‘ವೀರ ಮದಕರಿ’ಯಲ್ಲಿ ಸುದೀಪ್ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲಕಿ ಈಗ ನಾಯಕಿ; ಎಷ್ಟು ಕ್ಯೂಟ್ ನೋಡಿ
ಜೆರುಶಾ ಬೆಂಗಳೂರಿನವರೇ. ಅವರು ಪವನ್ ಕುಮಾರ್ ನಿರ್ದೇಶನದ, ಫಹಾದ್ ಫಾಸಿಲ್ ನಟನೆಯ ‘ಧೂಮಂ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಸುದೀಪ್ ಮಗಳ ಪಾತ್ರ ಮಾಡಿದ್ದರು ಎನ್ನುವ ವಿಚಾರ ಇತ್ತೀಚೆಗೆ ರಿವೀಲ್ ಆಗಿದೆ. ಸಂದರ್ಶನ ಒಂದರಲ್ಲಿ ಈ ವಿಚಾರ ಹೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
‘ವೀರ ಮದಕರಿ’ ಸಿನಿಮಾ 2009ರಲ್ಲಿ ರಿಲೀಸ್ ಆಯಿತು. ಸುದೀಪ್ (Sudeep) ಹಾಗೂ ರಾಗಿಣಿ ದ್ವಿವೇದಿ ಅವರು ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದರು. ಈ ಚಿತ್ರವನ್ನು ಸುದೀಪ್ ಅವರೇ ನಿರ್ದೇಶನ ಮಾಡಿದ್ದರು. ಈ ಸಿನಿಮಾಗೆ ಚಿತ್ರಕಥೆ ಬರೆದಿದ್ದು ಕೂಡ ಅವರೇ. ಇದು ರಾಜಮೌಳಿ (SS Rajamouli) ನಿರ್ದೇಶನದ ತೆಲುಗಿನ ‘ವಿಕ್ರಮಾರ್ಕುಡು’ ಚಿತ್ರದ ರಿಮೇಕ್ ಆಗಿತ್ತು. ಈ ಸಿನಿಮಾದಲ್ಲಿ ಸುದೀಪ್ ಮಗಳ ಪಾತ್ರದಲ್ಲಿ ಜೆರುಶಾ ಕ್ರಿಸ್ಟೋಫರ್ ಕಾಣಿಸಿಕೊಂಡಿದ್ದರು. ಈಗ ಅವರು ನಾಯಕಿ ಆಗಿ ಮಿಂಚುತ್ತಿದ್ದಾರೆ. ಅವರು ನೀಡಿದ ಸಂದರ್ಶನದ ಕ್ಲಿಪ್ ಒಂದು ವೈರಲ್ ಆಗಿದೆ.
ಜೆರುಶಾ ಬೆಂಗಳೂರಿನವರೇ. ಅವರು ಪವನ್ ಕುಮಾರ್ ನಿರ್ದೇಶನದ, ಫಹಾದ್ ಫಾಸಿಲ್ ನಟನೆಯ ‘ಧೂಮಂ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಸುದೀಪ್ ಮಗಳ ಪಾತ್ರ ಮಾಡಿದ್ದರು ಎನ್ನುವ ವಿಚಾರ ಇತ್ತೀಚೆಗೆ ರಿವೀಲ್ ಆಗಿದೆ. ಸಂದರ್ಶನ ಒಂದರಲ್ಲಿ ಈ ವಿಚಾರ ಹೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ‘ನಾನು ಕನ್ನಡದ ವೀರ ಮದಕರಿ ಸಿನಿಮಾದಲ್ಲಿ ನಟಿಸಿದ್ದೆ. ಈ ಚಿತ್ರದಲ್ಲಿ ಸುದೀಪ್ ಮಗಳ ಪಾತ್ರ ಮಾಡಿದ್ದೆ’ ಎಂದು ಜೆರುಶಾ ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ಸಂದರ್ಶಕ ‘ವಾಟ್’ ಎಂದು ಆಶ್ಚರ್ಯಸೂಚಕವಾಗಿ ಪ್ರಶ್ನೆ ಮಾಡುತ್ತಾರೆ.
ಜೆರುಶಾ ಅವರು 50ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ‘ನಾನು ಏನು ಮಾಡುತ್ತೇನೋ ಅದಕ್ಕೆ ನನ್ನ ತಂದೆ-ತಾಯಿ ಬೆಂಬಲವಾಗಿ ನಿಂತಿದ್ದಾರೆ. ಅವರು ನನ್ನ ಆಧಾರಸ್ಥಂಭ’ ಎಂದು ಜೆರುಶಾ ಸಂತೋಷ ಹೊರಹಾಕಿದ್ದಾರೆ. ಚಿತ್ರರಂಗದಲ್ಲಿ ಬೆಳೆಯಬೇಕು ಎಂಬ ಕನಸು ಅವರಿಗೆ ಇದೆ.
View this post on Instagram
ಇದನ್ನೂ ಓದಿ: Sanvi Sudeep: ‘ಮತ್ತಷ್ಟು ಬರೋದಿದೆ’; ಕುತೂಹಲ ಮೂಡಿಸಿದ ಸಾನ್ವಿ ಸುದೀಪ್ ಫೋಟೋಶೂಟ್
ಈ ವಿಡಿಯೋಗೆ ಬಗೆಬಗೆಯ ಕಮೆಂಟ್ಗಳು ಬರುತ್ತಿವೆ. ‘ಸುದೀಪ್ ಮಗಳ ಪಾತ್ರದಲ್ಲಿ ಜೆರುಶಾ ಕಾಣಿಸಿಕೊಂಡಿದ್ದರು. ಈಗ ಸುದೀಪ್ಗೆ ನಾಯಕಿ ಆಗಿ ಅವರು ಕಾಣಿಸಿಕೊಳ್ಳಬಹುದು. ಅಷ್ಟು ಸುಂದರವಾಗಿ ಬೆಳೆದಿದ್ದಾರೆ’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಅವರು ಮತ್ತಷ್ಟು ಸಿನಿಮಾಗಳಲ್ಲಿ ನಟಿಸಲಿ ಎಂದು ಅನೇಕರು ಹಾರೈಸುತ್ತಿದ್ದಾರೆ.
View this post on Instagram
View this post on Instagram
ಜೆರುಶಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 19 ಸಾವಿರ ಜನ ಹಿಂಬಾಲಕರಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ