AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಶ್’ ಸಿನಿಮಾ ಬಗ್ಗೆ ನಿರ್ದೇಶಕಿ ಮಾತು: ಕತೆಯ ಎಳೆ ಏನು?

Yash: ಯಶ್​ರ ಮುಂದಿನ ಸಿನಿಮಾ ‘ಟಾಕ್ಸಿಕ್’. ಸಿನಿಮಾದ ಟೈಟಲ್ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಸಿನಿಮಾದ ನಿರ್ದೇಶಕಿ ಗೀತು ಮೋಹನ್​ದಾಸ್ ಸಿನಿಮಾದ ಕತೆಯ ಎಳೆಯೊಂದನ್ನು ಬಿಟ್ಟುಕೊಟ್ಟಿದ್ದಾರೆ.

‘ಯಶ್’ ಸಿನಿಮಾ ಬಗ್ಗೆ ನಿರ್ದೇಶಕಿ ಮಾತು: ಕತೆಯ ಎಳೆ ಏನು?
ಗೀತು ಮೋಹನ್​ದಾಸ್
ಮಂಜುನಾಥ ಸಿ.
|

Updated on: Dec 15, 2023 | 5:16 PM

Share

ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ನೀಡಿದ್ದಾರೆ ನಟ ಯಶ್ (Yash). ಇತ್ತೀಚೆಗಷ್ಟೆ ಅವರು ತಮ್ಮ ಮುಂದಿನ ಸಿನಿಮಾದ ಹೆಸರು, ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದಾರೆ. ಯಶ್​ರ ಮುಂದಿನ ಸಿನಿಮಾಕ್ಕೆ ‘ಟಾಕ್ಸಿಕ್’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಪೋಸ್ಟರ್ ಸಖತ್ ಸ್ಟೈಲಿಷ್ ಆಗಿದೆ. ಕೈಯಲ್ಲಿ ಹಳೆಯ ಕಾಲದ ಮಷಿನ್ ಗನ್ ಹಿಡಿದು, ಬಾಯಲ್ಲಿ ಸಿಗಾರ್ ಕಚ್ಚಿ, ಕೌಬಾಯ್ ಟೋಪಿ ಧರಿಸಿರುವ ವ್ಯಕ್ತಿಯ ಚಿತ್ರ ಕುತೂಹಲ ಮೂಡಿಸುತ್ತಿದೆ. ವಿಶೇಷವೆಂದರೆ ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಮಲಯಾಳಂ ನಟಿ, ನಿರ್ದೇಶಕಿ ಗೀತು ಮೋಹನ್​ದಾಸ್.

ಕನ್ನಡದ ನಿರ್ದೇಶಕರು ಸೇರಿದಂತೆ, ಟಾಲಿವುಡ್, ಬಾಲಿವುಡ್​ಗಳ ನಿರ್ದೇಶಕರುಗಳು ಸಹ ಯಶ್​ಗೆ ಕತೆ ಹೇಳಿದ್ದರು ಎನ್ನಲಾಗಿದೆ. ಆದರೆ ಎಲ್ಲರ ಆಫರ್ ಅನ್ನು ತಿರಸ್ಕರಿಸಿದ್ದ ಯಶ್, ಕೇವಲ ಎರಡು ಸಿನಿಮಾಗಳನ್ನಷ್ಟೆ ನಿರ್ದೇಶನ ಮಾಡಿರುವ ಗೀತು ಮೋಹನ್​ದಾಸ್​ಗೆ ತಮ್ಮ ಮುಂದಿನ ಸಿನಿಮಾದ ಕ್ಯಾಪ್ಟನ್ ಸೀಟ್ ನೀಡಿದ್ದಾರೆ. ಗೀತು ನಿರ್ದೇಶಿಸಿರುವ ಎರಡೇ ಸಿನಿಮಾ, ಎರಡೂ ಸಹ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಸಕ್ಸಸ್ ಆಗಿಲ್ಲ. ಆದರೆ ಆ ಎರಡೂ ಸಿನಿಮಾಗಳು, ಗೀತು ಮೋಹನ್​ದಾಸ್​ರ ನಿಪುಣತೆಯನ್ನು, ಪ್ರತಿಭೆಯನ್ನು ಸಾರಿದ್ದವು.

ಕೆಲವು ಮೂಲಗಳ ಪ್ರಕಾರ, ಯಶ್ ಹಾಗೂ ಗೀತು ಮೋಹನ್​ದಾಸ್ ನಡುವೆ ‘ಟಾಸ್ಕಿಕ್’ ಸಿನಿಮಾದ ಕತೆಯ ಚರ್ಚೆ ನಡೆಯಲು ಆರಂಭಿಸಿ ಎರಡು ವರ್ಷಗಳಾಗಿದೆ. ಸತತ ಎರಡು ವರ್ಷಕ್ಕೂ ಹೆಚ್ಚು ಕಾಲ ಕತೆಯ ಬಗ್ಗೆ ಚರ್ಚಿಸಿ, ಚಿತ್ರಕತೆಯನ್ನು ಅಂತಿಮಗೊಳಿಸಿ, ಈಗ ಸಿನಿಮಾದ ‘ಟೈಟಲ್’ ಘೋಷಿಸಿ ಚಿತ್ರೀಕರಣಕ್ಕೆ ಇಳಿಯಲಾಗುತ್ತಿದೆ. ಎರಡು ವರ್ಷದ ಹಿಂದೆಯೇ ಗೀತು ಮೋಹನ್​ದಾಸ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಸಣ್ಣ ಸುಳಿವೊಂದನ್ನು ಬಿಟ್ಟುಕೊಟ್ಟಿದ್ದರು.

ಇದನ್ನೂ ಓದಿ:‘ಟಾಕ್ಸಿಕ್’ ಜೊತೆಗೆ ಚಿತ್ರೀಕರಣಗೊಳ್ಳಲಿದೆ ಯಶ್​ರ ಮತ್ತೊಂದು ಸಿನಿಮಾ

ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದ ಗೀತು ಮೋಹನ್​ದಾಸ್, ‘‘ನನ್ನ ಮುಂದಿನ ಸಿನಿಮಾ ಒಂದು ಗ್ಯಾಂಗ್​ಸ್ಟರ್ ಸಿನಿಮಾ ಆಗಲಿರಲಿದೆ. ಆದರೆ ಕತೆಯಲ್ಲಿ ಮಹಿಳೆಯ ಅಂಶ ಪ್ರಧಾನವಾಗಿರಲಿದೆ’’ ಎಂದಿದ್ದರು. ಗೀತು ಮೋಹನ್​ದಾಸ್​ರ ಅದೇ ಕತೆ ಈಗ ‘ಟಾಸ್ಕಿಕ್’ ಸಿನಿಮಾ ಆಗುತ್ತಿದೆ. ‘ಟಾಸ್ಕಿಕ್’ ಒಬ್ಬ ಗ್ಯಾಂಗ್​ಸ್ಟರ್​ನ ಕತೆ ಆದರೆ ಆ ಕತೆಯಲ್ಲಿ ಮಹಿಳೆಯ ಪ್ರಧಾನ ಪಾತ್ರ ವಹಿಸುತ್ತಾರೆ.

‘ಟಾಸ್ಕಿಕ್’ ಸಿನಿಮಾದ ಚಿತ್ರೀಕರಣವನ್ನು ಯಶ್ ಈಗಾಗಲೇ ಪ್ರಾರಂಭಿಸಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಸಿನಿಮಾಕ್ಕೆ ಹಾಲಿವುಡ್​ನ ಜನಪ್ರಿಯ ಆಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿಯನ್ನು ಕರೆತಂದಿದ್ದಾರೆ. ಅದ್ಭುತವಾದ ಆಕ್ಷನ್ ದೃಶ್ಯಗಳು ಈ ಸಿನಿಮಾದಲ್ಲಿ ಇರಲಿವೆ. ಅದರ ಜೊತೆಗೆ ಭಾವುಕ ಎಳೆಯೂ ಸಹ ಕತೆಯಲ್ಲಿ ಅಡಕವಾಗಿರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ