ಈ ಚಿತ್ರದಲ್ಲಿ ನಟಿಸಿವೆ ನೂರು ಶ್ವಾನಗಳು; ಇಲ್ಲಿ ನಟಿಸಿದ ಎಲ್ಲಾ ಪ್ರಾಣಿಗಳು ಮಾತನಾಡುತ್ತವೆ

ಚಿತ್ರರಂಗದಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಿರುತ್ತವೆ. ‘ವಾಲಾಟ್ಟಿ: ಟೇಲ್ ಆಫ್ ಟೇಲ್ಸ್’ ಸಿನಿಮಾ ಕೂಡ ಹಾಗೆಯೇ ಇದೆ. ಈ ಚಿತ್ರದಲ್ಲಿ ಶ್ವಾನಗಳು ಕೂಡ ಮಾತನಾಡುತ್ತವೆ.

ಈ ಚಿತ್ರದಲ್ಲಿ ನಟಿಸಿವೆ ನೂರು ಶ್ವಾನಗಳು; ಇಲ್ಲಿ ನಟಿಸಿದ ಎಲ್ಲಾ ಪ್ರಾಣಿಗಳು ಮಾತನಾಡುತ್ತವೆ
ವಾಲಾಟ್ಟಿ ಸಿನಿಮಾ

Updated on: Aug 03, 2023 | 6:30 AM

ಶ್ವಾನಗಳ ಕುರಿತು ಇತ್ತೀಚಿನ ವರ್ಷಗಳಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗಿವೆ. ‘777 ಚಾರ್ಲಿ’ ಸಿನಿಮಾ (777 Charlie) ಸೂಪರ್ ಹಿಟ್ ಆಯಿತು. ರಕ್ಷಿತ್ ಶೆಟ್ಟಿ ನಟನೆಯ ಈ ಚಿತ್ರದಲ್ಲಿ ಶ್ವಾನ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿತ್ತು. ಅದೇ ರೀತಿ ಇತ್ತೀಚೆಗೆ ತೆರೆಗೆ ಬಂದ ತಮಿಳಿನ ‘ಅಪ್ಪತ’ ಸಿನಿಮಾ ಕೂಡ ಗಮನ ಸೆಳೆಯಿತು. ಅದೇ ರೀತಿ ಮಲಯಾಳಂನಲ್ಲಿ ‘ವಾಲಾಟ್ಟಿ: ಟೇಲ್ ಆಫ್ ಟೇಲ್ಸ್​’ (Valatty: Tale of Tails ) ಸಿನಿಮಾ ಕೂಡ ಗಮನ ಸೆಳೆಯುತ್ತಿದೆ. ಈ ಚಿತ್ರ ಜುಲೈ 21ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಿದ್ದು ಶ್ವಾನ ಪ್ರಿಯರ ಗಮನ ಸೆಳೆಯುತ್ತಿದೆ.

ಚಿತ್ರರಂಗದಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಿರುತ್ತವೆ. ‘ವಾಲಾಟ್ಟಿ: ಟೇಲ್ ಆಫ್ ಟೇಲ್ಸ್’ ಸಿನಿಮಾ ಕೂಡ ಹಾಗೆಯೇ ಇದೆ. ಈ ಚಿತ್ರದಲ್ಲಿ ಶ್ವಾನಗಳು ಕೂಡ ಮಾತನಾಡುತ್ತವೆ. ಈ ಕಾರಣಕ್ಕೆ ಸಿನಿಮಾ ಭಿನ್ನ ಎನಿಸಿಕೊಂಡಿದೆ. ಈ ಸಿನಿಮಾ ಒಟಿಟಿಯಲ್ಲಿ ಆದಷ್ಟು ಬೇಗ ಬರಲಿ ಎಂದು ಪರಭಾಷೆಯವರು ಕಾಯುತ್ತಿದ್ದಾರೆ.

ಕೇರಳದಲ್ಲಿ ಬೀದಿ ನಾಯಿಗಳ ಸಮಸ್ಯೆ ಅತೀವವಾಗಿದೆ. ಈ ಬಗ್ಗೆ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಶ್ವಾನಗಳು ಮಗುವನ್ನು ಸಾಯಿಸುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲಿ ‘ವಾಲಾಟ್ಟಿ: ಟೇಲ್ ಆಫ್ ಟೇಲ್ಸ್’ ಸಿನಿಮಾ ರಿಲೀಸ್ ಆಗಿದೆ.

‘ವಾಲಾಟ್ಟಿ: ಟೇಲ್ ಆಫ್ ಟೇಲ್ಸ್’ ಚಿತ್ರದಲ್ಲಿ 100ಕ್ಕೂ ಅಧಿಕ ಶ್ವಾನಗಳು ನಟಿಸಿವೆ. ಒಂದು ಶ್ವಾನ ಇಟ್ಟುಕೊಂಡು ಸಿನಿಮಾ ಮಾಡುವುದೇ ಚಾಲೆಂಜ್. ಹೀಗಿರುವಾಗ 100ಕ್ಕೂ ಅಧಿಕ ಶ್ವಾನಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ದೇವನ್. ಮೊದಲ ಚಿತ್ರದಲ್ಲೇ ಅವರು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Appatha Review: ಲಘು ಹಾಸ್ಯದ ಜೊತೆ ಭಾವುಕತೆಯ ಲಾಸ್ಯ ಬೆರೆತ ‘ಅಪ್ಪತ’; ಇದು ಊರ್ವಶಿ ನಟನೆಯ 700ನೇ ಸಿನಿಮಾ

ಶ್ವಾನಗಳ ಬಗ್ಗೆ ಅನೇಕರಿಗೆ ಕೆಟ್ಟ ಅಭಿಪ್ರಾಯ ಇದೆ. ಈ ಅಭಿಪ್ರಾಯ ಬದಲಾಗಬೇಕು ಎಂಬುದು ಚಿತ್ರತಂಡದ ಉದ್ದೇಶ. ಈ ಕಾರಣಕ್ಕೆ ಶ್ವಾನಗಳು ಮಾತನಾಡಿ ತಮ್ಮ ಕಷ್ಟ ಹೇಳಿಕೊಳ್ಳುವ ರೀತಿಯಲ್ಲಿ ಸಿನಿಮಾ ಮಾಡಲಾಗಿದೆ.  ಗೋಲ್ಡನ್ ರಿಟ್ರೈವರ್ ಮೊದಲಾದ ಜಾತಿಯ ಶ್ವಾನಗಳು ಸಿನಿಮಾದಲ್ಲಿವೆ. ರೋಷನ್ ಮ್ಯಾಥೀವ್, ರವೀನಾ ರವಿ, ಸನ್ನಿ ವಾಯ್ನೆ, ಅಜು ವರ್ಗೀಸ್ ಮೊದಲಾದವರು ಶ್ವಾನಗಳ ಪಾತ್ರಕ್ಕೆ ಡಬ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ