Edagaiye Apaghatakke Karana Review: ‘ಎಡಗೈ’ಯಿಂದ ಸರಣಿ ಅಪಘಾತ; ಕ್ರೈಮ್​ನಲ್ಲೂ ನಗಿಸೋ ದಿಗಂತ

Edagaiye Apaghatakke Karana- ಎಡಗೈಯೇ ಅಪಘಾತಕ್ಕೆ ಕಾರಣ ವಿಮರ್ಶೆ: ದಿಗಂತ್ ಸಿನಿಮಾ ಇಂದು (ಜೂನ್ 13) ತೆರೆಗೆ ಬಂದಿದೆ. ದಿಗಂತ್, ನಿಧಿ ಸುಬ್ಬಯ್ಯ, ಧನು ಹರ್ಷ, ರಾಧಿಕಾ ನಾರಾಯಣ್ ಮೊದಲಾದವರು ನಟಿಸಿದ್ದಾರೆ. ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದಲ್ಲಿ ಎಡಗೈ ಇಂದ ಆಗುವ ಸಮಸ್ಯೆಗಳನ್ನು ಫನ್ ಆಗಿ ಹೇಳಲಾಗಿದೆ. ಆ ಚಿತ್ರದ ವಿಮರ್ಶೆ ಇಲ್ಲಿದೆ.

Edagaiye Apaghatakke Karana Review: ‘ಎಡಗೈ’ಯಿಂದ ಸರಣಿ ಅಪಘಾತ; ಕ್ರೈಮ್​ನಲ್ಲೂ ನಗಿಸೋ ದಿಗಂತ
ದಿಗಂತ್

Updated on: Jun 13, 2025 | 11:02 AM

ಸಿನಿಮಾ: ‘ಎಡಗೈಯೇ ಅಪಘಾತಕ್ಕೆ ಕಾರಣ’. ಪಾತ್ರವರ್ಗ: ದಿಗಂತ್, ಧನು ಹರ್ಷ, ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ, ಕೃಷ್ಣ ಹೆಬ್ಬಾಳೆ, ಸೌರವ್ ಲೋಕೇಶ್. ನಿರ್ದೇಶನ: ಸಮರ್ಥ್. ನಿರ್ಮಾಣ: ಸಮರ್ಥ್ ಹಾಗೂ ಗುರದತ್ ಗಾಣಿಗ. ರೇಟಿಂಗ್: 3/5

ದೇಶದಲ್ಲಿ ಶೇ.90ರಷ್ಟು ಮಂದಿ ತಮ್ಮ ದಿನ ನಿತ್ಯದ ಕೆಲಸಕ್ಕೆ ಬಲಗೈ ಬಳಕೆ ಮಾಡುತ್ತಾರೆ. ಉಳಿದ ಶೇ.10ರಷ್ಟು ಮಂದಿ ಬಳಕೆ ಮಾಡೋದು ಎಡಗೈಯನ್ನು. ಇಡೀ ಲೋಕವೇ ಬಲಗೈ ಬಳಕೆ ಮಾಡುತ್ತಿರುವಾಗ ಎಡಗೈ ಬಳಕೆಯನ್ನು ಮಾಡುವವರನ್ನು ಭಿನ್ನವಾಗಿ ನೋಡೋದು ಸಾಮಾನ್ಯ. ಆದರೆ, ಅವರ ಸಮಸ್ಯೆಗಳನ್ನು ಯಾರೂ ಅಷ್ಟಾಗಿ ಗಮನಿಸೋಕೆ ಹೋಗೋದಿಲ್ಲ. ಅವರು ಎದುರಿಸುವ ಸಮಸ್ಯೆಗಳನ್ನು ಹೇಳೋದೇ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ. ಇದರ ಜೊತೆಗೆ ಒಂದೊಳ್ಳೆಯ ಕ್ರೈಮ್ ಥ್ರಿಲ್ಲರ್ ಕಥೆಯನ್ನು ಇದರಲ್ಲಿ ಹೇಳಲಾಗಿದೆ.

ಲೊಡ್ಡೆ ಲೋಹಿತ್ (ದಿಗಂತ್) ಎಡಚ. ಆತ ಎಲ್ಲಾ ಕೆಲಸಕ್ಕೆ ಬಳಕೆ ಮಾಡೋದು ಎಡಗೈಯನ್ನೇ. ಆದರೆ, ಅವನಿಗೆ ಅದೃಷ್ಟ ಸರಿ ಇಲ್ಲ. ಅವನು ಮಾಡುವ ಪ್ರತಿ ಕೆಲಸದಲ್ಲೂ ವಿಘ್ನ. ಅಷ್ಟೇ ಅಲ್ಲ, ಎಡಗೈಯಿಂದ ಆಗುವ ಸಮಸ್ಯೆಗಳಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಾನೆ. ಈತ ಗೆಳತಿ (ನಿಧಿ ಸುಬ್ಬಯ್ಯ) ಕರೆದಳು ಎಂದು ಫ್ಲ್ಯಾಟ್​ಗೆ ಕದ್ದು ಮುಚ್ಚಿ ಹೋಗುತ್ತಾನೆ. ಸುಂದರವಾಗಿ ಕಳೆಯಬೇಕಿದ್ದ ರಾತ್ರಿ ಕರಾಳವಾಗಿ ಬಿಡುತ್ತದೆ. ರಕ್ತದ ಹೊಳೆ ಹರಿಯುತ್ತದೆ. ರಾತ್ರಿಯಿಂದ ಬೆಳಕು ಹರಿಯುವುದರೊಳಗೆ ಹೆಣಗಳ ರಾಶಿ ಬೀಳುತ್ತದೆ. ಇದಕ್ಕೆಲ್ಲ ಲೋಹಿತ್​ನ ಎಡಗೈಯೇ ಕಾರಣ. ಲೋಹಿತ್ ಅಲ್ಲಿ ಟ್ರ್ಯಾಪ್ ಆಗೋಕೆ ಅವನ ಎಡಗೈ ಹೇಗೆ ಕಾರಣ? ಕೊನೆಗೆ ಅವನು ಹೊರಗೆ ಹೇಗೆ ಬರುತ್ತಾನೆ ಅನ್ನೋದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು.

ಇದನ್ನೂ ಓದಿ
ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ನನ್ನ ಸಂಬಂಧಿ ಅಲ್ಲ; ವಿಕ್ರಾಂತ್ ಮಾಸಿ
ವಿಮಾನ ದುರಂತದ ಟ್ವೀಟ್ ಮಾಡಿದ ಬಳಿಕ ಹೃದಯಾಘಾತದಿಂದ ನಟಿಯ ಮಾಜಿ ಪತಿ ನಿಧನ
ವಿಮಾನ ದುರಂತ: ‘12th ಫೇಲ್’ ನಟನ ಸಂಬಂಧಿ, ಕರ್ನಾಟಕದ ಕ್ಲೈವ್ ಕುಂದರ್ ಸಾವು
ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ

ದಿಗಂತ್ ಅವರು ಗಂಭೀರ ಪಾತ್ರಗಳಿಗಿಂತ ಹಾಸ್ಯ ಪಾತ್ರ, ಪೆದ್ದು ಪೆದ್ದಾಗಿ ನಟಿಸೋ ಪಾತ್ರಗಳಿಗಿಂದ ಹೆಚ್ಚು ಇಷ್ಟ ಆಗುತ್ತಾರೆ. ಅವರಿಗೆ ಅದು ನೀರು ಕುಡಿದಷ್ಟೇ ಸುಲಭ. ಈ ಚಿತ್ರದಲ್ಲೂ ಅವರು ಮಾಡಿರೋ ಪಾತ್ರ ಹಾಗೆಯೇ ಇದೆ. ಬಲಗೈಯಿಂದಲೇ ನಡೆಯುವ ಈ ಜಗತ್ತಿನಲ್ಲಿ ಎಡಚರು ಅನುಭವಿಸುವ ಕಷ್ಟುಗಳು ಏನು ಎಂಬುದನ್ನು ಜೀವಿಸಿ ತೋರಿಸಿದ್ದಾರೆ. ಒದ್ದಾಟ, ಟೆನ್ಶನ್, ಕಷ್ಟಗಳ ಮಧ್ಯೆಯೂ ನಗಿಸುತ್ತಾರೆ. ಸಿನಿಮಾ ಉದ್ದಕ್ಕೂ ಅವರೇ ಹೈಲೈಟ್ ಆಗಿದ್ದು ಪಾತ್ರವನ್ನು ಅವರು ಜೀವಿಸಿದ್ದಾರೆ.

ಉಳಿದಂತೆ ನಿರೂಪ್ ಭಂಡಾರಿ ಮಹತ್ವದ ಪಾತ್ರ ಮಾಡಿದ್ದಾರೆ. ನಿಧಿ ಸುಬ್ಬಯ್ಯ ಆರಂಭದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಡೀ ಸಿನಿಮಾಗೆ ದೊಡ್ಡ ತಿರುವು ನೀಡುತ್ತಾರೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳೆ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಧನು ಹರ್ಷ ಅವರಿಗೆ ಪ್ರಮುಖ ಪಾತ್ರ ಸಿಕ್ಕಿದೆ. ರಾಧಿಕಾ ನಾರಾಯಣ್ ಹೀಗೆ ಬಂದು ಹಾಗೆ ಹೋಗುತ್ತಾರೆ.

ನಿರ್ದೇಶಕ ಸಮರ್ಥ್ ಕಡಕೋಳ್ ಅವರು ಈ ಪ್ರಯತ್ನದಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ ಎಂದೇ ಹೇಳಬುದು. ಒಂದೇ ರಾತ್ರಿ, ಬಹುತೇಕ ಒಂದೇ ಕಟ್ಟಡದಲ್ಲಿ ಕಥೆ ಸಾಗಿದರೂ ಎಲ್ಲಿಯೂ ಬೇಸರ ತರಿಸೋದಿಲ್ಲ. ಸಿನಿಮಾದ ಅವಧಿ 2 ಗಂಟೆ ಇರೋದು ಕೂಡ ಇದಕ್ಕೆ ಕಾರಣ ಇರಬಹುದು. ಸಿನಿಮಾ ಉದ್ದಕ್ಕೂ ಕ್ರೈಮ್​ ಕಥೆ ಹೇಳುತ್ತಾ, ರಕ್ತ ಚೆಲ್ಲುತ್ತಾ ಸಾಗುತ್ತಿದ್ದರೂ ಪ್ರೇಕ್ಷಕರನ್ನು ನಗಿಸೋ ಕೆಲಸ ಆಗಿದೆ. ಇದು ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್. ಆಗಾಗ ಟ್ವಿಸ್ಟ್ ಕೊಡುವ ಮೂಲಕ ಪ್ರೇಕ್ಷನಿಗೆ ಚಮಕ್ ಕೊಡೋ ಕೆಲಸ ಮಾಡಿದ್ದಾರೆ ಸಮರ್ಥ್.

ಇದನ್ನೂ ಓದಿ: ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್

ಹಾಗಾದರೆ ಈ ಸಿನಿಮಾ ಪರ್ಫೆಕ್ಟಾ? ಖಂಡಿತವಾಗಿಯೂ ಇಲ್ಲ. ನಿರ್ದೇಶಕರು ಜನರನ್ನು ನಗಿಸೋ ಭರದಲ್ಲಿ ಕೆಲವು ಕಡೆ ಲಾಜಿಕ್ ಮಿಸ್ ಮಾಡಿದ್ದಾರೆ. ಕೆಲವು ಕಡೆ ಮಿಸ್ಸಿಂಗ್ ಲಿಂಕ್​ಗಳು ಕಾಣುತ್ತವೆ. ಇದರ ಬಗ್ಗೆ ನಿರ್ದೇಶಕರು ಗಮನ ಹರಿಸಬೇಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:01 am, Fri, 13 June 25