
‘ಬಾಹುಬಲಿ’, ‘ಈಗ’ದಂತಹ ಹಿಟ್ ಚಿತ್ರಗಳನ್ನು ನೀಡಿದ ಎಸ್.ಎಸ್. ರಾಜಮೌಳಿ (SS Rajamouli) ‘ಆರ್ಆರ್ಆರ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ‘ಆರ್ಆರ್ಆರ್’ (RRR Movie) ಪ್ರದರ್ಶನ ಕಂಡಿದೆ. ಹಾಡು ಹಾಗೂ ಟ್ರೇಲರ್ ಮೂಲಕ ಸಿನಿಮಾ ನಿರೀಕ್ಷೆ ಹುಟ್ಟುಹಾಕಿತ್ತು. ರಾಮ್ ಚರಣ್, ಜ್ಯೂ.ಎನ್ಟಿಆರ್, ಆಲಿಯಾ ಭಟ್, ಅಜಯ್ ದೇವಗನ್ ಮೊದಲಾದ ಸ್ಟಾರ್ ಕಲಾವಿದರ ದಂಡೇ ಚಿತ್ರದಲ್ಲಿ ಇದೆ. ಈ ಕಾರಣಕ್ಕೆ ಬಾಲಿವುಡ್ನಲ್ಲೂ ಸಿನಿಮಾ ಬೇಡಿಕೆ ಸೃಷ್ಟಿ ಮಾಡಿಕೊಂಡಿದೆ. ವಿಶ್ವಾದ್ಯಂತ ಸಿನಿಮಾ ಸುಮಾರು 8000 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹಾಗಾದರೆ, ಈ ಸಿನಿಮಾದ ಮೊದಲಾರ್ಧ ಹೇಗಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇದನ್ನೂ ಓದಿ: ಆರ್ಆರ್ಆರ್ ವಿಮರ್ಶೆ: ನೀರು-ಬೆಂಕಿ ಹಿಡಿದು ತೆರೆಮೇಲೆ ರಾಜಮೌಳಿ ಮ್ಯಾಜಿಕ್
500 ಕೋಟಿ ಬಜೆಟ್, 800 ಕೋಟಿ ಪ್ರೀ-ರಿಲೀಸ್ ಬಿಸ್ನೆಸ್; ‘ಆರ್ಆರ್ಆರ್’ ಕುರಿತ ಅಚ್ಚರಿ ವಿಚಾರಗಳು
Published On - 2:28 am, Fri, 25 March 22