‘ಹೆಚ್ಚಿನದ್ದನ್ನು ನಿರೀಕ್ಷಿಸಲಾಗಿತ್ತು’; ಅಜಿತ್ ನಟನೆಯ ‘ವಿದಾಮುಯರ್ಚಿ’ ಸಿನಿಮಾ ನೋಡಿ ಫ್ಯಾನ್ಸ್ ಹೇಳಿದ್ದಿಷ್ಟು

Vidaamuyarchi Twitter Review: ಅಜಿತ್ ಕುಮಾರ್ ಅವರ ‘ವಿದಾಮುಯರ್ಚಿ’ ಚಿತ್ರವು ಫೆಬ್ರವರಿ 6 ರಂದು ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಟ್ವಿಟರ್‌ನಲ್ಲಿ ಚರ್ಚೆಗಳು ನಡೆದಿದ್ದು, ಕೆಲವರು ಚಿತ್ರವನ್ನು ಹೊಗಳಿದರೆ, ಮತ್ತೆ ಕೆಲವರು ನಿರೀಕ್ಷೆಗೆ ತಕ್ಕಷ್ಟು ಇರಲಿಲ್ಲ ಎಂದಿದ್ದಾರೆ. ಅಜಿತ್ ಅವರ ಆಕ್ಷನ್ ದೃಶ್ಯಗಳು ಹಾಗೂ ಅವರ ಮತ್ತು ತ್ರಿಷಾ ಅವರ ರೊಮ್ಯಾಂಟಿಕ್ ದೃಶ್ಯಗಳು ಹೆಚ್ಚು ಮೆಚ್ಚುಗೆ ಪಡೆದಿವೆ.

‘ಹೆಚ್ಚಿನದ್ದನ್ನು ನಿರೀಕ್ಷಿಸಲಾಗಿತ್ತು’; ಅಜಿತ್ ನಟನೆಯ ‘ವಿದಾಮುಯರ್ಚಿ’ ಸಿನಿಮಾ ನೋಡಿ ಫ್ಯಾನ್ಸ್ ಹೇಳಿದ್ದಿಷ್ಟು
ಅಜಿತ್ ಕುಮಾರ್

Updated on: Feb 06, 2025 | 12:28 PM

ಅಜಿತ್ ಕುಮಾರ್ ನಟನೆಯ ‘ವಿದಾಮುಯರ್ಚಿ’ ಸಿನಿಮಾ ಇಂದು (ಫೆಬ್ರವರಿ 6) ರಿಲಿಸ್ ಆಗಿದೆ. ಈ ಚಿತ್ರದ ಮೇಲೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಹಾಗಾದರೆ, ಈ ನಿರೀಕ್ಷೆಯನ್ನು ಸಿನಿಮಾ ಮೀರಿತೆ? ಸಿನಿಮಾ ಹೇಗಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಟ್ವಿಟರ್​ನಲ್ಲಿ ಚರ್ಚೆಗಳು ನಡೆಯುತ್ತಿವೆ. ಸಿನಿಮಾ ನೋಡಿದ ಕೆಲವರು ಬಾಯ್ತುಂಬ ಹೊಗಳಿದರೆ, ಇನ್ನೂ ಕೆಲವರು ಸಿನಿಮಾದಿಂದ ಹೆಚ್ಚಿನದನ್ನು ನಿರೀಕ್ಷಿಸಿದ್ದೆವು ಎಂದು ಹೇಳಿದ್ದಾರೆ.

ಅಜಿತ್ ಕುಮಾರ್ ಅವರ ನಟನೆಯ ‘ವಿದಾಮುಯರ್ಚಿ’ ಚಿತ್ರವನ್ನು ಮಗಿಳ್ ತಿರುಮನೇನಿ ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿದ್ದ ಟ್ರೇಲರ್ ಗಮನ ಸೆಳೆದಿತ್ತು. ಈಗ ಚಿತ್ರ ರಿಲೀಸ್ ಆಗಿದ್ದು ಅನೇಕರು ಸಿನಿಮಾನ ಹೊಗಳುವ ಕೆಲಸ ಮಾಡಿದ್ದಾರೆ. ಅಜಿತ್ ಅವರ ಆ್ಯಕ್ಷನ್ ದೃಶ್ಯಗಳು ಅನೇಕರಿಗೆ ಇಷ್ಟ ಆಗಿದೆ.

‘ಅಜಿತ್ ಅವರು ಮಾಸ್ ಆಗಿ ಎಂಟ್ರಿ ಕೊಡ್ತಾರೆ ಎಂದು ನಿರ್ದೇಶಕರು ಹೇಳಿದ್ದರು. ಹಾಗೆಯೇ ಅವರ ಎಂಟ್ರಿ ಆಗಿದೆ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ. ಇನ್ನೂ ಕೆಲವರು ಅಜಿತ್ ಹಾಗೂ ತ್ರಿಷಾ ಅವರ ರೊಮ್ಯಾಂಟಿಕ್ ದೃಶ್ಯವನ್ನು ಹೊಗಳಿದ್ದಾರೆ. ಕೆಲವರು ಅನಿರುದ್ಧ್ ಅವರ ಹಿನ್ನೆಲೆ ಸಂಗೀತವನ್ನು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: ‘ವಿದಾಮುಯಾರ್ಚಿ’ ಟ್ರೇಲರ್ ರಿಲೀಸ್; ಆ್ಯಕ್ಷನ್ ಅವತಾರದಲ್ಲಿ ಗಮನ ಸೆಳೆದ ಅಜಿತ್

ಅಜಿತ್ ಅವರು ರೇಸ್ ದೃಶ್ಯಗಳನ್ನು ಸ್ವತಃ ತಾವೇ ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲೂ ಹಾಗೆಯೇ ಆಗಿದೆ. ಈ ಚಿತ್ರದಲ್ಲೂ ಅದು ಮುಂದುವರಿದಿದ್ದು, ಅಭಿಮಾನಿಗಳಿಗೆ ಸಾಕಷ್ಟು ಇಷ್ಟ ಆಗಿದೆ. ಕೆಲವರು ‘ಹೆಚ್ಚಿನದ್ದನ್ನು ನಿರೀಕ್ಷಿಸಲಾಗಿತ್ತು’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.