AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shivarajkumar: ರಮ್ಯಾ, ಡಾಲಿ ಧನಂಜಯ್​ ಜೊತೆ ‘ಉತ್ತರಕಾಂಡ’ ಚಿತ್ರತಂಡಕ್ಕೆ ಸೇರ್ಪಡೆ ಆದ ಶಿವರಾಜ್​ಕುಮಾರ್​

Uttarakaanda: ಡಾಲಿ ಧನಂಜಯ್​ ಮತ್ತು ಶಿವರಾಜ್​ಕುಮಾರ್​ ಅವರದ್ದು ಹಿಟ್​ ಕಾಂಬಿನೇಷನ್​. ಈ ಮೊದಲು ಅವರು ‘ಟಗರು’ ಸಿನಿಮಾದಲ್ಲಿ ಒಟ್ಟಿಗೆ ತೆರೆಹಂಚಿಕೊಂಡಿದ್ದರು. ಆ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈಗ ಅವರು ಮತ್ತೊಮ್ಮೆ ‘ಉತ್ತರಕಾಂಡ’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ರೋಹಿತ್​ ಪದಕಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ.

Shivarajkumar: ರಮ್ಯಾ, ಡಾಲಿ ಧನಂಜಯ್​ ಜೊತೆ ‘ಉತ್ತರಕಾಂಡ’ ಚಿತ್ರತಂಡಕ್ಕೆ ಸೇರ್ಪಡೆ ಆದ ಶಿವರಾಜ್​ಕುಮಾರ್​
ಶಿವರಾಜ್​ಕುಮಾರ್​ ಅವರಿಗೆ ‘ಉತ್ತರಕಾಂಡ’ ತಂಡದ ಕಡೆಯಿಂದ ಸ್ವಾಗತ ಕೋರಲಾಗಿದೆ
Follow us
ಮದನ್​ ಕುಮಾರ್​
|

Updated on: Nov 19, 2023 | 3:13 PM

ನಟಿ ರಮ್ಯಾ ದಿವ್ಯ ಸ್ಪಂದನಾ ಅವರ ಕಮ್​ಬ್ಯಾಕ್​ ಪ್ರಾಜೆಕ್ಟ್​ ಎಂಬ ಕಾರಣಕ್ಕೆ ‘ಉತ್ತರಕಾಂಡ’ (Uttarakaanda) ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಹೀರೋ ಆಗಿ ಡಾಲಿ ಧನಂಜಯ್​ (Daali Dhananjay) ಅವರು ನಟಿಸುತ್ತಿದ್ದಾರೆ. ಅವರ ಜೊತೆಗೆ ಈಗ ಶಿವರಾಜ್​ಕುಮಾರ್​ ಕೂಡ ಸೇರ್ಪಡೆ ಆಗಿದ್ದಾರೆ. ಇದರಿಂದ ಸಿನಿಮಾ ಮೇಲೆ ನಿರೀಕ್ಷೆ ಡಬಲ್​ ಆಗಿದೆ. ಈ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಾರೆ ಎಂಬ ಬಗ್ಗೆ ಮೊದಲಿನಿಂದಲೂ ಮಾಹಿತಿ ಕೇಳಿಬರುತ್ತಲೇ ಇತ್ತು. ಅದೀಗ ಅಧಿಕೃತವಾಗಿದೆ. ‘ಉತ್ತರಕಾಂಡ’ ಬಳಗಕ್ಕೆ ಎಂಟ್ರಿ ನೀಡಿರುವ ಶಿವರಾಜ್​ಕುಮಾರ್​ (Shivarajkumar) ಅವರಿಗೆ ತಂಡದ ಕಡೆಯಿಂದ ಸ್ವಾಗತ ಕೋರಲಾಗಿದೆ. ಈ ಸಿನಿಮಾಗೆ ರೋಹಿತ್​ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ‘ಕೆಆರ್​ಜಿ ಸ್ಟುಡಿಯೋಸ್​’ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ.

ಶಿವರಾಜ್​ಕುಮಾರ್​ ಅವರಿಗೆ ಈ ವರ್ಷ ಸಖತ್​ ಸ್ಪೆಷಲ್​ ಆಗಿದೆ. ಅವರು ನಟಿಸಿದ ‘ಜೈಲರ್​’, ‘ಘೋಸ್ಟ್​’ ಸಿನಿಮಾಗಳು ಭರ್ಜರಿ ಸದ್ದು ಮಾಡಿವೆ. ಬೇರೆ ಬೇರೆ ಭಾಷೆಗಳಿಂದ ಅವರಿಗೆ ಬೇಡಿಕೆ ಹೆಚ್ಚಿದೆ. ಶಿವಣ್ಣ ನಟಿಸಿದರೆ ಸಿನಿಮಾದ ತೂಕ ಹೆಚ್ಚುತ್ತದೆ. ಧನುಷ್ ನಟನೆಯ ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದಲ್ಲೂ ಶಿವರಾಜ್​ಕುಮಾರ್​ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದು, ಆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗ ‘ಉತ್ತರಕಾಂಡ’ ಸಿನಿಮಾದಲ್ಲೂ ಶಿವರಾಜ್​ಕುಮಾರ್​ ಅವರಿಗೆ ಒಂದು ಪ್ರಮುಖ ಪಾತ್ರ ನೀಡಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಡಾಲಿ ಧನಂಜಯ್​ ಮತ್ತು ಶಿವರಾಜ್​ಕುಮಾರ್​ ಅವರದ್ದು ಹಿಟ್​ ಕಾಂಬಿನೇಷನ್​. ಈ ಮೊದಲು ಅವರು ‘ಟಗರು’ ಸಿನಿಮಾದಲ್ಲಿ ಒಟ್ಟಿಗೆ ತೆರೆಹಂಚಿಕೊಂಡಿದ್ದರು. ಆ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈಗ ಅವರು ಮತ್ತೊಮ್ಮೆ ‘ಉತ್ತರಕಾಂಡ’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಧನಂಜಯ್​ ಅವರು ಗಬ್ರು ಸತ್ಯ ಎಂಬ ಪಾತ್ರ ಮಾಡುತ್ತಿದ್ದಾರೆ. ಆ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಸುವಂತಹ ಟೀಸರ್​ ಈ ಮೊದಲೇ ಬಿಡುಗಡೆಯಾಗಿ ಕೌತುಕ ಮೂಡಿಸಿದೆ. ನಿರ್ದೇಶಕ ರೋಹಿತ್ ಪದಕಿ ಮತ್ತು ಡಾಲಿ ಧನಂಜಯ್​ ಅವರು ‘ರತ್ನನ್​ ಪ್ರಪಂಚ’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಅವರ ಕಾಂಬಿನೇಷನ್​ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ‘ಉತ್ತರಕಾಂಡ’. ಈ ಎಲ್ಲ ಕಾರಣಗಳಿಂದಾಗಿ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ: ಒಟಿಟಿಗೆ ಬಂತು ಶಿವಣ್ಣ ನಟನೆಯ ‘ಘೋಸ್ಟ್’; 10,000 ಅಡಿ ಪೋಸ್ಟರ್ ಲಾಂಚ್  

ಈ ವರ್ಷ ರಮ್ಯಾ ಅವರು ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರ ಮಾಡಿದ್ದರು. ಆದರೆ ಅವರನ್ನು ಪೂರ್ಣಪ್ರಮಾಣದ ಪಾತ್ರದಲ್ಲಿ ದೊಡ್ಡ ಪರದೆ ಮೇಲೆ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಈ ಸಿನಿಮಾದಲ್ಲಿ ಉತ್ತರ ಕರ್ನಾಟಕ ಶೈಲಿಯ ಸಂಭಾಷಣೆ ಇರಲಿದೆ. ಚಿತ್ರದ ಮುಹೂರ್ತದ ವೇಳೆ ಬಿಡುಗಡೆ ಮಾಡಲಾಗಿದ್ದ ಟೀಸರ್​ನಲ್ಲಿ ರಮ್ಯಾ ಅವರ ಹಿನ್ನೆಲೆ ಧ್ವನಿ ಹೈಲೈಟ್​ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ