ರಾಮ್ ಚರಣ್ ಪುತ್ರಿಗೆ ಅಲ್ಲು ಅರ್ಜುನ್ ಕೊಟ್ಟ ದುಬಾರಿ ಉಡುಗೊರೆ ಏನು ನೋಡಿ
ಬನ್ನಿ ಕೊಟ್ಟ ಗಿಫ್ಟ್ ನೋಡಿ ರಾಮ್ ಚರಣ್ ದಂಪತಿ ಸಖತ್ ಖಷಿ ಆಗಿದ್ದಾರೆ. ಅವರು ಬನ್ನಿಗೆ ಧನ್ಯವಾದ ತಿಳಿಸಿದ್ದಾರೆ. ಅವರು ಮಾಡಿರುವ ಕೆಲಸಕ್ಕೆ ಅಭಿಮಾನಿಗಳ ವಲಯದಲ್ಲಿ ಮೆಚ್ಚುಗೆ ಸಿಕ್ಕಿದೆ.
ಟಾಲಿವುಡ್ ನಟ ರಾಮ್ ಚರಣ್ (Ram Charan) ಹಾಗೂ ಅವರ ಪತ್ನಿ ಉಪಾಸನಾ ದಂಪತಿ ಇತ್ತೀಚೆಗೆ ಮನೆಗೆ ಹೊಸ ಸದಸ್ಯನನ್ನು ಸ್ವಾಗತಿಸಿದ್ದರು. ಉಪಾಸನಾ ಅವರು ಹೆಣ್ಣು ಮಗುವಿಗೆ ಜನ್ಮನೀಡುವ ಮೂಲಕ ಖುಷಿ ಸುದ್ದಿ ನೀಡಿದ್ದರು. ಮದುವೆ ಆಗಿ 11 ವರ್ಷ ಕಳೆದ ಬಳಿಕ ದಂಪತಿ ಸಿಹಿ ಸುದ್ದಿ ನೀಡಿದ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದರು. ಮಗುವಿಗೆ ಕ್ಲಿನ್ ಕಾರ (Klin Kaara Konidela) ಎಂದು ಹೆಸರು ಇಡಲಾಗಿದೆ. ಉಪಾಸನಾ ಅವರು ಸದ್ಯ ಕ್ಲಿನ್ ಕಾರಳ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನೊಂದೆಡೆ ರಾಮ್ ಚರಣ್ ಮತ್ತೆ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಜ್ಯೂನಿಯರ್ ಎನ್ಟಿಆರ್ ಅವರು ರಾಮ್ ಚರಣ್ ಮಗಳಿಗೆ ಚಿನ್ನದ ಡಾಲರ್ ಉಡುಗೊರೆಯಾಗಿ ನೀಡಿದ್ದರು. ನಟ ಶರ್ವಾನಂದ್ ಕೂಡ ವಿಶೇಷ ಉಡುಗೊರೆ ಕಳುಹಿಸಿದ್ದಾರೆ ಎನ್ನಲಾಗಿತ್ತು. ಈಗ ಅಲ್ಲು ಅರ್ಜುನ್ ಸರದಿ.
ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರೂ ಸಂಬಂಧಿಕರು. ಒಂದು ರೀತಿಯಲ್ಲಿ ಕುಟುಂಬದವರ ರೀತಿಯೇ. ಹೀಗಾಗಿ, ಕ್ಲಿನ್ ಕಾರ ಮೇಲೆ ಅಲ್ಲು ಅರ್ಜುನ್ಗೆ ವಿಶೇಷ ಪ್ರೀತಿ. ಈ ಕಾರಣಕ್ಕೆ ಆಕೆಗೆ ಚಿನ್ನದ ಬಟ್ಟಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಆಕೆಯ ಹೆಸರು, ಜನ್ಮದಿನಾಂಕ ಮತ್ತು ಇತರ ವಿವರಗಳು ಈ ಪ್ಲೇಟ್ ಮೇಲೆ ಇದೆ ಎಂದು ವರದಿ ಆಗಿದೆ.
ಬನ್ನಿ ಕೊಟ್ಟ ಗಿಫ್ಟ್ ನೋಡಿ ರಾಮ್ ಚರಣ್ ದಂಪತಿ ಸಖತ್ ಖಷಿ ಆಗಿದ್ದಾರೆ. ಅವರು ಬನ್ನಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲು ಅರ್ಜುನ್ ಅವರು ಏನೇ ಮಾಡಿದರೂ ಟ್ರೆಂಡಿಂಗ್ನಲ್ಲಿರುತ್ತಾರೆ. ಈಗ ಅವರು ಮಾಡಿರುವ ಕೆಲಸಕ್ಕೆKlin Kaara Konidela ಅಭಿಮಾನಿಗಳ ವಲಯದಲ್ಲಿ ಮೆಚ್ಚುಗೆ ಸಿಕ್ಕಿದೆ.
ಇದನ್ನೂ ಓದಿ: ‘ಜವಾನ್’ ಸಿನಿಮಾದಲ್ಲಿ ನಟಿಸಲ್ವಾ ಅಲ್ಲು ಅರ್ಜುನ್? ಶಾರುಖ್ ಖಾನ್ ಚಿತ್ರದ ಬಗ್ಗೆ ಹತ್ತಾರು ಗಾಸಿಪ್
ಅಲ್ಲು ಅರ್ಜುನ್ ಅವರು ಪ್ರಸ್ತುತ ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ನಿರ್ದೇಶಕ ಸುಕುಮಾರ್ ಅವರು ಹೆಚ್ಚು ಶ್ರಮ ಹಾಕುತ್ತಿದ್ದಾರೆ. ರಶ್ಮಿಕಾ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಶ್ರೀಲೀಲಾ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ‘ರಾಮ್ ಚರಣ್’ ಗೇಮ್ ಚೇಂಜರ್ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ