‘ಶುಗರ್ ಫ್ಯಾಕ್ಟರಿ’ ಟ್ರೇಲರ್ ಬಿಡುಗಡೆ ಮಾಡಿದ ನಿಖಿಲ್ ಕುಮಾರಸ್ವಾಮಿ

Darling Krishna: ಡಾರ್ಲಿಂಗ್ ಕೃಷ್ಣ ನಟನೆಯ ‘ಶುಗರ್ ಫ್ಯಾಕ್ಟರಿ’ ಸಿನಿಮಾದ ಟ್ರೈಲರ್ ಅನ್ನು ನಿಖಿಲ್ ಕುಮಾರಸ್ವಾಮಿ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ಬಿಡುಗಡೆ ಮಾಡಿದ್ದಾರೆ.

‘ಶುಗರ್ ಫ್ಯಾಕ್ಟರಿ’ ಟ್ರೇಲರ್ ಬಿಡುಗಡೆ ಮಾಡಿದ ನಿಖಿಲ್ ಕುಮಾರಸ್ವಾಮಿ
Follow us
ಮಂಜುನಾಥ ಸಿ.
|

Updated on: Nov 19, 2023 | 10:01 PM

ಡಾರ್ಲಿಂಗ್ ಕೃಷ್ಣ (Darling Krishan) ತಮಗಿರುವ ಪ್ರೇಕ್ಷಕರು, ಅಭಿಮಾನಿಗಳ ನಾಡಿಮಿಡಿತ ಅರಿತು ಅವರಿಗಾಗಿಯೇ ಸಿನಿಮಾಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಪ್ರೇಮಕತೆಗಳು, ಕೌಟುಂಬಿಕ ಕತೆಗಳನ್ನು ಹೊಂದಿರುವ ಸಿನಿಮಾಗಳನ್ನು ಆರಿಸಿಕೊಂಡು ಅವುಗಳಲ್ಲೇ ನಟಿಸುತ್ತಾ ಬರುತ್ತಿದ್ದಾರೆ. ಅದರಲ್ಲಿಯೂ ಯುವಕರಿಗೆ ಮುಟ್ಟುವಂಥಹಾ ಸಿನಿಮಾಗಳನ್ನು ಡಾರ್ಲಿಂಗ್ ಕೃಷ್ಣ ಮಾಡುತ್ತಾ ಬರುತ್ತಿದ್ದಾರೆ. ಇದೀಗ ‘ಶುಗರ್ ಫ್ಯಾಕ್ಟರಿ’ ಹೆಸರಿನ ಸಿನಿಮಾ ಮಾಡಿದ್ದು, ಸಿನಿಮಾದ ಟ್ರೈಲರ್ ಅನ್ನು ನಿಖಿಲ್ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.

‘ಶುಗರ್ ಫ್ಯಾಕ್ಟರಿ’ ಸಿನಿಮಾದ ಟೀಸರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ಹಾಗೂ ದೀಪಕ್ ಅರಸ್ ನಿರ್ದೇಶನದ “ಶುಗರ್ ಫ್ಯಾಕ್ಟರಿ” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ‌. ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಿಖಿಲ್ ಕುಮಾರಸ್ವಾಮಿ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಸಿನಿಮಾ ದೊಡ್ಡ ಯಶಸ್ವಿಯಾಗಲೆಂದು ಹಾರೈಸಿದರು. ಜಗದೀಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

“ಶುಗರ್ ಫ್ಯಾಕ್ಟರಿ” ಎಂದರೆ ಒಂದು ಪಬ್​ನ ಹೆಸರು ಎಂದು ಮಾತು ಆರಂಭಿಸಿದ ನಿರ್ದೇಶಕ ದೀಪಕ್ ಅರಸ್, ಚಿತ್ರದಲ್ಲಿ ಪಬ್ ಕೂಡ ಒಂದು ಪಾತ್ರ ಹಾಗಾಗಿ ನಮ್ಮ ಚಿತ್ರಕ್ಕೆ “ಶುಗರ್ ಫ್ಯಾಕ್ಟರಿ” ಎಂದು ಹೆಸರಿಟ್ಟಿದ್ದೇವೆ‌. ಹಾಗಂತ ನಮ್ಮ ಚಿತ್ರದಲ್ಲಿ ಬರಿ ಹಾಡು, ಕುಣಿತ, ಕುಡಿತ ಅಷ್ಟೇ ಇಲ್ಲ. ಇದೊಂದು ಸುಮಧುರ ಪ್ರೇಮ ಕಾವ್ಯ ಕೂಡ. ಆಕ್ಷನ್ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗುತ್ತದೆ. ಒಟ್ಟಿನಲ್ಲಿ ಈಗಿನ ಜನತೆ ಯಾವ ಮನೊರಂಜನೆ ಬಯಸುತ್ತಾರೊ ಅದೆಲ್ಲವೂ ನಮ್ಮ ಚಿತ್ರದಲ್ಲಿದೆ ಎಂದರು.

ಇದನ್ನೂ ಓದಿ:Darling Krishna: ಕೌಸಲ್ಯ ಸುಪ್ರಜಾ ರಾಮ ಕರಿಯರ್​ನ ಬೆಸ್ಟ್ ಸಿನಿಮಾ ಎಂದ ಡಾರ್ಲಿಂಗ್ ಕೃಷ್ಣ, ಕಾರಣ?

“ಲವ್ ಮಾಕ್ಟೇಲ್” ಚಿತ್ರದ ನಂತರ ಕೇಳಿದ ಕಥೆ ಇದು. ನಾನು “ಲವ್ ಮಾಕ್ಟೇಲ್ ” ಚಿತ್ರದ ಆಡಿಶನ್ ನಲ್ಲಿ ಯುವಜನತೆ ಈಗ ಯಾವ ರೀತಿ ಕಥೆ ಇಷ್ಟ ಪಡುತ್ತಾರೆ ಎಂದು ಕೇಳುತ್ತಿದೆ‌. ಅದೇ ತರಹದ ಕಥೆಯನ್ನು ದೀಪಕ್ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಬಂದಿದೆ ಎಂದು ನಾಯಕ ಡಾರ್ಲಿಂಗ್ ಕೃಷ್ಣ ತಿಳಿಸಿದರು. ನಿರ್ಮಾಪಕ ಆರ್ ಗಿರೀಶ್ ಮಾತನಾಡಿ, ‘ಚಿತ್ರತಂಡದವರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಬಂದಿದೆ. ಇದೇ ನವೆಂಬರ್ 24ರಂದು ತೆರೆಗೆ ಬರುತ್ತಿದೆ. ನೋಡಿ ಹಾರೈಸಿ’ ಎಂದರು.

ನಾಯಕಿಯರಾದ ಸೋನಾಲ್ ಮೊಂತೆರೊ, ಅದ್ವಿತಿ ಶೆಟ್ಟಿ ಹಾಗೂ ರುಹಾನಿ ಶೆಟ್ಟಿ ತಮ್ಮ ಪಾತ್ರಗಳ ಕುರಿತು ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ಕಬೀರ್ ರಫಿ ಹಾಗೂ ನೃತ್ಯ ನಿರ್ದೇಶಕ ಧನಂಜಯ್ “ಶುಗರ್ ಫ್ಯಾಕ್ಟರಿ” ಬಗ್ಗೆ ಮಾತನಾಡಿದರು. ರಂಗಾಯಣ ರಘು ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ನವೆಂಬರ್ 24ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ ಆಟೋ ಚಾಲಕರ ಮನೆಯಲ್ಲಿ ಊಟ ಮಾಡಿದ ಅರವಿಂದ್ ಕೇಜ್ರಿವಾಲ್ ದಂಪತಿ
ದೆಹಲಿ ಆಟೋ ಚಾಲಕರ ಮನೆಯಲ್ಲಿ ಊಟ ಮಾಡಿದ ಅರವಿಂದ್ ಕೇಜ್ರಿವಾಲ್ ದಂಪತಿ
ಎಡಿಜಿಪಿ, ಪೊಲೀಸ್ ಕಮೀಶನರ್​ರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಸ್ವಾಮೀಜಿ
ಎಡಿಜಿಪಿ, ಪೊಲೀಸ್ ಕಮೀಶನರ್​ರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಸ್ವಾಮೀಜಿ
ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದ ಪ್ರತಿಭಟನೆಕಾರರು
ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದ ಪ್ರತಿಭಟನೆಕಾರರು
ನನಗೆ ಏಟು ಬಿದಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಬೀಳುತಿತ್ತು: ಸ್ಚಾಮೀಜಿ
ನನಗೆ ಏಟು ಬಿದಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಬೀಳುತಿತ್ತು: ಸ್ಚಾಮೀಜಿ
ಮನವಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಬರಲಿಲ್ಲ ಎಂದ ಪ್ರತಿಭಟನಾಕಾರರು
ಮನವಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಬರಲಿಲ್ಲ ಎಂದ ಪ್ರತಿಭಟನಾಕಾರರು
ಬಿಗ್​ಬಾಸ್: ಗೌತಮಿ ಹೊಗಳಿಕೆಗೆ ನಾಚಿ ನೀರಾದ ಮೋಕ್ಷಿತಾ
ಬಿಗ್​ಬಾಸ್: ಗೌತಮಿ ಹೊಗಳಿಕೆಗೆ ನಾಚಿ ನೀರಾದ ಮೋಕ್ಷಿತಾ
ವಿಧಾನಸೌಧ ಆವರಣದಲ್ಲಿ ಕೃಷ್ಣ ಅವರ ಪ್ರತಿಮೆ ಸ್ಥಾಪಿಸಬೇಕು: ಇಬ್ರಾಹಿಂ
ವಿಧಾನಸೌಧ ಆವರಣದಲ್ಲಿ ಕೃಷ್ಣ ಅವರ ಪ್ರತಿಮೆ ಸ್ಥಾಪಿಸಬೇಕು: ಇಬ್ರಾಹಿಂ
ಪಾತ್ರೆ ತೊಳೆದರೆ ನಾನು ಗಂಡಸೇ ಅಲ್ಲ; ಚೈತ್ರಾಗೆ ಸವಾಲು ಹಾಕಿದ ರಜತ್
ಪಾತ್ರೆ ತೊಳೆದರೆ ನಾನು ಗಂಡಸೇ ಅಲ್ಲ; ಚೈತ್ರಾಗೆ ಸವಾಲು ಹಾಕಿದ ರಜತ್
ಪಂಚಮಸಾಲಿ ಹೋರಾಟ ತೀವ್ರ: ಯತ್ನಾಳ್,ಸ್ವಾಮೀಜಿ ಸೇರಿ ಹಲವರು ಪೊಲೀಸ್ ವಶಕ್ಕೆ
ಪಂಚಮಸಾಲಿ ಹೋರಾಟ ತೀವ್ರ: ಯತ್ನಾಳ್,ಸ್ವಾಮೀಜಿ ಸೇರಿ ಹಲವರು ಪೊಲೀಸ್ ವಶಕ್ಕೆ
ಪಂಚಮಸಾಲಿ ಹೋರಾಟದಿಂದ ಬೆಳಗಾವಿ ಕೊತ-ಕೊತ!
ಪಂಚಮಸಾಲಿ ಹೋರಾಟದಿಂದ ಬೆಳಗಾವಿ ಕೊತ-ಕೊತ!