Pushpa Twitter Review: ಅಲ್ಲು ಅರ್ಜುನ್​, ರಶ್ಮಿಕಾ ಚಿತ್ರ ಹಲವರಿಗೆ ಇಷ್ಟವಾಯ್ತು, ಕೆಲವರಿಗೆ ಕಷ್ಟವಾಯ್ತು

| Updated By: ಮದನ್​ ಕುಮಾರ್​

Updated on: Dec 17, 2021 | 7:49 AM

Pushpa Movie Review: ಅನೇಕ ಕಾರಣಗಳಿಂದ ‘ಪುಷ್ಪ’ ಚಿತ್ರದ ಕ್ರೇಜ್​ ಹೆಚ್ಚಿತ್ತು. ಈಗ ಸಿನಿಮಾ ನೋಡಿಬಂದವರು ಟ್ವಿಟರ್​ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.

Pushpa Twitter Review: ಅಲ್ಲು ಅರ್ಜುನ್​, ರಶ್ಮಿಕಾ ಚಿತ್ರ ಹಲವರಿಗೆ ಇಷ್ಟವಾಯ್ತು, ಕೆಲವರಿಗೆ ಕಷ್ಟವಾಯ್ತು
‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್
Follow us on

ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ ‘ಪುಷ್ಪ’ ಸಿನಿಮಾ ಇಂದು (ಡಿ.17) ಅದ್ದೂರಿಯಾಗಿ ತೆರೆಕಂಡಿದೆ. ಅನೇಕ ಕಡೆಗಳಲ್ಲಿ ಮುಂಜಾನೆಯೇ ಶೋ ಆರಂಭ ಆಗಿದೆ. ತೆಲುಗಿನಲ್ಲಿ ತಯಾರಾದ ಈ ಸಿನಿಮಾ ಕನ್ನಡ, ಮಲಯಾಳಂ, ಹಿಂದಿ ಮತ್ತು ತಮಿಳು ಭಾಷೆಗೂ ಡಬ್​ ಆಗಿ ಬಿಡುಗಡೆ ಆಗಿದೆ. ನಿರ್ದೇಶಕ ಸುಕುಮಾರ್​ ಅವರ ಬತ್ತಳಿಕೆಯಿಂದ ಬಂದ ಬಹುನಿರೀಕ್ಷಿತ ಸಿನಿಮಾ ಇದು. ಡಾಲಿ ಧನಂಜಯ, ಫಹಾದ್​ ಫಾಸಿಲ್ ಸೇರಿದಂತೆ ಅನೇಕ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಮಂತಾ ಕಾಣಿಸಿಕೊಂಡಿರುವ ‘ಹು ಅಂತಿಮಾ ಮಾವ, ಊಹು ಅಂತಿಯಾ ಮಾವ..’ ಹಾಡಿನಿಂದ ‘ಪುಷ್ಪ’ ಚಿತ್ರದ ಕ್ರೇಜ್​ ಹೆಚ್ಚಿತ್ತು. ಈಗ ಸಿನಿಮಾ ನೋಡಿಬಂದವರು ಟ್ವಿಟರ್​ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಡಿಫರೆಂಟ್​ ಗೆಟಪ್​ನಲ್ಲಿ ಅಲ್ಲು ಅರ್ಜುನ್​ ಕಾಣಿಸಿಕೊಂಡಿದ್ದಾರೆ. ತುಂಬ ಮಾಸ್​ ಆಗಿ ಸಿನಿಮಾ ಮೂಡಿಬಂದಿದೆ. ರಶ್ಮಿಕಾ ಪಾತ್ರ ಕೂಡ ಭಿನ್ನವಾಗಿದೆ. ಕೆಲವರು ಈ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನೂ ಕೆಲವರು ಇದೊಂದು ಸಾಮಾನ್ಯ ಸಿನಿಮಾ ಎಂದು ಹೇಳುತ್ತಿದ್ದಾರೆ. ಟ್ವಿಟರ್​ನಲ್ಲಿ ಎಲ್ಲ ಬಗೆಯ ಪ್ರತಿಕ್ರಿಯೆಗಳು ಸಿಗುತ್ತಿವೆ.

‘ಅಲ್ಲು ಅರ್ಜುನ್​ ಅವರ ಅಪ್ಪಟ ಅಭಿಮಾನಿಯಾಗಿ ಹೇಳುತ್ತೇನೆ.. ಈ ಸಿನಿಮಾದ ಮೊದಲಾರ್ಧದಲ್ಲಿ 20 ನಿಮಿಷ ತುಂಬ ಸ್ಲೋ ಎನಿಸುತ್ತದೆ. ಆದರೆ ಇಡೀ ಸಿನಿಮಾದಲ್ಲಿ ನೀವು ಅಲ್ಲು ಅರ್ಜುನ್​ ಅವರನ್ನು ಬೇರೆಯದೇ ರೀತಿಯಲ್ಲಿ ನೋಡುತ್ತೀರಿ. ಮಾಸ್​ ಮಾಸ್​ ಮಾಸ್​. ಅಲ್ಲು ಅರ್ಜುನ್​ ಅಭಿಮಾನಿ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್​ ಮಾಡಿದ್ದಾರೆ.

‘ಫಸ್ಟ್​ ಹಾಫ್​ ಮುಗಿಯಿತು. ಇದು ಅಲ್ಲು ಅರ್ಜುನ್​ ಅವರ ಒನ್​ ಮ್ಯಾನ್​ ಶೋ’ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಅಲ್ಲು ಅರ್ಜುನ್​ ಅವರ ರಗಡ್ ಲುಕ್​ ಮತ್ತು ಮ್ಯಾನರಿಸಂ ಸಖತ್​ ಇಷ್ಟ ಆಗುತ್ತದೆ. ಹಳ್ಳಿ ಹಿನ್ನೆಲೆಯಲ್ಲಿ ಎಲ್ಲ ಕಲಾವಿದರ ಡೈಲಾಗ್​ಗಳು ನಿಮ್ಮನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ರಶ್ಮಿಕಾ ಮತ್ತು ಅಲ್ಲು ಅರ್ಜುನ್​ ಅವರ ಲವ್​ ಹಾಗೂ ಕಾಮಿಡಿ ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ’ ಎಂದು ಅಭಿಮಾನಿಯೊಬ್ಬರು ಟ್ವೀಟ್​ ಮಾಡಿದ್ದಾರೆ.


ಕೆಲವರಿಗೆ ಈ ಚಿತ್ರ ಇಷ್ಟ ಆಗಿಲ್ಲ. ಹಾಗಾಗಿ ನೆಗೆಟಿವ್​ ಪ್ರತಿಕ್ರಿಯೆಗಳು ಕೂಡ ಬಂದಿವೆ. ‘ಕೇವಲ ಎರಡು ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ. ಸಾಧಾರಣ ಅಥವಾ ಅದಕ್ಕಿಂತಲೂ ಕೆಳಗೆ. ಈ ಚಿತ್ರ ಹೀನಾಯವಾಗಿ ಸೋಲುವುದಿಲ್ಲ, ಅದ್ಭುತವಾಗಿ ಗೆಲ್ಲುವುದೂ ಇಲ್ಲ’ ಎಂಬ ಅಭಿಪ್ರಾಯ ಕೂಡ ಟ್ವಿಟರ್​ನಲ್ಲಿ ವ್ಯಕ್ತವಾಗಿದೆ.

ಇದನ್ನೂ ಓದಿ:

ಕರ್ನಾಟಕದಲ್ಲಿ ‘ಪುಷ್ಪ’ ಚಿತ್ರ ಬಹಿಷ್ಕರಿಸುವಂತೆ ಒತ್ತಾಯ; ಕಾರಣ ಏನು?

Allu Arjun: ಕನ್ನಡ ಮಾಧ್ಯಮಗಳ ಎದುರು ಬಹಿರಂಗ ಕ್ಷಮೆಯಾಚಿಸಿದ ಅಲ್ಲು ಅರ್ಜುನ್​