲ್ಲ..
ಕೆಸಿಸಿ ನಡೆಯುವಾಗ ಒಂದಷ್ಟು ಹೀರೋಗಳು ಬರುವುದಿಲ್ಲ. ಇದಕ್ಕೆ ಹಲವು ಕಾರಣಗಳು ಇರುತ್ತವೆ. ಈ ಬಗ್ಗೆ ಯಾವಾಗಲೂ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಶಿವಣ್ಣ ಈ ಬಗ್ಗೆ ಮಾತನಾಡಿದ್ದಾರೆ. ‘ಎಲ್ಲರೂ ಅವರದ್ದೇ ಆದ ಕೆಲಸದಲ್ಲಿ ಬ್ಯುಸಿ ಇರ್ತಾರೆ. ಅವರಿಗೆ ಒತ್ತಾಯ ಮಾಡೋಕೆ ಆಗಲ್ಲ. ಹಿರಿಯ ನಟನಾಗಿ ನಾವು ಸಪೋರ್ಟ್ ಮಾಡಬೇಕು. ಹಾಗಾಗಿ ಬಂದಿದ್ದೀನಿ. ನಾವು ಎಲ್ಲರನ್ನೂ ಸಪೋರ್ಟ್ ಮಾಡುತ್ತೇವೆ. ಎಲ್ಲರಿಗೂ ಸಿನಿಮಾ ಪ್ರಮೋಷನ್, ಶೂಟಿಂಗ್ ಇರುತ್ತದೆ. ಹೀಗಾಗಿ ಕೆಲವರಿಗೆ ಬರೋಕೆ ಆಗಲ್ಲ’ ಎಂದಿದ್ದಾರೆ ಶಿವಣ್ಣ.
ಕ್ರಿಕೆಟ್, ಶೂಟಿಂಗ್ ಎರಡೂ ಒಂದೇ..
ಶಿವರಾಜ್ಕುಮಾರ್ ಅವರು ಕ್ರಿಕೆಟ್ನ ಇಷ್ಟಪಡುತ್ತಾರೆ. ಅವರಿಗೆ ಶೂಟಿಂಗ್ ಹಾಗೂ ಕ್ರಿಕೆಟ್ ಎರಡರ ಮಧ್ಯೆ ಸಾಮ್ಯತೆ ಕಾಣಿಸಿದೆ. ‘ಶೂಟಿಂಗ್ ಹಾಗೂ ಕ್ರಿಕೆಟ್ ಎರಡೂ ನನಗೆ ಮೈದಾನನೇ. ಎರಡಕ್ಕೂ ಸಿದ್ಧತೆ ಬೇಕು. ಕ್ರಿಕೆಟ್ ಆಡೋದು ಜಾಲಿ ಆಗಿರುತ್ತದೆ. ಸದಾ ಶೂಟಿಂಗ್ ಜಂಜಾಟದಲ್ಲಿ ಇರ್ತೀವಿ. 10 ದಿನ ಎಂಟರ್ಟೇನ್ಮೆಂಟ್ ಇರುತ್ತದೆ. ಎಲ್ಲಾ ಕಲಾವಿದರ ಜೊತೆ ಬೆರೆಯಲು ಒಂದು ಒಳ್ಳೆಯ ವೇದಿಕೆ. ಅಂತಾರಾಷ್ಟ್ರೀಯ ಪ್ಲೇಯರ್ಗಳು ಬರುತ್ತಿರುವುದು ಖುಷಿ ಇದೆ’ ಎಂದು ಶಿವಣ್ಣ ಹೇಳಿದ್ದಾರೆ.
ಇದನ್ನೂ ಓದಿ: ರಮ್ಯಾ, ಡಾಲಿ ಧನಂಜಯ್ ಜೊತೆ ‘ಉತ್ತರಕಾಂಡ’ ಚಿತ್ರತಂಡಕ್ಕೆ ಸೇರ್ಪಡೆ ಆದ ಶಿವರಾಜ್ಕುಮಾರ್
ಇದು ಗೇಮ್ ಅಷ್ಟೇ
ಶಿವಣ್ಣ ಹಾಗೂ ಸುದೀಪ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಇಬ್ಬರೂ ಮ್ಯಾಚ್ನಲ್ಲಿ ಎದುರು ಬದುರಾಗುತ್ತಿದ್ದಾರೆ. ಈ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ‘ಇದು ಗೇಮ್ ಅಷ್ಟೇ. ಗೇಮ್ ಎಂದು ಬಂದಾಗ ಎಲ್ಲರೂ ಎಲ್ಲರ ಜೊತೆ ಆಡಬೇಕು. ಇದು ಫೈಟ್ ಅಲ್ಲ. ಜನರಿಗೆ ಈ ಬಗ್ಗೆ ಕುತೂಹಲ ಇರುತ್ತದೆ. ಇದು ಅಪೋಸಿಷನ್ ಎಂಬುದಕ್ಕಿಂತ ಇದೊಂದು ಗೇಮ್’ ಎಂದಿದ್ದಾರೆ ಶಿವಣ್ಣ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ