ಧನಂಜಯ-ಅಮೃತಾ ಅಯ್ಯಂಗಾರ್
ಧನಂಜಯ (Dhananjay) ಹಾಗೂ ಅಮೃತಾ ಅಯ್ಯಂಗಾರ್ (Amrutha Iyengar) ನಟನೆಯ ‘ಬಡವ ರಾಸ್ಕಲ್’ (Badava Rascal)ಇಂದು (ಡಿಸೆಂಬರ್ 24) ತೆರೆಗೆ ಬಂದಿದೆ. ಕ್ರಿಸ್ಮಸ್ ಪ್ರಯುಕ್ತ ಈ ಸಿನಿಮಾ ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ಆಟೋ ಡ್ರೈವರ್ ಆಗಿ ಧನಂಜಯ ಕಾಣಿಸಿಕೊಂಡಿದ್ದಾರೆ. ‘ಟಗರು’, ‘ಪುಷ್ಪ’ ಚಿತ್ರಗಳ ವಿಲನ್ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದ ಅವರು ಈಗ ಹೀರೋ ಪಾತ್ರಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿದ್ದ ಟ್ರೇಲರ್ನಿಂದ ಜನರಿಗೆ ‘ಬಡವ ರಾಸ್ಕಲ್’ ಬಗ್ಗೆ ನಿರೀಕ್ಷೆ ಹುಟ್ಟಿಕೊಂಡಿತ್ತು. ಹಾಗಾದರೆ ಈ ನಿರೀಕ್ಷೆಯನ್ನು ತಲುಪೋಕೆ ಈ ಚಿತ್ರದಿಂದ ಸಾಧ್ಯವಾಯಿತೇ? ಹೇಗಿದೆ ‘ಬಡವ ರಾಸ್ಕಲ್’ ಮೊದಲಾರ್ಧ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
- ಡಾಲಿ ಧನಂಜಯ ಅವರು ಮಿಡ್ಲ್ ಕ್ಲಾಸ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ಅವರು ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.
- ‘ಬಡವ ರಾಸ್ಕಲ್’ ಮೊದಲಾರ್ಧದಲ್ಲಿ ಫ್ರೆಂಡ್ಶಿಪ್ ಕಥೆ ಹೈಲೈಟ್ ಆಗಿದೆ. ಟ್ರೇಲರ್ನಲ್ಲಿ ನಿರೀಕ್ಷೆ ಮೂಡಿಸಿದ ರೀತಿಯಲ್ಲೇ ಗೆಳೆತನದ ಕಥೆ ಮೂಡಿಬಂದಿದೆ.
- ಪೂರ್ತಿ ಮೊದಲಾರ್ಧದಲ್ಲಿ ಪಂಚಿಂಗ್ ಡೈಲಾಗ್ಗಳು ಗಮನ ಸೆಳೆಯುತ್ತವೆ. ಸಂಭಾಷಣೆಗಳು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತವೆ.
- ಈ ಸಿನಿಮಾದಲ್ಲಿ ಪೋಷಕ ನಟ ನಾಗಭೂಷಣ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಸಿಕ್ಕಿದೆ. ಬಹುತೇಕ ದೃಶ್ಯಗಳಲ್ಲಿ ಅವರು ಮಿಂಚಿದ್ದಾರೆ.
- ರಂಗಾಯಣ ರಘು ಮತ್ತು ತಾರಾ ಅನುರಾಧ ಅವರು ಕಥಾನಾಯಕನ ತಂದೆ-ತಾಯಿ ಆಗಿ ಮನಸೆಳೆಯುವ ಅಭಿನಯ ನೀಡಿದ್ದಾರೆ. ಅವರ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತವೆ.
- ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ಅವರ ಕಾಂಬಿನೇಷನ್ ಚೆನ್ನಾಗಿದೆ. ಅವರಿಬ್ಬರ ಲವ್ಸ್ಟೋರಿ ಸೆಕೆಂಡ್ ಹಾಫ್ನಲ್ಲಿ ಇನ್ನಷ್ಟು ತಿರುವುಗಳನ್ನು ಪಡೆದುಕೊಳ್ಳುವ ಸುಳಿವು ಸಿಕ್ಕಿದೆ.
ಇದನ್ನೂ ಓದಿ: Dhananjay: 20 ರೂ ಪೆಟ್ರೋಲ್ ಹಾಕಿಸ್ತೀವಿ ಕೊಡು ಎಂದು ಫ್ರೆಂಡ್ ಗಾಡಿ ತೆಗೆದುಕೊಂಡು ಹೋಗುತ್ತಿದ್ದೆವು; ಆ ದಿನಗಳನ್ನು ಸ್ಮರಿಸಿದ ಧನಂಜಯ್
‘ರೈಡರ್’, ‘ಬಡವ ರಾಸ್ಕಲ್’ ಚಿತ್ರಗಳ ಬಗ್ಗೆ ರಮ್ಯಾ ನಿರೀಕ್ಷೆ; ಡಾಲಿ ಧನಂಜಯಗೆ ಮತ್ತೆ ಮತ್ತೆ ಪ್ರೀತಿ-ಪ್ರೋತ್ಸಾಹ