ಒಟಿಟಿಗೆ ಬಂತು ಶಿವಣ್ಣ ನಟನೆಯ ‘ಘೋಸ್ಟ್’; 10,000 ಅಡಿ ಪೋಸ್ಟರ್ ಲಾಂಚ್  

ಕೊವಿಡ್ ಕಾಣಿಸಿಕೊಂಡ ಬಳಿಕ ಒಟಿಟಿ ವ್ಯಾಪ್ತಿ ಹಿರಿದಾಗಿದೆ. ಹಲವು ಪ್ಲಾಟ್​ಫಾರ್ಮ್​ಗಳು ಈ ರೇಸ್​ನಲ್ಲಿ ಮುಂದಿವೆ. ಜೀ5ನಲ್ಲಿ ಹಲವು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ಕೂಡ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ.

ಒಟಿಟಿಗೆ ಬಂತು ಶಿವಣ್ಣ ನಟನೆಯ ‘ಘೋಸ್ಟ್’; 10,000 ಅಡಿ ಪೋಸ್ಟರ್ ಲಾಂಚ್  
ಘೋಸ್ಟ್​ ಪೋಸ್ಟರ್
Follow us
ರಾಜೇಶ್ ದುಗ್ಗುಮನೆ
|

Updated on: Nov 18, 2023 | 2:43 PM

ಶಿವರಾಜ್​ಕುಮಾರ್ (Shivarajkumar) ನಟನೆಯ, ಶ್ರೀನಿ ನಿರ್ದೇಶನದ ‘ಘೋಸ್ಟ್’ ಸಿನಿಮಾ ದಸರಾ ಪ್ರಯುಕ್ತ ನವೆಂಬರ್ ಅಕ್ಟೋಬರ್ 12ರಂದು ಥಿಯೇಟರ್​ನಲ್ಲಿ ರಿಲೀಸ್ ಮಾಡಲಾಯಿತು. ಈ ಸಿನಿಮಾ ಥಿಯೇಟರ್​ನಲ್ಲಿ ಭರ್ಜರಿ ಸದ್ದು ಮಾಡಿತು. ಈ ಸಿನಿಮಾ ಈಗ ಒಟಿಟಿಗೆ ಕಾಲಿಟ್ಟಿದೆ. ನವೆಂಬರ್ 17ರಂದು ಜೀ5ನಲ್ಲಿ ಬಿಡುಗಡೆ ಆಗಿದೆ. ಇದಕ್ಕಾಗಿ ಜೀ5 ಕಡೆಯಿಂದ ಹೊಸ ಪ್ರಯತ್ನ ಮಾಡಲಾಗಿದೆ. ಬರೋಬ್ಬರಿ 10 ಸಾವಿರ ಅಡಿಯ ‘ಘೋಸ್ಟ್’ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

ಕೊವಿಡ್ ಕಾಣಿಸಿಕೊಂಡ ಬಳಿಕ ಒಟಿಟಿ ವ್ಯಾಪ್ತಿ ಹಿರಿದಾಗಿದೆ. ಹಲವು ಪ್ಲಾಟ್​ಫಾರ್ಮ್​ಗಳು ಈ ರೇಸ್​ನಲ್ಲಿ ಮುಂದಿವೆ. ಜೀ5ನಲ್ಲಿ ಹಲವು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ಕೂಡ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ. ಈ ಸಿನಿಮಾದ ಪ್ರಚಾರಕ್ಕೆ ಇಷ್ಟು ದೊಡ್ಡ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಥಿಯೇಟರ್‌ಗಳಲ್ಲಿ ರಿಲೀಸ್ ಆಗುವ ಚಿತ್ರಗಳಿಗೆ ಬ್ಯಾನರ್, ಪೋಸ್ಟರ್ ಹಾಕುವುದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಲಾಗಿದೆ. ಬೆಂಗಳೂರಿನ ಜಯನಗರದ ಎಂಇಎಸ್ ಗ್ರೌಂಡ್​ನಲ್ಲಿ ಘೋಸ್ಟ್ ಸಿನಿಮಾದ  10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ.

‘ಘೋಸ್ಟ್’ ಸಿನಿಮಾಗೆ ಶ್ರೀನಿ ನಿರ್ದೇಶನ ಇದೆ. ಹೊಸ ರೀತಿಯಲ್ಲಿ ಅವರು ಚಿತ್ರವನ್ನು ಪ್ರೇಕ್ಷಕರ ಎದುರು ತಂದಿಟ್ಟರು. ಥಿಯೇಟರ್​ನಲ್ಲಿ ಸಿನಿಮಾನ ಮಿಸ್ ಮಾಡಿಕೊಂಡವರು, ಥಿಯೇಟರ್​ನಲ್ಲಿ ಒಮ್ಮೆ ನೋಡಿ ಮತ್ತೊಮ್ಮೆ ವೀಕ್ಷಿಸಬೇಕು ಎಂದುಕೊಂಡವರು ‘ಘೋಸ್ಟ್’ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ: ಅಂದುಕೊಂಡಷ್ಟು ಬೇಗ ಬರಲ್ಲ ಘೋಸ್ಟ್  ನಿರ್ದೇಶಕ ಶ್ರೀನಿ ಯೋಜನೆಗಳೇನು?

‘ಘೋಸ್ಟ್’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಎರಡು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂದೇಶ್​ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ‘ಘೋಸ್ಟ್’ ಸಿನಿಮಾ ಸಿದ್ಧವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರದಲ್ಲಿ ಬಿಡುಗಡೆ ಆಗಿದೆ. ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆ ಇದೆ. ಜಯರಾಮ್‌, ಅನುಪಮ್‌ ಖೇರ್‌, ಅರ್ಚನಾ ಜೋಯಿಸ್‌, ಸತ್ಯಪ್ರಕಾಶ್‌ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ