‘ಮಾಸ್ ಎಂಟರ್​ಟೇನರ್​’; ಅಜಿತ್ ನಟನೆಯ ‘ತುನಿವು’ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್

Thunivu Twitter Review: ಅಜಿತ್ ಕುಮಾರ್ ನಟನೆಯ ‘ತುನಿವು’ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಎಚ್​​. ವಿನೋದ್. ಈ ಚಿತ್ರವನ್ನು ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ. ‘ವಲಿಮೈ’ ಚಿತ್ರದ ಬಳಿಕ ಈ ಮೂವರು ಮತ್ತೆ ಒಂದಾಗಿದ್ದಾರೆ.

‘ಮಾಸ್ ಎಂಟರ್​ಟೇನರ್​’; ಅಜಿತ್ ನಟನೆಯ ‘ತುನಿವು’ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್
ತುನಿವು ಚಿತ್ರದಲ್ಲಿ ಅಜಿತ್ ಕುಮಾರ್
Updated By: ರಾಜೇಶ್ ದುಗ್ಗುಮನೆ

Updated on: Jan 11, 2023 | 12:16 PM

ಅಜಿತ್ ಕುಮಾರ್ (Ajith Kumar) ನಟನೆಯ ‘ತುನಿವು’ ಸಿನಿಮಾ ಇಂದು (ಜನವರಿ 11) ರಿಲೀಸ್ ಆಗಿದೆ. ಈ ಸಿನಿಮಾದ ಟ್ರೇಲರ್ ನೋಡಿದ ಫ್ಯಾನ್ಸ್​ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿತ್ತು. ‘ತುನಿವು’(Thunivu) ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಸಖತ್ ಮಾಸ್ ಎಂಟರ್​ಟೇನಿಂಗ್ ಆಗಿದೆ ಎಂದುಹೇಳುತ್ತಿದ್ದಾರೆ. ವಿಂಟೇಜ್ ಅಜಿತ್ ಅವರನ್ನು ಕಣ್ತುಂಬಿಕೊಂಡಂತಾಯಿತು ಎಂದು ಅನೇಕರು ಬರೆದುಕೊಂಡಿದ್ದಾರೆ.

ಅಜಿತ್ ಕುಮಾರ್ ನಟನೆಯ ‘ತುನಿವು’ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಎಚ್​​. ವಿನೋದ್. ಈ ಚಿತ್ರವನ್ನು ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ. ‘ವಲಿಮೈ’ ಚಿತ್ರದ ಬಳಿಕ ಈ ಮೂವರು ಮತ್ತೆ ಒಂದಾಗಿದ್ದಾರೆ. ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಸಿನಿಮಾ ನೋಡಿದ ಅನೇಕರು ಭೇಷ್ ಎಂದಿದ್ದಾರೆ.

‘ಬ್ಲಾಕ್​​ಬಸ್ಟರ್ ಆಗೋದು ಪಕ್ಕಾ. ನೋ ಗಟ್ಸ್​, ನೋ ಗ್ಲೋರಿ. ಇದು ಜನರ ಸಿನಿಮಾ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ. ‘ಬ್ಲಾಕ್​ಬಸ್ಟರ್​ ಸಿನಿಮಾ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ನೋಡಲೇಬೇಕಾದ ಸಿನಿಮಾ. ಹಲವು ರೀತಿಯ ಭಾವನೆಗಳನ್ನು ಸಿನಿಮಾ ಒಳಗೊಂಡಿದೆ’ ಎಂದು ಕೆಲವರು ಹೇಳಿದ್ದಾರೆ.


ಅಜಿತ್ ಹಾಗೂ ವಿಜಯ್ ಅಭಿಮಾನಿಗಳ ಮಧ್ಯೆ ಒಂದು ರೇಸ್ ಮೊದಲಿನಿಂದಲೂ ಇದೆ. ಈಗ ಇಬ್ಬರು ಹೀರೋಗಳ ಸಿನಿಮಾ ಒಟ್ಟಿಗೆ ರಿಲೀಸ್ ಆಗಿದೆ. ಹೀಗಾಗಿ ನಮ್ಮ ಸಿನಿಮಾ ಉತ್ತಮವಾಗಿ ಎಂದು ಎರಡೂ ಹೀರೋಗಳು ಹೇಳಿಕೊಳ್ಳುತ್ತಿದ್ದಾರೆ. ಅಂತಿಮವಾಗಿ ಯಾವ ಸಿನಿಮಾ ಗೆಲ್ಲುತ್ತದೆ ಎಂಬುದನ್ನು ಸಿನಿಪ್ರಿಯರು ನಿರ್ಧರಿಸಲಿದ್ದಾರೆ.

ದಳಪತಿ ವಿಜಯ್ ನಟನೆಯ ‘ವಾರಿಸು’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ವಿಜಯ್ ಅವರ ಚಿತ್ರವನ್ನು ಫ್ಯಾನ್ಸ್ ಕೊಂಡಾಡಿದ್ದಾರೆ. ಪಕ್ಕಾ ಸಿನಿಮಾ ಪ್ರೇಮಿಗಳು ಚಿತ್ರವನ್ನು ಅಷ್ಟಾಗಿ ಮೆಚ್ಚಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:09 am, Wed, 11 January 23