’ಟೈಗರ್ ನಾಗೇಶ್ವರ್ ರಾವ್’ ಟೀಸರ್ ರಿಲೀಸ್, ಮಾಸ್ ಅವತಾರದಲ್ಲಿ ದರ್ಶನ ಕೊಟ್ಟ ರವಿತೇಜ

Ravi Teja: ಮಾಸ್ ಮಹಾರಾಜ ರವಿತೇಜ ನಟಿಸಿರುವ 'ಟೈಗರ್ ನಾಗೇಶ್ವರ ರಾವ್' ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಕುಖ್ಯಾತ ಕಳ್ಳನ ಪಾತ್ರದಲ್ಲಿ ರವಿತೇಜ ನಟಿಸಿದ್ದಾರೆ.

’ಟೈಗರ್ ನಾಗೇಶ್ವರ್ ರಾವ್’ ಟೀಸರ್ ರಿಲೀಸ್, ಮಾಸ್ ಅವತಾರದಲ್ಲಿ ದರ್ಶನ ಕೊಟ್ಟ ರವಿತೇಜ
ಟೈಗರ್ ನಾಗೇಶ್ವರ ರಾವ್
Follow us
ಮಂಜುನಾಥ ಸಿ.
|

Updated on: Aug 19, 2023 | 7:58 PM

ಮಾಸ್ ಮಹಾರಾಜ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ರವಿತೇಜ (Ravi Teja) ಹೊಸದೊಂದು ಮಾಸ್ ಆಕ್ಷನ್ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ರವಿತೇಜ ನಟನೆಯ ‘ಟೈಗರ್ ನಾಗೇಶ್ವರ್ ರಾವ್’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಸಖತ್ ಮಾಸ್ ಅವತಾರದಲ್ಲಿ ರವಿತೇಜ ಕಾಣಿಸಿಕೊಂಡಿದ್ದಾರೆ. ಇದೀಗ ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಿದೆ.

ಟೈಗರ್ ಇನ್ವೆಷನ್ ಎಂಬ ಹೆಸರಿನೊಂದಿಗೆ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಮದ್ರಾಸ್ ಸೆಂಟರ್ ಜೈಲಿನಿಂದ ಎಸ್ಕೇಪ್ ಆಗಿರುವ ಸ್ಟುವರ್ಟ್ ಪುರಂ ಕಳ್ಳನಿಗಾಗಿ ಹುಡುಗಾಟ ನಡೆಸುತ್ತಿರುವ ದೃಶ್ಯಗಳ ಮೂಲಕ ಟೀಸರ್ ಪ್ರಾರಂಭವಾಗುತ್ತದೆ. ಗುಪ್ತಚಾರ ಇಲಾಖೆಯ ಅಧಿಕಾರಿಗಳಾಗಿ ಮುರಳಿ ಶರ್ಮಾ ಹಾಗೂ ಅನುಪಮ್ ಖೇರ್ ನಟಿಸಿದ್ದಾರೆ. ಅವರು ನಾಗೇಶ್ವರ್ ರಾವ್ ಎಂಬಾತನಿಗಾಗಿ ಹುಡುಕಾಟ ನಡೆಸುತ್ತಿದ್ದು ಆತ ಕಳ್ಳ ಯಾಕೆ ಆಗುತ್ತಾನೆ ಎನ್ನುವುದನ್ನು ಮುರಳಿ ಶರ್ಮಾ ಪಾತ್ರ ವಿವರಿಸುವ ಸನ್ನಿವೇಶ ಟೀಸರ್​ನಲ್ಲಿದೆ. ಸಖತ್ ಮಾಸ್ ಅವತಾರದಲ್ಲಿ ನಟ ರವಿತೇಜ ಟೀಸರ್​ನಲ್ಲಿ ದರ್ಶನ ಕೊಟ್ಟಿದ್ದಾರೆ. ರವಿತೇಜರ ಈ ಹಿಂದಿನ ಚಿತ್ರಗಳಿಂತ ಈ ಸಿನಿಮಾದಲ್ಲಿ ಮಾಸ್ ಮಹಾರಾಜ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ಟೀಸರ್​ನಲ್ಲಿ ಕೆಲವು ಸಖತ್ ಮಾಸ್ ದೃಶ್ಯಗಳಿವೆ, ಟೈಗರ್ ನಾಗೇಶ್ವರ್ ರಾವ್ ವ್ಯಕ್ತಿತ್ವ ಬಣ್ಣಿಸುವ ಪವರ್​ಫುಲ್ ಡೈಲಾಗ್​ಗಳು ಇವೆ. ಈ ಸಿನಿಮಾ ಭರ್ಜರಿ ಆಕ್ಷನ್ ಎಂಟರ್ಟೈನರ್ ಆಗಲಿದೆ ಎಂಬ ಸುಳಿವನ್ನು ಟೀಸರ್ ನೀಡಿದೆ. ಟೀಸರ್​ನಲ್ಲಿ ಹೀರೋಯಿನ್​ಗಳನ್ನು ತೋರಿಸಲಾಗಿಲ್ಲ, ಬದಲಿಗೆ ಇಡೀ ಟೀಸರ್ ರವಿತೇಜ ಅವರಿಗಾಗಿ ಮೀಸಲಿಡಲಾಗಿದೆ. ರವಿತೇಜ ಹೊರತಾಗಿ ಮುರಳಿ ಶರ್ಮಾ ಹಾಗೂ ಅನುಪಮ್ ಖೇರ್ ಮಾತ್ರವೇ ಟೀಸರ್​ನಲ್ಲಿ ಕಾಣುತ್ತಾರೆ.

ಇದನ್ನೂ ಓದಿ:ನಟ ರವಿತೇಜಗೆ ಸಾಥ್ ಕೊಟ್ಟ ಶಿವರಾಜ್​ಕುಮಾರ್; ತೆಲುಗು ಚಿತ್ರಕ್ಕೆ ಶಿವಣ್ಣನ ಧ್ವನಿ

70ರ ದಶಕದಲ್ಲಿ ನಡೆವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಹೈದ್ರಾಬಾದ್ ನ ಸ್ಟುವರ್ಟ್ ಪುರಂ ಹೆಸರಿನ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದೆ. ಈ ಸಿನಿಮಾಕ್ಕಾಗಿ ನಟ ರವಿತೇಜ ತಮ್ಮ ಗೆಟಪ್, ದೇಹ ಭಾಷೆಯನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಮಾಡಿದ್ದಾರೆ.

ದಸರಾ ಹಬ್ಬಕ್ಕೆ ಟೈಗರ್ ನಾಗೇಶ್ವರ್ ರಾವ್ ಸಿನಿಮಾ ಬಿಡುಗಡೆ ಆಗಲಿದೆ, ಅಂದರೆ ಅಕ್ಟೋಬರ್ 20ರಂದು ವಿಶ್ವಾದ್ಯಂತ ರವಿತೇಜ ನಟನೆಯ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ