AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಸಿನಿಮಾ ಒಪ್ಪಿಕೊಂಡ ನಟಿ ರಶ್ಮಿಕಾ ಮಂದಣ್ಣ; ಹೀರೋಗಿಂತ ನಟಿಗೆ ಹೆಚ್ಚು ಸಂಭಾವನೆ?

ರಶ್ಮಿಕಾ ಅವರು ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ. ಈ ಪೈಕಿ ಅವರಿಗೆ ಒಂದು ಕಥೆ ಇಷ್ಟವಾಗಿದೆ. ಈ ಚಿತ್ರಕ್ಕೆ ಸಿದ್ದು ಜೊನ್ನಲಗಡ್ಡ ಅವರು ಹೀರೋ ಎಂದು ತಿಳಿದು ಬಂದಿದೆ.

ಹೊಸ ಸಿನಿಮಾ ಒಪ್ಪಿಕೊಂಡ ನಟಿ ರಶ್ಮಿಕಾ ಮಂದಣ್ಣ; ಹೀರೋಗಿಂತ ನಟಿಗೆ ಹೆಚ್ಚು ಸಂಭಾವನೆ?
ಸಿದ್ದು-ರಶ್ಮಿಕಾ
ರಾಜೇಶ್ ದುಗ್ಗುಮನೆ
|

Updated on: Aug 03, 2023 | 7:54 AM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸಿನಿಮಾ ಮೂಲಕ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಸದ್ಯ ಅವರ ಗಮನ ಬಾಲಿವುಡ್ ಹಾಗೂ ಟಾಲಿವುಡ್​ ಮೇಲಿದೆ. ಅಲ್ಲಿಯೇ ರಶ್ಮಿಕಾ ಹೆಚ್ಚು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇವರ ಬಗ್ಗೆ ಹುಟ್ಟಿಕೊಳ್ಳುವ ಗಾಸಿಪ್​ಗಳು ಒಂದೆರಡಲ್ಲ. ಹೀಗಿರುವಾಗಲೇ ರಶ್ಮಿಕಾ ಬಗ್ಗೆ ಹೊಸ ಸುದ್ದಿಯೊಂದು ಹುಟ್ಟಿಕೊಂಡಿದೆ. ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಹೀರೋಗಿಂತ ರಶ್ಮಿಕಾ ಅವರೇ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ರಶ್ಮಿಕಾ ಮಂದಣ್ಣ ಅವರು ನಿತಿನ್ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ ಡೇಟ್ಸ್​ ಹೊಂದಾಣಿಕೆ ಆಗದ ಕಾರಣಕ್ಕೆ ಅವರು ಸಿನಿಮಾದಿಂದ ಹೊರ ನಡೆದರು. ರಶ್ಮಿಕಾ ಅವರು ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ. ಈ ಪೈಕಿ ಅವರಿಗೆ ಒಂದು ಕಥೆ ಇಷ್ಟವಾಗಿದೆ. ಈ ಚಿತ್ರಕ್ಕೆ ಸಿದ್ದು ಜೊನ್ನಲಗಡ್ಡ ಅವರು ಹೀರೋ ಎಂದು ತಿಳಿದು ಬಂದಿದೆ. ನೀರಜ ಕೋನ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. ಇದು ಅವರ ನಿರ್ದೇಶನದ ಮೊದಲ ಸಿನಿಮಾ.

ಸಿದ್ದು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2009ರಲ್ಲಿ ಬಂದ ‘ಜೋಶ್’ ಚಿತ್ರದಲ್ಲಿ ಅವರು ಮುಖ್ಯ ಪಾತ್ರ ಒಂದನ್ನು ನಿರ್ವಹಿಸಿದ್ದರು. ‘ಎಲ್​ಬಿಡಬ್ಲ್ಯೂ: ಲೈಫ್ ಬಿಫೋರ್ ವೆಡ್ಡಿಂಗ್’ (2011) ಚಿತ್ರದ ಮೂಲಕ ಅವರು ಹೀರೋ ಆದರು. ಕಳೆದ ವರ್ಷ ರಿಲೀಸ್ ಆದ ‘ಡಿಜೆ ಟಿಲ್ಲು’ ಸಿನಿಮಾ ಮೂಲಕ ಸಿದ್ದು ಯಶಸ್ಸು ಕಂಡರು. ಈಗ ಮೂರ್ನಾಲ್ಕು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಇದರ ಜೊತೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ವಿಜಯ್​ ದೇವರಕೊಂಡ ಅವರ ಶರ್ಟ್​ ಧರಿಸಿ ಓಡಾಡುತ್ತಿದ್ದಾರಾ ರಶ್ಮಿಕಾ ಮಂದಣ್ಣ? ವಿಡಿಯೋ ವೈರಲ್​ 

ರಶ್ಮಿಕಾ ಮಂದಣ್ಣ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಪುಷ್ಪ 2’ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ‘ಅನಿಮಲ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರಕ್ಕೆ ರಣಬೀರ್ ಕಪೂರ್ ಹೀರೋ. ‘ರೇನ್​ಬೋ’ ಸಿನಿಮಾಗಳು ಭರದಿಂದ ಸಾಗುತ್ತಿವೆ. ಇದಲ್ಲದೆ ಇನ್ನೂ ಅನೇಕ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಯಾವುದೂ ಅಧಿಕೃತವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ