Vikrant Rona: ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಮೊದಲಾರ್ಧದ ವಿಮರ್ಶೆ ಇಲ್ಲಿದೆ
Vikrant Rona First Half Review: ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಮೊದಲಾರ್ಧ ವಿಮರ್ಶೆ ಇಲ್ಲಿದೆ.
ಕಿಚ್ಚ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಇಂದು (ಜುಲೈ 28) ರಿಲೀಸ್ ಆಗಿದೆ. ಕನ್ನಡದಲ್ಲಿ 3ಡಿ ಸಿನಿಮಾ ಬಂದಿದ್ದು ಅತೀ ಕಡಿಮೆ. ಈ ಸಾಲಿಗೆ ‘ವಿಕ್ರಾಂತ್ ರೋಣ’ (Vikrant Rona Movie) ಚಿತ್ರ ಕೂಡ ಸೇರ್ಪಡೆ ಆಗಿದೆ. ಹಾಡು ಹಾಗೂ ಟ್ರೇಲರ್ ಮೂಲಕ ಸುದೀಪ್ ಅಭಿನಯದ ಈ ಚಿತ್ರ ಸಾಕಷ್ಟು ಗಮನ ಸೆಳೆದಿತ್ತು. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದು ಕೂತಿದ್ದರು. ಕೊನೆಗೂ ಆ ದಿನ ಬಂದಿದೆ. ‘ವಿಕ್ರಾಂತ್ ರೋಣ’ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದ ಮೊದಲಾರ್ಧ ವಿಮರ್ಶೆ(Vikrant Rona First Half Review) ಇಲ್ಲಿದೆ.
ಅನೂಪ್ ಭಂಡಾರಿ ಅವರ ಈ ಹಿಂದಿನ ‘ರಂಗಿತರಂಗ’ ಶೈಲಿಯಲ್ಲಿಯೇ ‘ವಿಕ್ರಾಂತ್ ರೋಣ’ ಸಿನಿಮಾ ಮೂಡಿಬಂದಿದೆ. ಸಾಕಷ್ಟು ದೃಶ್ಯಗಳಲ್ಲಿ ಆ ವೈಭವ ಕಾಣಿಸುತ್ತದೆ.
ಕಿಚ್ಚ ಸುದೀಪ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಎಂಟ್ರಿ ಸೀನ್ ಅಭಿಮಾನಿಗಳಿಗೆ ಮೆಚ್ಚುಗೆ ಆಗುವಂತಿದೆ.
ಚಿತ್ರದ ಮೊದಲಾರ್ಧದ ಕಥೆ ಸಸ್ಪೆನ್ಸ್ ಮತ್ತು ಕಾಮಿಡಿ ಜೊತೆಯಲ್ಲಿ ಸಾಗುತ್ತದೆ. ಪ್ರತಿ ದೃಶ್ಯವೂ ಅದ್ದೂರಿಯಾಗಿ ಮೂಡಿಬಂದಿದೆ.
ಸಖತ್ ಹಿಟ್ ಆಗಿರುವ ‘ರಾ ರಾ ರಕ್ಕಮ್ಮ..’ ಸಾಂಗ್ ಮೊದಲಾರ್ಧದಲ್ಲಿ ಬರುವುದಿಲ್ಲ. ಆದರೆ ಜಾಕ್ವೆಲಿನ್ ಫರ್ನಾಂಡಿಸ್ ನಟನೆಯ ದೃಶ್ಯ ಫಸ್ಟ್ ಹಾಫ್ನಲ್ಲಿಯೇ ಬರುತ್ತದೆ. ‘ರಾ ರಾ ರಕ್ಕಮ್ಮ..’ ಹಾಡಿಗಾಗಿ ಪ್ರೇಕ್ಷಕರು ಸೆಕೆಂಡ್ ಹಾಫ್ಗೆ ಕಾಯಬೇಕು.
ಇದನ್ನೂ ಓದಿ
‘ವಿಕ್ರಾಂತ್ ರೋಣ’ ಪ್ರೀ-ರಿಲೀಸ್ ಇವೆಂಟ್ನಲ್ಲಿ ಕತ್ರಿನಾ ಜಪ ಮಾಡಿದ ಸಲ್ಮಾನ್ ಖಾನ್; ಕಾರಣ ಏನು?
Salman Khan: ‘ವಿಕ್ರಾಂತ್ ರೋಣ’ ವೇದಿಕೆಯಲ್ಲಿ ಸುದೀಪ್-ಸಲ್ಮಾನ್; ಕಿಚ್ಚನ ಜತೆಗಿನ ಬಾಂಧವ್ಯದ ಬಗ್ಗೆ ಸಲ್ಲು ಮಾತು