ಮಹಿಳೆಯರ ಆಭರಣ ತೊಟ್ಟು ನರ್ತಿಸಿದ ಸ್ಟಾರ್ ನಟ, ವಾವ್ ಎಂದ ಅಭಿಮಾನಿಗಳು

ನಮ್ಮ ಭಾರತೀಯ ಚಿತ್ರರಂಗ ಪುರುಷಪ್ರಧಾನ, ಚಿತ್ರರಂಗಗಳು ನಿರ್ಮಿಸುವ ಸಿನಿಮಾಗಳು ಸಹ ಪುರುಷ ಪ್ರಧಾನ. ಸೂಪರ್​ ಸ್ಟಾರ್​ಗಳ ಸಿನಿಮಾಗಳಂತೂ ಏಕಪಕ್ಷೀಯವಾಗಿ ಪುರುಷ ಪ್ರಧಾನ ಕತೆಗಳನ್ನೇ ಒಳಗೊಂಡಿರುತ್ತವೆ. ಆದರೆ ಭಾರತದ ಸೂಪರ್ ಸ್ಟಾರ್​ ನಟರುಗಳಲ್ಲಿ ಒಬ್ಬರು ಇದೀಗ ಸ್ತ್ರೀ ಸಂವೇದನೆಯನ್ನು ಅದ್ಭುತವಾಗಿ ಕ್ಯಾಮೆರಾ ಮುಂದೆ ಪ್ರದರ್ಶಿಸಿದ್ದಾರೆ.

ಮಹಿಳೆಯರ ಆಭರಣ ತೊಟ್ಟು ನರ್ತಿಸಿದ ಸ್ಟಾರ್ ನಟ, ವಾವ್ ಎಂದ ಅಭಿಮಾನಿಗಳು
Mohanlal

Updated on: Jul 19, 2025 | 6:59 PM

ಭಾರತೀಯ ಚಿತ್ರರಂಗ ಪುರುಷ ಪ್ರಧಾನ. ಚಿತ್ರರಂಗವೂ ಪುರುಷ ಪ್ರಧಾನ, ಅವರು ಮಾಡುವ ಸಿನಿಮಾಗಳು ಸಹ ಸಂಪೂರ್ಣವಾಗಿ ಪುರುಷ ಪ್ರಧಾನ. ಸ್ಟಾರ್ ನಟರುಗಳು ತಮ್ಮ ಪುರುಷತ್ವ ತೋರಿಸುವ ಡೈಲಾಗುಗಳನ್ನು ಪುಂಖಾನುಪುಂಖವಾಗಿ ಹೊಡೆಯುತ್ತಾರೆ. ನಾಯಕಿಯರ ಸೊಂಟ ಗಿಲ್ಲಿ ಗಂಡಸ್ತನದ ಪ್ರದರ್ಶನ ಮಾಡುತ್ತಾರೆ. ನೂರಾರು ಖಳರನ್ನು ಹೊಡೆದುರುಳಿಸಿ ಗಂಡಸ್ತನದ ಪ್ರದರ್ಶನ ಮಾಡುತ್ತಾರೆ. ಇದೀಗ ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರು, ತಮ್ಮೊಳಿಗೆ ಸ್ತ್ರೀಸಂವೇದನೆಯನ್ನು ತೆರೆಯ ಮೇಲೆ ತೋರಿಸಿದ್ದಾರೆ. ಈ ಕಾರಣಕ್ಕೆ ಪ್ರಶಂಸೆಗೆ ಸಹ ಗುರಿಯಾಗಿದ್ದಾರೆ.

ಮೋಹನ್​ಲಾಲ್ ಭಾರತದ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು. ಮೋಹನ್​ಲಾಲ್ ಹಲವು ಆಕ್ಷನ್, ಕಮರ್ಶಿಯಲ್ ಸಿನಿಮಾಗಳ ಜೊತೆಗೆ ಸೂಕ್ಷ್ಮ ಸಂವೇದನೆಯ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಇದೀಗ ಮೋಹನ್​ಲಾಲ್ ನಟಿಸಿರುವ ಆಭರಣ ಜಾಹೀರಾತೊಂದು ಸಖತ್ ಸದ್ದು ಮಾಡುತ್ತಿದೆ. ಸ್ಟಾರ್ ನಟರುಗಳು ಆಭರಣ ಜಾಹೀರಾತುಗಳಲ್ಲಿ ನಟಿಸುವುದು ಹೊಸತೇನೂ ಅಲ್ಲ. ಕನ್ನಡದ ಶಿವರಾಜ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.

ಆದರೆ ಮೋಹನ್​ಲಾಲ್ ಇತ್ತೀಚೆಗಷ್ಟೆ ವಿನ್​ಸ್ಮೆರಾ ಜುವೆಲ್ಸ್​ ಆಭರಣ ಮಳಿಗೆಗಳ ಜಾಹೀರಾತಿನಲ್ಲಿ ನಟಿಸಿದ್ದು, ಮೋಹನ್​ಲಾಲ್ ಅವರು ಜಾಹೀರಾತಿನಲ್ಲಿ ಸ್ತ್ರೀಸಂವೇದನೆಯ ಪ್ರದರ್ಶನ ಮಾಡಿರುವ ರೀತಿಯ ಕಾರಣಕ್ಕೆ ಈ ಜಾಹೀರಾತು ಭಾರಿ ವೈರಲ್ ಆಗಿದೆ. ಜಾಹೀರಾತು ನಿರ್ಮಾಣದ್ದೆ ಜಾಹೀರಾತನ್ನು ವಿನ್​ಸ್ಮೆರಾ ಜುವೆಲ್ಸ್ ಮಾಡಿದೆ.

ಇದನ್ನೂ ಓದಿ:‘ಕಣ್ಣಪ್ಪ’ ಸಿನಿಮಾಕ್ಕೆ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್​ಲಾಲ್ ಪಡೆದ ಸಂಭಾವನೆ ಎಷ್ಟು?

ಜಾಹೀರಾತು ಹೀಗಿದೆ, ‘ಮೋಹನ್​ಲಾಲ್ ವಿನ್​ಸ್ಮೆರಾ ಜುವೆಲ್ಸ್​ ಆಭರಣದ ಶೂಟಿಂಗ್​ಗೆಂದು ಲೊಕೇಶನ್​ಗೆ ಬರುತ್ತಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಜಾಹೀರಾತಿನ ಚಿತ್ರೀಕರಣ ಮಾಡಲು ಸಜ್ಜಾಗಿರುತ್ತಾರೆ. ಜಾಹೀರಾತಿನಲ್ಲಿ ನಾಯಕಿಯಾಗಿ ನಟಿಸುವ ಮಾಡೆಲ್ ಸಹ ಅಲ್ಲಿಯೇ ಇರುತ್ತಾರೆ. ಆ ಮಾಡೆಲ್, ಕತ್ತಿನಲ್ಲಿ ವಿನ್​ಸ್ಮೆರಾ ಜುವೆಲ್ಸ್​ ಬ್ರ್ಯಾಂಡಿನ ನೆಕ್​ಲೆಸ್ ಇರುತ್ತದೆ. ಟಚ್​ ಅಪ್ ಮಾಡಿಕೊಳ್ಳುವ ಮುಂಚೆ ಆ ಮಾಡೆಲ್ ತನ್ನ ಮೈಮೇಲಿನ ಆಭರಣಗಳನ್ನು ಅಲ್ಲಿಯೇ ಒಂದು ಪೆಟ್ಟಿಗೆಯಲ್ಲಿ ಇಡುತ್ತಾಳೆ.

ಮೋಹನ್​ಲಾಲ್ ನಟಿಸಿರುವ ಜಾಹೀರಾತು

ಇದನ್ನು ಮೋಹನ್​ಲಾಲ್ ಗಮನಿಸುತ್ತಾರೆ. ಅದಾದ ಸ್ವಲ್ಪ ಹೊತ್ತಿಗೆ ಮೋಹನ್​ಲಾಲ್ ಶೂಟಿಂಗ್ ಸೆಟ್​ನಿಂದ ಹೊರ ಹೋಗುವುದನ್ನು ನಿರ್ದೇಶಕ ವರ್ಮಾ ಗಮನಿಸುತ್ತಾರೆ. ಅಷ್ಟರಲ್ಲೇ ಸೆಟ್​ನಲ್ಲಿದ್ದ ಆಭರಣ ಕಳುವಾಗಿದೆ ಎಂದು ಗೊತ್ತಾಗುತ್ತದೆ. ಆದರೆ ಆ ಆಭರಣವನ್ನು ಮೋಹನ್​ಲಾಲ್ ತೆಗೆದುಕೊಂಡು ಹೋಗಿರುತ್ತಾರೆ. ಮಹಿಳೆಯರ ಆಭರಣಗಳನ್ನು ತಾವು ಧರಿಸಿಕೊಂಡು ಮಹಿಳೆಯರ ರೀತಿಯಲ್ಲಿಯೇ ಕನ್ನಡಿ ಮುಂದೆ ನಿಂತು ಶೃಂಗಾರ ಮಾಡಿಕೊಂಡು ನೃತ್ಯ ಮಾಡುತ್ತಿರುತ್ತಾರೆ ತಮ್ಮ ಕ್ಯಾರವ್ಯಾನ್​ನಲ್ಲಿ.

ಮೋಹನ್​ಲಾಲ್ ಅಂಥಹಾ ದೊಡ್ಡ ಸೂಪರ್​ ಸ್ಟಾರ್ ಹೀಗೆ ಭಿನ್ನವಾಗಿ ಸ್ತ್ರೀಸಂವೇದನೆಯನ್ನು ವ್ಯಕ್ತಪಡಿಸಿರುವುದಕ್ಕೆ, ಗೌರವಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ