ಹಿರಿಯ ನಟಿ ಲೀಲಾವತಿಯ ಭೇಟಿಯಾದ ನಟ ಅರ್ಜುನ್ ಸರ್ಜಾ

Arjun Sarja: ಇತ್ತೀಚೆಗಷ್ಟೆ ಮಗಳ ಮದುವೆ ನಿಶ್ವಿತಾರ್ಥ ಮುಗಿಸಿರುವ ಅರ್ಜುನ್ ಸರ್ಜಾ, ಇಂದು ಹಿರಿಯ ನಟಿ ಲೀಲಾವತಿ ಮನೆಗೆ ಆಗಮಿಸಿ ಅವರ ಯೋಗ ಕ್ಷೇಮ ವಿಚಾರಿಸಿದರು.

ಹಿರಿಯ ನಟಿ ಲೀಲಾವತಿಯ ಭೇಟಿಯಾದ ನಟ ಅರ್ಜುನ್ ಸರ್ಜಾ
Follow us
ಮಂಜುನಾಥ ಸಿ.
|

Updated on: Nov 19, 2023 | 8:48 PM

ಇತ್ತೀಚೆಗಷ್ಟೆ ಪುತ್ರಿ ಐಶ್ವರ್ಯಾರ ನಿಶ್ವಿತಾರ್ಥವನ್ನು ಚೆನ್ನೈನಲ್ಲಿ ನೆರವೇರಿಸಿರುವ ನಟ ಅರ್ಜುನ್ ಸರ್ಜಾ (Arjun Sarja). ಮದುವೆ ತಯಾರಿಯ ಮುನ್ನ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ನಟಿ ಲೀಲಾವತಿ ಅವರ ಮನೆಗೆ ತೆರಳಿ, ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದು ಮಲಗಿರುವ ನಟಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅರ್ಜುನ್ ಸರ್ಜಾ ಅವರು ಲೀಲಾವತಿ ಅವರೊಟ್ಟಿಗೆ ಮಾತನಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ವಿನೋದ್ ರಾಜ್​ಕುಮಾರ್ ಅವರ ನೆಲಮಂಗಲದ ನಿವಾಸಕ್ಕೆ ತೆರಳಿರುವ ನಟ ಅರ್ಜುನ್ ಸರ್ಜಾ, ಲೀಲಾವತಿ ಅವರ ಆರೋಗ್ಯ ವಿಚಾರಿಸಿದ್ದು, ಲೀಲಾವತಿಯವರನ್ನುದ್ದೇಶಿಸಿ, ‘ಅಮ್ಮ ನಾನು ನೆನಪಿದ್ದೀನಾ?’ ಎಂದೆಲ್ಲ ಕೇಳಿ ಅವರೊಟ್ಟಿಗೆ ಸಂವಾದ ನಡೆಸುವ ಪ್ರಯತ್ನ ಮಾಡಿದ್ದಾರೆ. ಆದರೆ ಲೀಲಾವತಿ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ಅಲ್ಲಿಯೇ ನಿಂತಿದ್ದ ವಿನೋದ್, ಅವರಿಗೆ ಕೇಳುತ್ತದೆ, ಅರ್ಥವಾಗುತ್ತದೆ ಆದರೆ ಮಾತನಾಡಲು ಆಗುತ್ತಿಲ್ಲ’ ಎಂದರು.

ಲೀಲಾವತಿ ಅವರ ಕೈ ಹಿಡಿದು ಕೆಲ ಸಮಯ ಮಾತನಾಡಿದ ಅರ್ಜುನ್ ಸರ್ಜಾ ಬಳಿಕ ಕಾಲು ಮುಟ್ಟಿ ನಮಸ್ಕಾರ ಮಾಡಿದರು. ಆ ಬಳಿಕ ಲೀಲಾವತಿ ಅವರ ಹಣೆಗೆ ಮುತ್ತು ಕೊಟ್ಟು, ಎಲ್ಲವೂ ಒಳ್ಳೆಯದಾಗಲಿ, ಆದಷ್ಟು ಬೇಗ ನೀವು ಗುಣ ಆಗುತ್ತೀರ, ದೇವರಲ್ಲಿ ಪ್ರಾರ್ಥನೆ ಮಾಡಿ, ನಾನೂ ಸಹ ನಿಮಗಾಗಿ ಪ್ರಾರ್ಥನೆ ಮಾಡುತ್ತೇನೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹಾರೈಸಿದರು. ಅಲ್ಲಿಯೇ ಇದ್ದ ವಿನೋದ್ ಅವರಿಗೂ ಧೈರ್ಯ ತುಂಬಿದರು. ಅವರ ಕಾರ್ಯವನ್ನು ಹೊಗಳಿದರು.

ಇದನ್ನೂ ಓದಿ:ಅದ್ಧೂರಿಯಾಗಿ ನೆರವೇರಿದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ: ವರ ಯಾರು?

ಆ ನಂತರ ವಿನೋದ್ ರಾಜ್​ಕುಮಾರ್ ಅವರ ತೋಟವನ್ನು ಸುತ್ತು ಹಾಕಿದರು. ವಿನೋದ್, ಕಷ್ಟಪಟ್ಟು ಮಾಡಿರುವ ತೋಟವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು. ನಗರ ಜೀವನದಿಂದ ದೂರ ಉಳಿದು ಶಾಂತವಾಗಿ ಬದುಕುತ್ತಿರುವ ಬಗ್ಗೆ ವಿನೋದ್​ಗೆ ಮೆಚ್ಚುಗೆಯನ್ನು ಸೂಚಿಸಿದರು. ವಿನೋದ್, ಸಹ ತಮ್ಮ ತೋಟದ ಶಾಂತತೆಯ ಪರಿಚಯವನ್ನು ಅರ್ಜುನ್ ಸರ್ಜಾಗೆ ಮಾಡಿಕೊಟ್ಟರು.

ಲೀಲಾವತಿ ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಕಳೆದ ಕೆಲವು ತಿಂಗಳಿನಿಂದ ಕನ್ನಡ ಸೇರಿದಂತೆ ಬೇರೆ-ಬೇರೆ ಚಿತ್ರರಂಗದ ನಟ-ನಟಿಯರು ಬಂದು ಅವರ ಯೋಗ ಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದಾರೆ. ಹಿರಿಯ ನಟರಾದ ಶ್ರೀನಾಥ್, ಶ್ರೀಧರ್ ನಟಿಯರಾದ ಶ್ರುತಿ, ತಾರಾ ಸೇರಿದಂತೆ ಇನ್ನೂ ಹಲವರು ಲೀಲಾವತಿ ಅವರ ಮನೆಗೆ ಹೋಗಿ ಆರೋಗ್ಯ ವಿಚಾರಿಸಿದ್ದರು. ಇನ್ನೊಮ್ಮೆ ಕನ್ನಡದ ಹಲವು ಹಿರಿಯ ನಟರುಗಳು ಒಟ್ಟಿಗೆ ಬಸ್ ಮಾಡಿಕೊಂಡು ಲೀಲಾವತಿ ಅವರ ಮನೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿತ್ತು.

ವಿನೋದ್ ಅವರು ಗಾಂಧಿ ನಗರದಿಂದ ದೂರ ತೆರಳಿ ನೆಲಮಂಗಲದ ಹಳ್ಳಿಯೊಂದರಲ್ಲಿ ಮನೆ ಮಾಡಿಕೊಂಡು ತಮ್ಮ ತಾಯಿಯೊಟ್ಟಿಗೆ ವಾಸಿಸುತ್ತಿದ್ದಾರೆ. ಲೀಲಾವತಿಯವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಜೊತೆಗೆ ರೈತಿಕೆಯನ್ನೂ ಮುಂದುವರೆಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ