Drishyam 2 Twitter Review: ‘ದೃಶ್ಯಂ 2’ ಟ್ವಿಟರ್​ ವಿಮರ್ಶೆ; ಅಜಯ್​ ದೇವಗನ್​ ಚಿತ್ರಕ್ಕೆ ಪ್ರೇಕ್ಷಕರ ರಿಯಾಕ್ಷನ್​ ಇಲ್ಲಿದೆ..

| Updated By: ಮದನ್​ ಕುಮಾರ್​

Updated on: Nov 18, 2022 | 2:29 PM

Drishyam 2 Movie Review | Ajay Devgn: ‘ದೃಶ್ಯಂ’ ಮೊದಲ ಪಾರ್ಟ್​ ಮತ್ತು ‘ದೃಶ್ಯಂ 2’​ ನಡುವೆ ಕಥೆ ಚೆನ್ನಾಗಿ ಸಿಂಕ್​ ಆಗಿದೆ. ಅಜಯ್​ ದೇವಗನ್​, ಶ್ರೀಯಾ ಶರಣ್​, ಟಬು, ಅಕ್ಷಯ್​ ಖನ್ನಾ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

Drishyam 2 Twitter Review: ‘ದೃಶ್ಯಂ 2’ ಟ್ವಿಟರ್​ ವಿಮರ್ಶೆ; ಅಜಯ್​ ದೇವಗನ್​ ಚಿತ್ರಕ್ಕೆ ಪ್ರೇಕ್ಷಕರ ರಿಯಾಕ್ಷನ್​ ಇಲ್ಲಿದೆ..
‘ದೃಶ್ಯಂ 2’ ಸಿನಿಮಾ ಪೋಸ್ಟರ್​
Follow us on

‘ದೃಶ್ಯಂ’ ಸಿನಿಮಾ ಮೂಡಿಸಿದ್ದ ಸಂಚಲನ ಸಣ್ಣದೇನಲ್ಲ. ಮಲಯಾಳಂನ ಆ ಚಿತ್ರ ಬೇರೆ ಬೇರೆ ಭಾಷೆಗಳಿಗೆ ರಿಮೇಕ್​ ಆಗಿಯೂ ಗೆಲುವು ಕಂಡಿತ್ತು. ಬಳಿಕ 2021ರಲ್ಲಿ ‘ದೃಶ್ಯಂ 2’ (Drishyam 2) ಕೂಡ ಬಂತು. ಆ ಸಿನಿಮಾ ಸಹ ಬೇರೆ ಬೇರೆ ಭಾಷೆಗಳಿಗೆ ರಿಮೇಕ್​ ಆಯಿತು.​ ಹಿಂದಿಯಲ್ಲಿ ಅಜಯ್​ ದೇವಗನ್​ (Ajay Devgn) ನಟಿಸಿರುವ ‘ದೃಶ್ಯಂ 2’ ಇಂದು (ನ.18) ಬಿಡುಗಡೆ ಆಗಿದೆ. ಅವರ ಜೊತೆ ಶ್ರೀಯಾ ಶರಣ್​, ಟಬು, ಅಕ್ಷಯ್​ ಖನ್ನಾ, ಇಶಿತಾ ದತ್ತ ಮುಂತಾದವರು ನಟಿಸಿದ್ದಾರೆ. ಮೊದಲ ದಿನ ಮೊದಲ ಶೋ ನೋಡಿ ಬಂದ ಪ್ರೇಕ್ಷಕರು ಟ್ವಿಟರ್​ ಮೂಲಕ ವಿಮರ್ಶೆ (Drishyam 2 Movie Twitter Review) ತಿಳಿಸಿದ್ದಾರೆ. ಈ ಚಿತ್ರಕ್ಕೆ ಅಭಿಷೇಕ್​ ಪಾಠಕ್​ ನಿರ್ದೇಶನ ಮಾಡಿದ್ದಾರೆ. ಸಿನಿಪ್ರಿಯರಿಂದ ‘ದೃಶ್ಯಂ 2’ ಸಿನಿಮಾ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

‘ಈ ಸಿನಿಮಾದ ಕಥೆ ತುಂಬ ಥ್ರಿಲ್ಲಿಂಗ್​ ಆಗಿದೆ. ಯಾವುದೇ ಕಾರಣಕ್ಕೂ ಮಿಸ್​ ಮಾಡಿಕೊಳ್ಳಬೇಡಿ. ನಿರ್ದೇಶಕ ಅಭಿಷೇಕ್​ ಪಾಠಕ್​ ಅವರು ಚೆನ್ನಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಅಜಯ್​ ದೇವಗನ್​, ಟಬು, ಅಕ್ಷಯ್​ ಖನ್ನಾ ಅವರು ಅಭಿನಯ ಸೂಪರ್​ ಆಗಿದೆ’ ಎಂದು ಪ್ರೇಕ್ಷಕರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ
Mili Twitter Review: ಜಾನ್ವಿ ಕಪೂರ್​ ಅಭಿನಯಕ್ಕೆ ಕೇಳಿಬರ್ತಿದೆ ಮೆಚ್ಚುಗೆ; ‘ಮಿಲಿ’ ನೋಡಿ ವಿಮರ್ಶೆ ತಿಳಿಸಿದ ಸಿನಿಪ್ರಿಯರು
Gandhada Gudi Twitter Review: ಹೇಗಿದೆ ‘ಗಂಧದ ಗುಡಿ’?; ಪ್ರೀಮಿಯರ್​ ಶೋ ಬಳಿಕ ಟ್ವಿಟರ್​ ಮೂಲಕ ವಿಮರ್ಶೆ ತಿಳಿಸಿದ ಫ್ಯಾನ್ಸ್​
Ram Setu Twitter Review: ‘ರಾಮ್​ ಸೇತು’ ಟ್ವಿಟರ್​ ವಿಮರ್ಶೆ: ಅಕ್ಷಯ್​ ಕುಮಾರ್​ ಚಿತ್ರಕ್ಕೆ ಜನರಿಂದ ಸಿಕ್ತಾ ಪ್ರಶಂಸೆ?
Goodbye Twitter Review: ರಶ್ಮಿಕಾ ಮೊದಲ ಹಿಂದಿ ಚಿತ್ರ ‘ಗುಡ್​ಬೈ’ ಹೇಗಿದೆ? ಜನರು ತಿಳಿಸಿದ ಟ್ವಿಟರ್ ವಿಮರ್ಶೆ ಇಲ್ಲಿದೆ ಓದಿ..

ಆತ್ಮರಕ್ಷಣೆಗಾಗಿ ನಡೆದ ಒಂದು ಕೊನೆಯನ್ನು ಕಥಾನಾಯಕ ಮುಚ್ಚಿ ಹಾಕುತ್ತಾನೆ. ತನ್ನ ಕುಟುಂಬದವರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಚಾಲಾಕಿತನದಿಂದ ಬಚಾವ್​ ಮಾಡುತ್ತಾನೆ. ಇದು ‘ದೃಶ್ಯಂ’ ಮೊದಲ ಪಾರ್ಟ್​ ಕಥೆ. ಎರಡನೇ ಪಾರ್ಟ್​ನಲ್ಲಿ ಆ ಕೇಸ್​ ಮತ್ತೆ ಓಪನ್​ ಆಗುತ್ತದೆ. ಹಲವು ಟ್ವಿಸ್ಟ್​ಗಳ ಮೂಲಕ ಕಥೆ ಸಾಗುತ್ತದೆ. ಈ ಬಾರಿ ಹೀರೋ ತನ್ನ ಕುಟುಂಬವನ್ನು ಹೇಗೆ ರಕ್ಷಿಸುತ್ತಾನೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

‘ದೃಶ್ಯಂ 2’ ಚಿತ್ರದಲ್ಲಿ ಬರುವ ಟ್ವಿಸ್ಟ್​ಗಳನ್ನು ನೋಡಿ ಪ್ರೇಕ್ಷಕರು ಎಂಜಾಯ್​ ಮಾಡುತ್ತಿದ್ದಾರೆ. ಉತ್ತರ ಭಾರತದ ಮಂದಿಗೆ ಈ ಸಿನಿಮಾ ಇಷ್ಟ ಆಗುತ್ತಿದೆ. ಆದರೆ ಬಹುತೇಕರು ಈ ಚಿತ್ರವನ್ನು ಒಟಿಟಿ ಮೂಲಕ ಮಲಯಾಳಂನಲ್ಲಿ ನೋಡಿದ್ದಾರೆ. ಅದರಿಂದ ಬಾಕ್ಸ್​ ಆಫೀಸ್​ನಲ್ಲಿ ಹಿಂದಿ ರಿಮೇಕ್​ಗೆ ತುಂಬ ಉತ್ತಮವಾದ ಕಲೆಕ್ಷನ್ ಆಗುತ್ತೋ ಇಲ್ಲವೋ ಎಂಬ ಅನುಮಾನ ಇದೆ. ಉತ್ತಮ ವಿಮರ್ಶೆ ಸಿಕ್ಕಿದೆಯಾದರೂ ಮುಂದಿನ ದಿನಗಳಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

ಮೊದಲ ಪಾರ್ಟ್​ ಮತ್ತು ಎರಡನೇ ಪಾರ್ಟ್​ ನಡುವೆ ಕಥೆ ಚೆನ್ನಾಗಿ ಸಿಂಕ್​ ಆಗಿದೆ. ಅದು ಎಲ್ಲರಿಗೂ ಹೆಚ್ಚು ಥ್ರಿಲ್​ ನೀಡುತ್ತಿದೆ. ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರವನ್ನು ಬಯಸುವವರಿಗೆ ಇದು ಹೇಳಿ ಮಾಡಿಸಿದ ಸಿನಿಮಾ ಎಂದು ಸಿನಿಪ್ರಿಯರು ಅಭಿಪ್ರಾಯ ಪಟ್ಟಿದ್ದಾರೆ. ಪೈಸಾ ವಸೂಲ್​ ಮೂವೀ ಎಂದು ಅಜಯ್​ ದೇವಗನ್​ ಫ್ಯಾನ್ಸ್​ ಹೊಗಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:29 pm, Fri, 18 November 22