‘ಲವ್ ಮಾಕ್ಟೇಲ್’ ಮಾಡಿದ್ದ ಬಿಸ್ನೆಸ್ ಎಷ್ಟು? ಡಾರ್ಲಿಂಗ್ ಕೃಷ್ಣ ನೀಡಿದ್ರು ಸಂಪೂರ್ಣ ಲೆಕ್ಕ

‘ಲವ್ ಮಾಕ್ಟೇಲ್’ ಸಿನಿಮಾ ನಿರ್ಮಾಣ, ನಿರ್ದೇಶನ ಮಾಡಿದ್ದೆಲ್ಲವೂ ಇವರೇ. ಅನುಭವಿ ಕಲಾವಿದರಿಗೆ ನೀಡುವಷ್ಟು ಹಣ ಇವರಲ್ಲಿ ಇರಲಿಲ್ಲ. ಈ ಕಾರಣಕ್ಕೆ ಹೊಸಬರಿಗೆ ಅವಕಾಶ ನೀಡಿದರು. ಈ ಬಗ್ಗೆ ಡಾರ್ಲಿಂಗ್ ಕೃಷ್ಣ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

‘ಲವ್ ಮಾಕ್ಟೇಲ್’ ಮಾಡಿದ್ದ ಬಿಸ್ನೆಸ್ ಎಷ್ಟು? ಡಾರ್ಲಿಂಗ್ ಕೃಷ್ಣ ನೀಡಿದ್ರು ಸಂಪೂರ್ಣ ಲೆಕ್ಕ
ಮಿಲನಾ ನಾಗರಾಜ್-ಡಾರ್ಲಿಂಗ್ ಕೃಷ್ಣ
Follow us
ರಾಜೇಶ್ ದುಗ್ಗುಮನೆ
|

Updated on: Aug 19, 2023 | 12:41 PM

‘ಲವ್ ಮಾಕ್ಟೇಲ್’ ಸಿನಿಮಾಗೆ ಡಾರ್ಲಿಂಗ್ ಕೃಷ್ಣ (Darling Krishna) ಅವರು ನಿರ್ದೇಶನ ಮಾಡುವುದರ ಜೊತೆಗೆ ಹೀರೋ ಆಗಿ ನಟಿಸಿದರು. ಈ ಸಿನಿಮಾ 2020ರ ಆರಂಭದಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಈ ಸಿನಿಮಾ ರಿಲೀಸ್ ಆದ ಬಳಿಕ ಡಾರ್ಲಿಂಗ್ ಕೃಷ್ಣ ಅವರು ಸಖತ್ ಪೇಮಸ್ ಆದರು. ಚಿತ್ರದಲ್ಲಿ ನಟಿಸಿದ ಮಿಲನಾ ಕೂಡ ಜನಪ್ರಿಯತೆ ಪಡೆದರು. ನಿರ್ದೇಶನ ಹಾಗೂ ನಟನೆ ಎರಡರಲ್ಲೂ ಅವರು ಬೇಡಿಕೆ ಹೆಚ್ಚಿಸಿಕೊಂಡರು. ಆದರೆ, ಆ ಸಿನಿಮಾ ಮಾಡೋದು ಅಷ್ಟು ಸುಲಭದ ವಿಚಾರ ಆಗಿರಲಿಲ್ಲ. ತೆರೆಯ ಹಿಂದಿದ್ದ ಕಷ್ಟಗಳು ಹಲವು. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಲವ್ ಮಾಕ್ಟೇಲ್’ ಸಿನಿಮಾ ನಿರ್ಮಾಣ, ನಿರ್ದೇಶನ ಮಾಡಿದ್ದೆಲ್ಲವೂ ಇವರೇ. ಅನುಭವಿ ಕಲಾವಿದರಿಗೆ ನೀಡುವಷ್ಟು ಹಣ ಇವರಲ್ಲಿ ಇರಲಿಲ್ಲ. ಈ ಕಾರಣಕ್ಕೆ ಹೊಸಬರಿಗೆ ಅವಕಾಶ ನೀಡಿದರು. ಈ ಬಗ್ಗೆ ಡಾರ್ಲಿಂಗ್ ಕೃಷ್ಣ ‘ಕಲಾ ಮಾಧ್ಯಮಕ್ಕೆ’ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ‘ತಮಿಳಿನ 96 ಸಿನಿಮಾ ನೋಡಿದೆ. ಆ ಚಿತ್ರ ಇಷ್ಟವಾಯ್ತು. ಕಾಲೇಜು ಲವ್​ ಸ್ಟೋರಿಗಳು ನನ್ನಲ್ಲೂ ಇತ್ತು. ಅದನ್ನೇ ಇಟ್ಟುಕೊಂಡು ಒಂದು ಕಥೆ ಮಾಡಿದೆ. ಈ ಚಿತ್ರದ ಕ್ಲೈಮ್ಯಾಕ್ಸ್​ ಹೊಳೆಯೋಕೆ ಮಿಲನಾ ಕಾಲಿನಲ್ಲಿ ಉಂಟಾಗಿದ್ದ ಒಂದು ಗಂಟು ಕಾರಣ. ನಾವು ಆಸ್ಪತ್ರೆ ಅವರನ್ನು ಕೇಳಿದಾಗ ಇದು ಕ್ಯಾನ್ಸರ್​ಗೆ ತಿರುಗುವ ಸಾಧ್ಯತೆ ಇತ್ತು ಎಂದಿದ್ದರು. ಇದನ್ನೇ ಕ್ಲೈಮ್ಯಾಕ್ಸ್ ಮಾಡಿದೆ’ ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.

‘ನಮಗೆ ಸಿಗುತ್ತಿದ್ದ ಹಣದಲ್ಲೇ ಸಿನಿಮಾ ಶೂಟ್ ಮಾಡಿದೆವು. ಸಿನಿಮಾಗೆ ಹೊಸ ಕಲಾವಿದರನ್ನೇ ಸೇರಿಸಿಕೊಂಡೆವು. ಏಳು ತಿಂಗಳಲ್ಲಿ ಸಿನಿಮಾ ಸಿದ್ಧವಾಯಿತು. ಮೊದಲ ವಾರ ಸಿನಿಮಾಗೆ ಉತ್ತಮ ವಿಮರ್ಶೆ ಇತ್ತು. ಆದರೆ ಜನರು ಚಿತ್ರಮಂದರಿಕ್ಕೆ ಬರುತ್ತಿಲ್ಲ. ಎರಡನೇ ವಾರಕ್ಕೆ ಕೆಲವು ಥಿಯೇಟರ್ ಸಿಕ್ಕಿತು. ಮೂರನೇ ವಾರದಿಂದ ಸಿನಿಮಾ ಭರ್ಜರಿ ಕಮಾಯಿ ಮಾಡಿತು’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ ಕೃಷ್ಣ.

ಇದನ್ನೂ ಓದಿ: Love Mocktail 3: ‘ಲವ್​ ಮಾಕ್ಟೇಲ್​ 3’ ಕೆಲಸ ಆರಂಭಿಸಿದ ಡಾರ್ಲಿಂಗ್​ ಕೃಷ್ಣ; ಮುಂದುವರಿಯಲಿದೆ ಆದಿ-ನಿಧಿ ಕಥೆ

‘ಲವ್ ಮಾಕ್ಟೇಲ್’ ರಿಲೀಸ್ ಆದ ಎರಡೇ ದಿನಕ್ಕೆ ಚಿತ್ರವನ್ನು ಅಮೇಜಾನ್ ಪ್ರೈಮ್​ನವರಿಗೆ ಮಾರಾಟ ಮಾಡಿದರು ಡಾರ್ಲಿಂಗ್ ಕೃಷ್ಣ. ಇದರಿಂದ ಅವರಿಗೆ 70 ಲಕ್ಷ ರೂಪಾಯಿ ಸಿಕ್ಕಿತ್ತು. ನಂತರ ಸ್ವಲ್ಪ ಕಲೆಕ್ಷನ್ ಕೂಡ ಆಯಿತು. ಇದರಿಂದ ಡಾರ್ಲಿಂಗ್ ಕೃಷ್ಣ ನಿಟ್ಟುಸಿರು ಬಿಟ್ಟರು. ‘ಲವ್ ಮಾಕ್ಟೇಲ್ 2’ ಸಿನಿಮಾದಿಂದ ಡಾರ್ಲಿಂಗ್ ಕೃಷ್ಣ ಭರ್ಜರಿ ಲಾಭ ಕಂಡರು. ಈ ವಿಚಾರವನ್ನೂ ಅವರು ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್