Ek Love Ya First Half Review: ಹೇಗಿದೆ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಮೊದಲಾರ್ಧ? ಇಲ್ಲಿದೆ ವಿವರ
ಈಗಾಗಲೇ ರಿಲೀಸ್ ಆಗಿರುವ ‘ಏಕ್ ಲವ್ ಯಾ’ ಸಿನಿಮಾದ ಟ್ರೇಲರ್ ಹಾಗೂ ಸಾಂಗ್ಗಳು ಸಾಕಷ್ಟು ವೀಕ್ಷಣೆ ಕಂಡಿವೆ. ಹಾಗಾದರೆ, ಮೊದಲಾರ್ಧ ಹೇಗಿದೆ? ಮೊದಲ ಸಿನಿಮಾದಲ್ಲೇ ರಾಣ ಹೇಗೆ ನಟಿಸಿದ್ದಾರೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ಜೋಗಿ’ ಪ್ರೇಮ್ (Jogi Prem) ನಿರ್ದೇಶನದ ಸಿನಿಮಾಗಳ ಫ್ಲೇವರ್ ಬೇರೆಯದ್ದೇ ರೀತಿಯಲ್ಲಿರುತ್ತದೆ. ಮಾಸ್ ಮಸಾಲಾ ಜತೆಗೆ ಸೆಂಟಿಮೆಂಟ್ಗೂ ಅವರು ಆದ್ಯತೆ ನೀಡುತ್ತಾರೆ. ಇಂದು (ಫೆಬ್ರವರಿ 24) ಅವರ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾ (Ek Love Ya Movie) ರಿಲೀಸ್ ಆಗಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ ಈ ಚಿತ್ರಕ್ಕೆ, ಅವರ ಪತ್ನಿ, ನಟಿ ರಕ್ಷಿತಾ ಅವರು ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಮೂಲಕ ರಕ್ಷಿತಾ ಅವರ ತಮ್ಮ ರಾಣ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ರಚಿತಾ ರಾಮ್, ರೀಷ್ಮಾ ನಾಣಯ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾದ ಟ್ರೇಲರ್ ಹಾಗೂ ಸಾಂಗ್ಗಳು ಸಾಕಷ್ಟು ವೀಕ್ಷಣೆ ಕಂಡಿವೆ. ಹಾಗಾದರೆ, ‘ಏಕ್ ಲವ್ ಯಾ’ ಸಿನಿಮಾದ (Ek Love Ya Movie) ಮೊದಲಾರ್ಧ ಹೇಗಿದೆ? ಮೊದಲ ಸಿನಿಮಾದಲ್ಲೇ ರಾಣ ಹೇಗೆ ನಟಿಸಿದ್ದಾರೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ಏಕ್ ಲವ್ ಯಾ’ ಸಿನಿಮಾದ ಮೊದಲಾರ್ಧದ ವಿಮರ್ಶೆ:
ಫೈಟಿಂಗ್ ದೃಶ್ಯದ ಮೂಲಕ ನಟ ರಾಣ ಇಂಟ್ರಡಕ್ಷನ್ ಆಗುತ್ತದೆ. ಮೊದಲರ್ಧದಲ್ಲಿ ಆ್ಯಕ್ಷನ್ಗೆ ಒತ್ತು ನೀಡಲಾಗಿದೆ.
ರಾಣ ಅವರು ಫಸ್ಟ್ ಹಾಫ್ನಲ್ಲಿ ಎರಡು ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಒಂದು ರಗಡ್ ಲುಕ್. ಕಾಲೇಜ್ ಫ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ಅವರು ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ.
ಫಸ್ಟ್ ಹಾಫ್ನಲ್ಲಿ ನಾಲ್ಕು ಹಾಡುಗಳಿಗೆ. ಸಾಂಗ್ಸ್ ಮೂಲಕವೇ ಗಮನ ಸೆಳೆದಿರುವ ‘ಏಕ್ ಲವ್ ಯಾ’ ಚಿತ್ರದಲ್ಲಿ ಸಂಗೀತ ಹೈಲೈಟ್ ಆಗಿದೆ.
ಹಲವು ಲೊಕೇಷನ್ಗಳಲ್ಲಿ ‘ಏಕ್ ಲವ್ ಯಾ’ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಎಲ್ಲ ಲೊಕೇಷನ್ಗಳು ಗಮನ ಸೆಳೆಯುತ್ತವೆ. ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ.
ರಚಿತಾ ರಾಮ್ ಅವರು ತುಂಬ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಗರೇಟ್ ಸೇದುವ, ಕಿಸ್ ಮಾಡುವಂತಹ ಹುಡುಗಿಯ ಪಾತ್ರವನ್ನು ಅವರು ನಿಭಾಯಿಸಿದ್ದಾರೆ.
ರಾಣ ಅವರು ಫಸ್ಟ್ ಹಾಫ್ ಪೂರ್ತಿ ಪಾಗಲ್ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರೀತಿಗಾಗಿ ಏನು ಬೇಕಾದರೂ ಮಾಡುವ ಹುಡುಗನಾಗಿ ಅವರು ಮನರಂಜಿಸುತ್ತಾರೆ.
ಪ್ರೇಮ್ ನಿರ್ದೇಶನದ ಸಿನಿಮಾಗಳಲ್ಲಿ ತಾಯಿ ಸೆಂಟಿಮೆಂಟ್ ನಿರೀಕ್ಷಿಸುತ್ತಾರೆ ಜನರು. ‘ಏಕ್ ಲವ್ ಯಾ’ ಚಿತ್ರದಲ್ಲಿ ತಂದೆ-ಮಗನ ಸೆಂಟಿಮೆಂಟ್ ದೃಶ್ಯಗಳಿವೆ.
ಫಸ್ಟ್ ಹಾಫ್ ಕೊನೆಯಲ್ಲಿ ಒಂದು ಟ್ವಿಸ್ಟ್ ಇದೆ. ಸೆಕೆಂಡ್ ಹಾಫ್ ಬಗ್ಗೆ ಕುತೂಹಲ ಮೂಡಿಸುವಲ್ಲಿ ಇದು ಸಹಕಾರಿ ಆಗಿದೆ.
ಚಿತ್ರದ ಮೊದಲರ್ಧದ ನಿರೂಪಣೆ ಕೊಂಚ ಸ್ಲೋ ಎನಿಸುತ್ತದೆ. ಕಾಲೇಜ್ ಕಥೆ ಸ್ವಲ್ಪ ಎಳೆದಾಡಿದಂತೆ ಭಾಸವಾಗುತ್ತದೆ.