ಮಾಲಿವುಡ್ನ ಸೂಪರ್ಸ್ಟಾರ್ ಮೋಹನ್ಲಾಲ್ಗೆ (Mohanlal) ಇಂದು (ಮೇ 21) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಿಶ್ ತಿಳಿಸುತ್ತಿದ್ದಾರೆ. ಭಾರತ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಅವರು ಮಲಯಾಳಂನ ಶ್ರೀಮಂತ ನಟರಲ್ಲಿ ಒಬ್ಬರು. ಅವರಿಗೆ ನಾನಾ ಕಡೆಯಿಂದ ಹಣ ಬರುತ್ತಿದೆ. ಅವರ ಬಳಿ ಹಲವು ದುಬಾರಿ ಕಾರುಗಳು ಕೂಡ ಇವೆ. ಆ ಬಗ್ಗೆ ಇಲ್ಲಿದೆ ವಿವರ.
ಮೋಹನ್ಲಾಲ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 44 ವರ್ಷಗಳು ಕಳೆದಿವೆ. ‘ಮಂಜಿಲ್ ವಿರಿಂಜ್ ಪೂಕ್ಕಲ್’ ಅವರ ನಟನೆಯ ಮೊದಲ ಸಿನಿಮಾ. ಈ ಸಿನಿಮಾ ತೆರೆಕಂಡಿದ್ದು 1980ರಲ್ಲಿ. ಆ ಬಳಿಕ ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ನಿರ್ಮಾಪಕನಾಗಿ ಹಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಅವರು ಸಿನಿಮಾ ನಿರ್ದೇಶನಕ್ಕೂ ಇಳಿದಿದ್ದಾರೆ.
ಮೋಹನ್ಲಾಲ್ ಅವರ ಆಸ್ತಿ 380 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಿನಿಮಾ ನಿರ್ಮಾಣ, ಬ್ರ್ಯಾಂಡ್ಗಳ ಪ್ರಚಾರ, ಉದ್ಯಮ ಅವರ ಗಳಿಕೆಯ ಮೂಲ. ಮೋಹನ್ಲಾಲ್ ಅವರು 10-15 ಕೋಟಿ ರೂಪಾಯಿ ಪ್ರತಿ ಚಿತ್ರಕ್ಕೆ ಪಡೆಯುತ್ತಾರೆ. ಅವರು ಅತಿ ಹೆಚ್ಚು ಸಂಭಾವನೆ ಪಡೆಯೋ ಮಲಯಾಳಂ ಹೀರೋಗಳಲ್ಲಿ ಒಬ್ಬರು. ವರ್ಷದಿಂದ ವರ್ಷಕ್ಕೆ ಅವರ ಸಂಭಾವನೆಯಲ್ಲಿ ಏರಿಕೆ ಕಂಡಿದೆ.
ಮೋಹನ್ಲಾಲ್ ಅವರು ಹಲವು ಬ್ರ್ಯಾಂಡ್ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಜ್ಯುವೆಲರಿ, ಬಟ್ಟೆ ಮೊದಲಾದ ಕಂಪನಿಗಳಿಗೆ ಅವರು ಪ್ರಚಾರ ಮಾಡುತ್ತಾರೆ. ಇದರಿಂದ ಅವರ ಸಂಭಾವನೆ ಹೆಚ್ಚಿದೆ. ಮೋಹನ್ಲಾಲ್ ಅವರು ಉದ್ಯಮದಲ್ಲೂ ತೊಡಗಿಕೊಂಡಿದ್ದಾರೆ. ಕೊಚ್ಚಿಯಲ್ಲಿ ಅವರು ಅಮ್ಯೂಸ್ಮೆಂಟ್ ಪಾರ್ಕ್ ಹೊಂದಿದ್ದಾರೆ. ಫುಟ್ಬಾಲ್ ಇಂಡಿಯನ್ ಸೂಪರ್ ಲೀಗ್ನಲ್ಲಿ ‘ಕೇರಳ ಬ್ಲಾಸ್ಟರ್ ಎಫ್ಸಿ’ ತಂಡವನ್ನು ಹೊಂದಿದ್ದಾರೆ. ಮೋಹನ್ಲಾಲ್ ಅವರ ಬಳಿ ದುಬಾರಿ ಕಾರುಗಳಿವೆ. ಆಡಿ, ಬೆಂಜ್ ಸೇರಿ ಅನೇಕ ಕಂಪನಿಯ ಕಾರುಗಳು ಅವರ ಬಳಿ ಇವೆ. ಸಾರ್ವಜನಿಕವಾಗಿ ಅವರು ಹಲವು ದುಬಾರಿ ಕಾರುಗಳಲ್ಲಿ ಕಾಣಿಸಿಕೊಂಡಿದ್ದು ಇದೆ.
ಇದನ್ನೂ ಓದಿ: ಅಣ್ಣಾವ್ರ ಹಾಡನ್ನು ಹಾಡಲು ಪ್ರಯತ್ನಿಸಿದ ಮಲಯಾಳಂ ನಟ ಮೋಹನ್ಲಾಲ್; ಇಲ್ಲಿದೆ ವಿಡಿಯೋ
ಹಲವು ಪ್ರಶಸ್ತಿಗಳನ್ನು ಮೋಹನ್ಲಾಲ್ ಗೆದ್ದಿದ್ದಾರೆ. ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಅವರಿಗೆ ಒಲಿದಿವೆ. ನಟನೆಯಲ್ಲಿ ಅವರು ಸಾಕಷ್ಟು ಪಳಗಿದ್ದಾರೆ. ಪದ್ಮ ಶ್ರೀ, ಪದ್ಮ ಭೂಷಣ ಗೌರವ ಕೂಡ ಅವರಿಗೆ ಸಿಕ್ಕಿದೆ. ಇನ್ನೂ ಕೆಲವು ಅವಾರ್ಡ್ಗಳು ಅವರಿಗೆ ಒಲಿದಿವೆ. ಮೋಹನ್ಲಾಲ್ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಬರೋಜ್’ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಅವರ ನಿರ್ದೇಶನದ ಮೊದಲ ಸಿನಿಮಾ ಇದು. ತೆಲುಗಿನ ‘ಕಣ್ಣಪ್ಪ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಇದರ ಜೊತೆಗೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:21 am, Tue, 21 May 24