AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘Supplier ಶಂಕರ’ನಾಗಿ ‘ಗಂಟುಮೂಟೆ’ ಹೀರೋ ನಿಶ್ಚಿತ್ ಕೊರೋಡಿ

Suplier Shnakara: 'ಗಂಟುಮೂಟೆ', 'ಟಾಮ್ ಆಂಡ್ ಜೆರ್ರಿ' ಸಿನಿಮಾಗಳ ಮೂಲಕ ಗಮನ ಸೆಳೆದಿರುವ ನಟ ನಿಶ್ವಿತ್ ಇದೀಗ 'ಸಪ್ಲೈಯರ್ ಶಂಕರ' ಸಿನಿಮಾದ ಮೂಲಕ ಪ್ರೇಕ್ಷಕರ ಎದುರು ಬರಲಿದ್ದಾರೆ.

'Supplier ಶಂಕರ'ನಾಗಿ 'ಗಂಟುಮೂಟೆ' ಹೀರೋ ನಿಶ್ಚಿತ್ ಕೊರೋಡಿ
Follow us
ಮಂಜುನಾಥ ಸಿ.
|

Updated on: Aug 19, 2023 | 10:30 PM

ಈ ಹಿಂದೆ ‘ಗಂಟೂಮೂಟೆ’ (Gantu Moote) ಹೆಸರಿನ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ನಿಶ್ಚಿತ್ ಕೊರೋಡಿ ಇದೀಗ ಹೊಸ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ಸಪ್ಲೈಯರ್ ಶಂಕರ’ (Suplier Shankara) ಹೆಸರಿನ ಸಿನಿಮಾದಲ್ಲಿ ನಿಶ್ಚಿತ್ ನಟಿಸಿದ್ದಾರೆ. ಸಿನಿಮಾದ ಹೆಸರು ಕೇಳಲು ಕಾಮಿಡಿ ಸಿನಿಮಾದ ಹೆಸರಿನಂತೆ ಅನಿಸುತ್ತದೆಯಾದರೂ ಇದು ಇಂಟೆನ್ಸ್ ಆದ ಕತೆ ಹೊಂದಿರುವ ಸಿನಿಮಾ ಎಂಬುದನ್ನು ಇದೀಗ ಬಿಡುಗಡೆ ಆಗಿರುವ ಮೋಷನ್ ಟೀಸರ್ (Teaser) ಹೇಳುತ್ತಿದೆ.

‘Supplier ಶಂಕರ’ ಸಿನಿಮಾ ಈಗಾಗಲೇ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಇದೀಗ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪೊಲೀಸ್ ಸ್ಟೇಷನ್‌ ದೃಶ್ಯದ ಮೂಲಕ ತೆರೆದುಕೊಳ್ಳುವ ಮೋಷನ್ ಪೋಸ್ಟರ್ ನಾನಾ ಕುತೂಹಲವನ್ನು ಹುಟ್ಟುಹಾಕಿದೆ. ರಕ್ತ ಮೆತ್ತಿದ ನಾಯಕ ಮಾಸ್ ಲುಕ್ ನಲ್ಲಿ ನಾಯಕ ನಿಶ್ಚಿತ್ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಬೆತ್ತಲಾಗೆಯಾಗಿ ನಿಂತು ಪೊಲೀಸರು ಕೊಡುವ ಕಿರುಕುಳವನ್ನು ಅನುಭವಿಸುತ್ತಿರುವಂತೆ ಮೋಷನ್ ಪೋಸ್ಟರ್​ನಲ್ಲಿ ತೋರಿಸಲಾಗಿದೆ.

ಗಂಟುಮೂಟೆ, ಟಾಮ್ ಅಂಡ್ ಜೆರ್ರಿ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ನಾಯಕ ನಿಶ್ಚಿತ್ ಕೊರೋಡಿ Supplier ಶಂಕರ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಯುವ ಪ್ರತಿಭೆ ರಂಜಿತ್ ಸಿಂಗ್ ರಜಪೂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ತ್ರಿನೇತ್ರ ಫಿಲ್ಮಂಸ್ ಸಂಸ್ಥೆಯಡಿ ಎಂ.ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ಬೆಂಗಳೂರಿನ ಸುತ್ತಮುತ್ತ ಪ್ರದೇಶದಲ್ಲಿ ಮಾಡಲಾಗಿದೆ. ಸಿನಿಮಾದ ಹೆಸರೇ ಹೇಳುವಂತೆ ಒಬ್ಬ ಬಾರ್ ಸಪ್ಲೈಯರ್ ಸುತ್ತಾ ಸುತ್ತುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ನಿಶ್ಚಿತ್ ಗೆ ಜೋಡಿಯಾಗಿ ‘ಲಗೋರಿ’ ಸಿನಿಮಾದಲ್ಲಿ ನಟಿಸಿದ್ದ ದೀಪಿಕಾ ಆರಾಧ್ಯ ನಟಿಸಿದ್ದಾರೆ. ಗೋಪಾಲ ಕೃಷ್ಣ ದೇಶಪಾಂಡೇ, ಜ್ಯೋತಿ ರೈ, ನವೀನ್ ಡಿ ಪಡಿಲ್ ಸೇರಿದಂತೆ ಒಂದಷ್ಟು ಹೊಸಬರು ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ:’ಟೈಗರ್ ನಾಗೇಶ್ವರ್ ರಾವ್’ ಟೀಸರ್ ರಿಲೀಸ್, ಮಾಸ್ ಅವತಾರದಲ್ಲಿ ದರ್ಶನ ಕೊಟ್ಟ ರವಿತೇಜ

Supplier ಶಂಕರ ಸಿನಿಮಾಗೆ ರಂಜಿತ್, ಕಥೆ , ಚಿತ್ರಕಥೆ, ಸಂಭಾಷಣೆ ಜೊತೆಗೆ ಸಾಹಿತ್ಯದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ವಿಜಯ್ ಪ್ರಕಾಶ್, ಅಮ್ಮ ನನ್ನೀ ಈ ಜನುಮ ಖ್ಯಾತಿಯ ಸುನಿಲ್ ಕಶ್ಯಪ್, ಮೋಹನ್ ಬಿನ್ನಿಪೇಟೆ, ಸಂತೋಷ್ ವೆಂಕಿ, ನಕುಲ್ ಅಭಯ್ಯಂಕರ್, ಐಶ್ವರ್ಯ ರಂಗರಾಜನ್ ಹಾಡುಗಳಿಗೆ ಧ್ವನಿಯಾಗಿದ್ದು, ರವಿ ಬಸ್ರೂರ್ ಬಳಿ ಕೆಲಸ ಮಾಡಿರುವ ಆರ್.ಬಿ.ಭರತ್ ಸಂಗೀತ ನೀಡಿದ್ದಾರೆ. ಸತೀಶ್ ಚಂದ್ರಯ್ಯ ಸಂಕಲನ, ಸತೀಶ್ ಕುಮಾರ್.ಎ ಛಾಯಾಗ್ರಹಣ, ಬಾಲಾಜಿ ಕಲಾ ನಿರ್ದೇಶನ Supplier ಶಂಕರ್ ಸಿನಿಮಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ