AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರುತ್ತಿದೆ ಹೊಸ ರೀತಿಯ ಪ್ಯಾನ್ ಇಂಡಿಯಾ ಸಿನಿಮಾ; ನಾಲ್ಕು ಭಾಷೆ, 24 ಟ್ಯೂನ್​

‘ಸಿಕಾಡಾ’ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಚಿತ್ರ ಮಾಡುವಾಗ ಚಿತ್ರದ ಹಾಡುಗಳಿಗೆ ಒಂದೇ ಟ್ಯೂನ್ ಇರುತ್ತದೆ ಮತ್ತು ಆಯಾ ಭಾಷೆಯಲ್ಲಿ ಸಾಹಿತ್ಯ ಬರೆದು ಸಾಂಗ್ ರಿಲೀಸ್ ಮಾಡಲಾಗುತ್ತದೆ. ಆದರೆ, ‘ಸಿಕಾಡಾ’ ಚಿತ್ರ ಈ ವಿಚಾರದಲ್ಲಿ ಭಿನ್ನವಾಗಿದೆ.

ಬರುತ್ತಿದೆ ಹೊಸ ರೀತಿಯ ಪ್ಯಾನ್ ಇಂಡಿಯಾ ಸಿನಿಮಾ; ನಾಲ್ಕು ಭಾಷೆ, 24 ಟ್ಯೂನ್​
ಸಿಕಾಡಾ
ರಾಜೇಶ್ ದುಗ್ಗುಮನೆ
|

Updated on:Aug 19, 2023 | 12:18 PM

Share

ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾ ಸಂಖ್ಯೆ ಹೆಚ್ಚುತ್ತಿದೆ. ಕನ್ನಡದ ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿವೆ. ಅದೇ ರೀತಿ ಪರಭಾಷೆಯ ಚಿತ್ರಗಳು ಡಬ್ ಆಗಿ ಕನ್ನಡದಲ್ಲಿ ಬಿಡುಗಡೆ ಆಗುತ್ತಿದೆ. ಇವುಗಳ ಮಧ್ಯೆ ‘ಸಿಕಾಡಾ’ (Cicada Movie) ಶೀರ್ಷಿಕೆಯ ಪ್ಯಾನ್ ಇಂಡಿಯಾ ಸಿನಿಮಾ ಭಿನ್ನವಾಗಿ ಗುರುತಿಸಿಕೊಳ್ಳುತ್ತಿದೆ. ಮೇಘನಾ ರಾಜ್ ಮತ್ತು ಪ್ರಜ್ವಲ್ ದೇವರಾಜ್ (Prajwal Devaraj) ಈ ಚಿತ್ರದ ಕನ್ನಡ ಅವತರಣಿಕೆಯ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಿದ್ದಾರೆ. ಮಾಜಿ ಕೃಷಿ ಸಚಿವ ಎನ್.ಎಚ್ ಶಿವಶಂಕರ ರೆಡ್ಡಿ ಚಿತ್ರಕ್ಕೆ ಶುಭಕೋರಿದ್ದಾರೆ.

‘ಸಿಕಾಡಾ’ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಚಿತ್ರ ಮಾಡುವಾಗ ಚಿತ್ರದ ಹಾಡುಗಳಿಗೆ ಒಂದೇ ಟ್ಯೂನ್ ಇರುತ್ತದೆ ಮತ್ತು ಆಯಾ ಭಾಷೆಯಲ್ಲಿ ಸಾಹಿತ್ಯ ಬರೆದು ಸಾಂಗ್ ರಿಲೀಸ್ ಮಾಡಲಾಗುತ್ತದೆ. ಆದರೆ, ‘ಸಿಕಾಡಾ’ ಚಿತ್ರ ಈ ವಿಚಾರದಲ್ಲಿ ಭಿನ್ನವಾಗಿದೆ. ಪ್ರತಿ ಅವತರಣಿಕೆಗೂ ಬೇರೆ ಬೇರೆ ಟ್ಯೂನ್ ಕಂಪೋಸ್ ಮಾಡಲಾಗಿದೆ. ಚಿತ್ರದಲ್ಲಿ ಆರು ಹಾಡುಗಳಿವೆ. ಅಂದರೆ ನಾಲ್ಕು ಭಾಷೆಯಿಂದ ಒಟ್ಟೂ 24 ಟ್ಯೂನ್ ಕಂಪೋಸ್ ಮಾಡಲಾಗಿದೆ ಅನ್ನೋದು ವಿಶೇಷ.

‘ಸಿಕಾಡಾ’ ಸಿನಿಮಾದಲ್ಲಿ ನಟಿಸಿದ ಬಹುತೇಕರು ಹೊಸ ಕಲಾವಿದರು. ಈ ಚಿತ್ರಕ್ಕೆ ಶ್ರೀಜಿತ್ ಎಡವನ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ. ಇದು ನಿರ್ದೇಶಕನಾಗಿ ಅವರಿಗೆ ಮೊದಲ ಅನುಭವ. ತಿರ್ನಾ ಫಿಲ್ಮ್ಸ್ ಮತ್ತು ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ವಂದನಾ ಮೆನನ್ ಮತ್ತು ಗೋಪಕುಮಾರ್ ಪಿ. ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಗಾಯತ್ರಿ ಮಯೂರ, ರಜಿತ್ ಸಿ.ಆರ್, ಜೈಸ್ ಜೋಸ್ ಮೊದಲಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ವಿವಿಧ ರಾಜ್ಯಗಳಲ್ಲಿ ಚಿತ್ರವನ್ನು ಶೂಟ್ ಮಾಡಲಾಗಿದೆ. ಬೆಂಗಳೂರಿನಲ್ಲೂ ಚಿತ್ರೀಕರಣ ಮಾಡಲಾಗಿದೆ ಅನ್ನೋದು ವಿಶೇಷ.

ಇದನ್ನೂ ಓದಿ: ಕೃಷ್ಣನ ಅವತಾರದಲ್ಲಿರುವ ಈ ಬಾಲಕ ಈಗ ಪ್ಯಾನ್ ಇಂಡಿಯಾ ಸ್ಟಾರ್..

ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನು ಶ್ರೀಜಿತ್ ಎಡವನ ಹೊತ್ತುಕೊಂಡಿದ್ದಾರೆ. ‘ಪ್ರೀತಿ ನನ್ನ ಕವಿಯೆ..’ ಮತ್ತು ‘ನೆಂಜೋಡು ಚೆರ್ತು..’ ಮೊದಲಾದ ಹಿಟ್ ಹಾಡುಗಳನ್ನು ನೀಡಿ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.  ನವೀನ್ ರಾಜ್ ಛಾಯಾಗ್ರಹಣ, ಶೈಜಿತ್ ಕುಮಾರನ್ ಸಂಕಲನ ಚಿತ್ರಕ್ಕಿದೆ. ಹಾಡುಗಳು ಶೀಘ್ರವೇ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:39 am, Sat, 19 August 23