ಕಂಗನಾ ನಟನೆಯ ‘ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯೇ ವಿಲನ್; ಹೇಗಿದೆ ಸಿನಿಮಾ?

|

Updated on: Jan 17, 2025 | 12:21 PM

ಕಂಗನಾ ರಣಾವತ್ ನಿರ್ದೇಶಿಸಿ ಮತ್ತು ನಟಿಸಿರುವ "ಎಮರ್ಜೆನ್ಸಿ" ಚಿತ್ರವು ಭಾರೀ ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿದೆ. 1975ರ ತುರ್ತು ಪರಿಸ್ಥಿತಿಯನ್ನು ಆಧರಿಸಿದ ಈ ಚಿತ್ರಕ್ಕೆ ಸಿಕ್ಕಿರುವ ಟ್ವಿಟರ್ ವಿಮರ್ಶೆಗಳು ಮಿಶ್ರವಾಗಿವೆ. ಕೆಲವರು ಚಿತ್ರವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ನಿರಾಸೆಗೊಂಡಿದ್ದಾರೆ. ಸೆನ್ಸಾರ್​ ಮಂಡಳಿ ಮಾಡಿದ ಕಟ್​ನಿಂದ ಚಿತ್ರಕ್ಕೆ ಸಮಸ್ಯೆ ಆಗಿದೆ.

ಕಂಗನಾ ನಟನೆಯ ‘ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯೇ ವಿಲನ್; ಹೇಗಿದೆ ಸಿನಿಮಾ?
ಕಂಗನಾ
Follow us on

ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿರುವ ‘ಎಮರ್ಜೆನ್ಸಿ’ ಸಿನಿಮಾ ಡಿಸೆಂಬರ್ 17ರಂದು ರಿಲೀಸ್ ಆಗಿದೆ. ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಸೃಷ್ಟಿ ಆಗಿತ್ತು. ರಾಜಕೀಯ ವಿಚಾರಗಳ ಸುತ್ತ ಸಿನಿಮಾ ಸಾಗಿದೆ. ಈ ಕಾರಣದಿಂದಲೂ ಚಿತ್ರವು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಸಿನಿಮಾ ನೋಡಿದ ಅನೇಕರು ಮೆಚ್ಚುಗೆ ಸೂಚಿಸಿದರೆ ಇನ್ನೂ ಕೆಲವರು ಬೇಸರ ಹೊರಹಾಕಿದ್ದಾರೆ. ‘ಎಮರ್ಜೆನ್ಸಿ’ ಚಿತ್ರದ ಟ್ವಿಟರ್ ರಿವ್ಯೂ ಇಲ್ಲಿದೆ.

1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದೆ ತುರ್ತುಪರಿಸ್ಥಿತಿ ಆಧರಿಸಿ ‘ಎಮರ್ಜೆನ್ಸಿ’ ಸಿನಿಮಾ ಮಾಡಲಾಗಿದೆ. ಈ ಚಿತ್ರಕ್ಕೆ ಕಂಗನಾ ನಿರ್ದೇಶನ ಹಾಗೂ ನಿರ್ಮಾಣ ಇದೆ. ಇಂದಿರಾ ಗಾಂಧಿ ಪಾತ್ರವನ್ನು ಕೂಡ ಅವರೇ ಮಾಡಿದ್ದಾರೆ. ಈ ಚಿತ್ರವನ್ನು ರಾಜಕಾರಣಿಗಳಿಗೆ ತೋರಿಸುವ ಇಚ್ಛೆ ಅವರಿಗೆ ಇದೆ. ಈ ಸಿನಿಮಾ ನೋಡಿದ ಸಾಮಾನ್ಯರು ಟ್ವಿಟರ್ ಮೂಲಕ ವಿಮರ್ಶೆ ತಿಳಿಸಿದ್ದಾರೆ. ಕೆಲವರಿಗೆ ಸಿನಿಮಾ ಇಷ್ಟ ಆಗಿದೆ. ಇನ್ನೂ ಕೆಲವರು ಚಿತ್ರವನ್ನು ತೆಗಳಿದ್ದಾರೆ.

‘ರಾಜಕೀಯದ ಶಕ್ತಿ ಮತ್ತು ಅದರ ಪರಿಣಾಮಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡ ಕಂಗನಾ ನಟನೆಯನ್ನು ಹೊಗಳಿದ್ದಾರೆ. ಅನುಪಮ್ ಖೇರ್, ಶ್ರೇಯಸ್ ತಲ್ಪಡೆ ಪಾತ್ರಗಳು ಕೂಡ ಅನೇಕರಿಗೆ ಇಷ್ಟ ಆಗಿದೆ.

ಇದನ್ನೂ ಓದಿ:ಕಂಗನಾ ರಣಾವತ್​ ನಟನೆಯ ‘ಎಮರ್ಜೆನ್ಸಿ’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ?

ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ. ಈ ಕಾರಣಕ್ಕೆ ಕೆಲವು ದೃಶ್ಯಗಳು ಪರಿಪೂರ್ಣ ಅಲ್ಲ ಎನ್ನುವ ಭಾವನೆ ಕಾಡಿದೆ. ಒರಿಜಿನಲ್ ಕಾಪಿ ರಿಲೀಸ್ ಆದರೆ ಸಿನಿಮಾ ಮತ್ತಷ್ಟು ಪವರ್ಫುಲ್ ಆಗುತ್ತಿತ್ತು ಎಂದು ಕೆಲವರು ಹೇಳಿದ್ದಾರೆ. ಹೀಗಾಗಿ ಅನೇಕರು, ‘ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯೇ ವಿಲನ್’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಎಮರ್ಜೆನ್ಸಿ ಸಿನಿಮಾ ನಿರೀಕ್ಷೆ ತಲುಪಿಲ್ಲ’ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.