Ek Love Ya Movie Review: ಅದ್ದೂರಿ ‘ಪ್ರೇಮ್​’ ಕಹಾನಿಯ ಪ್ಲಸ್​ ಏನು? ಮೈನಸ್​ ಏನು?

|

Updated on: Feb 24, 2022 | 2:01 PM

ಏಕ್​ ಲವ್​ ಯಾ ಸಿನಿಮಾ ವಿಮರ್ಶೆ: ‘ಜೋಗಿ’ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಚಿತ್ರ ತೆರೆಗೆ ಬಂದಿದೆ. ರಕ್ಷಿತಾ ಪ್ರೇಮ್​ ನಿರ್ಮಾಣದ ಈ ಸಿನಿಮಾದ ಮೂಲಕ ಅವರ ಸಹೋದರ ರಾಣ ಹೀರೋ ಆಗಿ ಬಡ್ತಿ ಪಡೆದಿದ್ದಾರೆ. ಸಾಕಷ್ಟು ಹೈಪ್​ ಪಡೆದುಕೊಂಡಿದ್ದ ಈ ಸಿನಿಮಾದ ವಿಮರ್ಶೆ ಟಿವಿ9 ಕನ್ನಡ ಡಿಜಿಟಲ್​ನಲ್ಲಿ.

Ek Love Ya Movie Review: ಅದ್ದೂರಿ ‘ಪ್ರೇಮ್​’ ಕಹಾನಿಯ ಪ್ಲಸ್​ ಏನು? ಮೈನಸ್​ ಏನು?
ಏಕ್​ ಲವ್​ ಯಾ ವಿಮರ್ಶೆ
Follow us on

ಸಿನಿಮಾ: ಏಕ್​ ಲವ್​ ಯಾ

ಪಾತ್ರವರ್ಗ: ರಾಣ, ರಚಿತಾ ರಾಮ್​, ರೀಷ್ಮಾ ನಾಣಯ್ಯ, ಸುಚೇಂದ್ರ ಪ್ರಸಾದ್​, ಶಶಿಕುಮಾರ್, ಚರಣ್​ ರಾಜ್​ ಮೊದಲಾದವರು.

ನಿರ್ದೇಶನ: ‘ಜೋಗಿ’ ಪ್ರೇಮ್​

ನಿರ್ಮಾಣ: ರಕ್ಷಿತಾ ಪ್ರೇಮ್​

ಸಂಗೀತ: ಅರ್ಜುನ್​ ಜನ್ಯ

ಸ್ಟಾರ್​: 3/5

ಅಮರ್​ (ರಾಣ) ಬ್ರಿಲಿಯಂಟ್​ ಸ್ಟುಡೆಂಟ್​. ಆತ ಕಾನೂನು ಅಧ್ಯಯನ ಮಾಡುತ್ತಿರುತ್ತಾನೆ. ಆದರೆ, ಕುಡಿಯೋದು ಆತನ ಮೈನಸ್​ ಪಾಯಿಂಟ್​. ಎಣ್ಣೆ ಹೊಡೆದೇ ಕಾಲೇಜಿಗೆ ಬರುತ್ತಾನೆ. ಕಾಲೇಜ್​ ಫಂಕ್ಷನ್​ನಲ್ಲಿ ಖ್ಯಾತ ಕ್ರಿಮಿನಲ್​ ಲಾಯರ್ ವಿಶ್ವನಾಥ್​​ (ಚರಣ್​ ರಾಜ್​) ನೀಡುವ ಸಮಸ್ಯೆಯನ್ನು ಬಗೆಹರಿಸಿ, ಆ ಲಾಯರ್​ನ ಜ್ಯೂನಿಯರ್​ ಆಗಿ ಸೇರಿಕೊಳ್ಳುತ್ತಾನೆ. ಇಷ್ಟು ಬ್ರಿಲಿಯಂಟ್​ ಇರೋ ಅಮರ್​ ಈ ರೀತಿ ಕುಡಿಯೋದೇಕೆ? ಪ್ರೇಯಸಿ ಅನಿತಾಳನ್ನು (ರೀಷ್ಮಾ ನಾಣಯ್ಯ) ಕೊಲೆ ಮಾಡ್ತೀನಿ ಅಂತ ಓಡಾಡೋದು ಏಕೆ? ರಚಿತಾ ಆ ರೀತಿ ಬೋಲ್ಡ್​ ಪಾತ್ರದಲ್ಲಿ ಕಾಣಿಸಿಕೊಳ್ಳೋಕೆ ಕಾರಣವೇನು? ರಚಿತಾ-ರಾಣ ಮಧ್ಯೆ ಪ್ರೇಮ್​ ಕಹಾನಿ ನಡೆಯುತ್ತದೆಯೇ? ಎನ್ನುವ ಪ್ರಶ್ನೆಗೆ ಸಿನಿಮಾದಲ್ಲಿ ಉತ್ತರ ಕಂಡುಕೊಳ್ಳಬೇಕು.

ಮೊದಲಾರ್ಧಕ್ಕೆ ಬೇಕಿತ್ತು ವೇಗ: 

‘ಏಕ್​ ಲವ್​​ ಯಾ’ ಚಿತ್ರಕ್ಕೆ ಎರಡು ಟ್ರ್ಯಾಕ್​ ಇದೆ. ಎಲ್ಲಾ ಸಿನಿಮಾದಲ್ಲಿ ಇರುವಂತೆ ‘ಏಕ್​ ಲವ್​ ಯಾ’ ಸಿನಿಮಾದಲ್ಲೂ ಹೀರೋಗೆ ಒಂದು ಫ್ಲ್ಯಾಶ್​ಬ್ಯಾಕ್​ ಇದೆ. ಇದನ್ನು ತೋರಿಸುವುದರಲ್ಲೇ ಬಹುತೇಕ ಮೊದಲಾರ್ಧ ಕಳೆದಿದೆ. ಪ್ರೌಢಶಾಲೆಗೆ ತೆರಳುವಾಗಲೇ ಲವ್​​ನಲ್ಲಿ ಬೀಳೋ ಹೀರೋನ ಕಥೆ ಹೇಳೋಕೆ ನಿರ್ದೇಶಕ ‘ಜೋಗಿ’ ಪ್ರೇಮ್​ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಗುಡ್ಡಗಾಡಿನ ಲೊಕೇಷನ್​ಗಳಲ್ಲಿ ಸುತ್ತಿ ಬಳಸಿ ತೆರಳಿದ್ದಾರೆ. ಇಲ್ಲಿ ಸ್ವಲ್ಪ ಕಾಳಜಿ ವಹಿಸಿ ವೇಗ ಹೆಚ್ಚಿಸುವತ್ತ ನಿರ್ದೇಶಕರು ಗಮನ ಹರಿಸಬೇಕಿತ್ತು.

ದೃಶ್ಯ ವೈಭವ: 

‘ಏಕ್​ ಲವ್​ ಯಾ’ ಚಿತ್ರದ ಮೊದಲಾರ್ಧದ ಕಥೆ ಹಿಲ್​ ಸ್ಟೇಷನ್​​ನಲ್ಲಿ ಸಾಗಿದೆ. ಹೀಗಾಗಿ, ಈ ದೃಶ್ಯ ವೈಭವ ಕಣ್ಣಿಗೆ ತಂಪೆನಿಸುತ್ತದೆ. ಈ ಸಿನಿಮಾಗಾಗಿ ತುಂಬಾನೇ ಅದ್ಭುತ ಲೊಕೇಶನ್​ಗಳನ್ನು ಆಯ್ಕೆ ಮಾಡಿದ್ದಾರೆ ಪ್ರೇಮ್​. ಈ ಸ್ಥಳಗ​ನ್ನು ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಹೇಂದ್ರ ಸಿಂಹ ಅವರ ಛಾಯಾಗ್ರಹಣದಿಂದ ಆಗಿದೆ. ಸದಾ ಮಂಜು ಮುಸುಕಿರುವ ಊರುಗಳು ಪ್ರೇಕ್ಷಕರಿಗೆ ಮುದ ನೀಡುತ್ತವೆ. ಇಡೀ ಸಿನಿಮಾ ರಿಚ್​ ಆಗಿ ಮೂಡಿ ಬಂದಿದೆ.

ಪ್ಲಸ್​ ಆದ ಮ್ಯೂಸಿಕ್​: 

ಪ್ರೇಮ್​ ನಿರ್ದೇಶನದ ಸಿನಿಮಾದಲ್ಲಿ ಮ್ಯೂಸಿಕ್​ಗೆ ಬಹಳ ಮಹತ್ವ ಇರುತ್ತದೆ. ಈ ಮೊದಲೇ ಈ ಸಿನಿಮಾದ ಹಾಡುಗಳು ರಿಲೀಸ್​ ಆಗಿ ಹಿಟ್​ ಆಗಿದ್ದವು. ಅರ್ಜುನ್​ ಜನ್ಯ ಸಂಗೀತ, ಹಿನ್ನೆಲೆ ಸಂಗೀತ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.

ಪಾತ್ರಗಳಿಗೆ ನ್ಯಾಯ ಒದಗಿಸಿದ ಕಲಾವಿದರು: 

ರಾಣ ಅವರು ಮೊದಲ ಸಿನಿಮಾದಲ್ಲೇ ಮಾಸ್​ ಮತ್ತು ಕ್ಲಾಸ್ ಲುಕ್​ನಲ್ಲಿ ಮಿಂಚಿದ್ದಾರೆ. ಈ ಚಿತ್ರದಿಂದ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಹೆಚ್ಚಬಹುದು. ಕೆಲ ರಿಸ್ಕಿ ಫೈಟ್​ಗಳನ್ನು ಮಾಡಿ ಗಮನ ಸೆಳೆದಿದ್ದಾರೆ.​  ಬೋಲ್ಡ್​ ಲುಕ್​ನಲ್ಲಿ ಮಿಂಚಿರೋ ರಚಿತಾ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಅವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರೀಷ್ಮಾ ನಾಣಯ್ಯ, ಸುಚೇಂದ್ರ ಪ್ರಸಾದ್​, ಕಾಕ್ರೋಚ್​ ಸುಧಿ, ಯಶ್​ ಶೆಟ್ಟಿ, ಹೀರೋನ ಗೆಳೆಯರ ಪಾತ್ರ ಮಾಡಿದವರ ನಟನೆ ಉತ್ತಮವಾಗಿದೆ. ಹೀರೋನ ತಂದೆಯಾಗಿ ಶಶಿಕುಮಾರ್​ ಗಮನ ಸೆಳೆಯುತ್ತಾರೆ. ಖಡಕ್​ ಲಾಯರ್​ ಆಗಿರೋ ಚರಣ್​ ರಾಜ್​ ಅವರು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಈ ಚಿತ್ರಕ್ಕೆ ವಿಲನ್​ ಯಾರು ಅನ್ನೋದು ಸಸ್ಪೆನ್ಸ್. ಕ್ಲೈಮ್ಯಾಕ್ಸ್​ನಲ್ಲಿ ಈ ರಹಸ್ಯ ಬಯಲಾಗುತ್ತದೆ.

ನಿರ್ದೇಶನ ಹೇಗಿದೆ?: 

ಜೋಗಿ ಪ್ರೇಮ್​ ಅವರು ತಾಯಿ ಸೆಂಟಿಮೆಂಟ್​ ಸಿನಿಮಾ ಮಾಡೋಕೆ ಹೆಸರುವಾಸಿ. ಈ ಬಾರಿ ಅವರು ತಾಯಿ ಸೆಂಟಿಮೆಂಟ್​ ಹಿಂದೆ ಹೋಗಿಲ್ಲ. ಬದಲಿಗೆ, ತಂದೆ-ಮಗನ ಬಾಂಧವ್ಯ ತೋರಿಸಿದ್ದಾರೆ. ಕಥೆಯಲ್ಲಿ ಮತ್ತಷ್ಟು ಗಟ್ಟಿತನ, ಹೊಸತನ ಬೇಕಿತ್ತು. ಸಿನಿಮಾದಲ್ಲಿ ಸಾಕಷ್ಟು ದೃಶ್ಯಗಳು ಎಕ್ಸ್​ಟ್ರಾ ಅನಿಸುತ್ತದೆ. ಡಬಲ್​ ಮೀನಿಂಗ್​ ಡೈಲಾಗ್​ಗಳು, ಕೆಲ ದೃಶ್ಯಗಳು ಫ್ಯಾಮಿಲಿ ಆಡಿಯನ್ಸ್​ಗೆ ಸ್ವಲ್ಪ ಮುಜುಗರ ತರಬಹುದು.

ಇದನ್ನೂ ಓದಿ:  ‘ಆಫೀಸ್​ಗೆ ಬಂದು ಒಂದು ಚಾನ್ಸ್​ ಕೊಡಿ ಎಂದಿದ್ರು’; ‘ಏಕ್​ ಲವ್​ ಯಾ’ ನಾಯಕಿ ರೀಷ್ಮಾ ಬಗ್ಗೆ ಪ್ರೇಮ್​ ಮಾತು

Ek Love Ya First Half Review: ಹೇಗಿದೆ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಮೊದಲಾರ್ಧ? ಇಲ್ಲಿದೆ ವಿವರ

Published On - 1:58 pm, Thu, 24 February 22