ಸ್ಟಾರ್ ನಟಿಯರ ಚೈಲ್ಡ್ವುಡ್ ಫೋಟೋಗಳು ಆಗಾಗ ವೈರಲ್ ಆಗುತ್ತವೆ. ಕೆಲವೊಮ್ಮೆ ಸೆಲೆಬ್ರಿಟಗಳೇ ಈ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಈಗ ಸ್ಟಾರ್ ನಟಿಯ ಫೋಟೋ ಒಂದು ವೈರಲ್ ಆಗಿದೆ. ಇದು ಅವರ ಮೊದಲ ಹಿಂದಿ ಸಿನಿಮಾ ಸಂದರ್ಭದ ಫೋಟೋ. ಈಗ ಅವರು ಗ್ಲಾಮರ್ ಗೊಂಬೆ. ಅಷ್ಟಕ್ಕೂ ಯಾರು ಆ ನಟಿ? ಅವರ ಈ ಫೋಟೋ ಈಗ ವೈರಲ್ ಆಗಲು ಕಾರಣ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಈ ಫೋಟೋದಲ್ಲಿ ಇರೋ ನಟಿ ಮೃಣಾಲ್ ಠಾಕೂರ್. ಈ ನಟಿಗೆ ಇಂದು (ಆಗಸ್ಟ್ 1) ಜನ್ಮದಿನ. ಎಲ್ಲರೂ ಮೃಣಾಲ್ ಠಾಕೂರ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಮೃಣಾಲ್ ಖ್ಯಾತಿ ಹೆಚ್ಚಿದೆ. ಮೃಣಾಲ್ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಹೇಗಿದ್ದರು, ಈಗ ಹೇಗಿದ್ದಾರೆ ಎಂಬುದನ್ನು ಕೆಲವರು ಹೋಲಿಕೆ ಮಾಡಿ ನೋಡುತ್ತಿದ್ದಾರೆ.
ಮೃಣಾಲ್ ಠಾಕೂರ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಧಾರಾವಾಹಿ ಮೂಲಕ. ‘ಮುಜ್ಸೆ ಕುಚ್ ಕೆಹ್ತೀ ಯೇ ಕಮೋಶೀಯಾ’ ಚಿತ್ರದ ಮೂಲಕ ಮೃಣಾಲ್ ಅವರು ನಟನೆ ಆರಂಭಿಸಿದರು. ಅವರು ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಾಗ ಅವರಿಗೆ ಕೇವಲ 20 ವರ್ಷ ವಯಸ್ಸು. ಆ ಬಳಿಕ 2014ರಲ್ಲಿ ಕೆಲವು ಮರಾಠಿ ಚಿತ್ರಗಳನ್ನು ಮಾಡಿದರು. 2018ರಲ್ಲಿ ರಿಲೀಸ್ ಆದ ‘ಲವ್ ಸೋನಿಯಾ’ ಚಿತ್ರದಲ್ಲಿ ಮೃಣಾಲ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಅವರ ನಟನೆಯ ಮೊದಲ ಹಿಂದಿ ಸಿನಿಮಾ. ಈಗ ವೈರಲ್ ಆಗಿರೋದು ಇದೇ ಸಿನಿಮಾದ ದೃಶ್ಯ.
ಮೃಣಾಲ್ ಠಾಕೂರ್ ಅವರು ‘ಲವ್ ಸೋನಿಯಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಮಕ್ಕಳ ಕಳ್ಳ ಸಾಗಣೆ ಬಗ್ಗೆ ಕಥೆ ಇದೆ. ಇದರಲ್ಲಿ ಬರೋ ಬೋಲ್ಡ್ ದೃಶ್ಯವೊಂದರಲ್ಲಿ ಮೃಣಾಲ್ ಕಾಣಿಸಿಕೊಂಡಿದ್ದರು. ಅವರು ಫೇಮಸ್ ಆದ ಬಳಿಕ ಈ ದೃಶ್ಯವನ್ನು ಡಿಲೀಟ್ ಮಾಡಲಾಗಿದೆ.
ಇದನ್ನೂ ಓದಿ: ಸಂಭಾವನೆ ಪಡೆಯದೇ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ ಮೃಣಾಲ್, ಕಾರಣ?
2022ರಲ್ಲಿ ರಿಲೀಸ್ ಆದ ತೆಲುಗಿನ ‘ಸೀತಾ ರಾಮಂ’ ಸಿನಿಮಾ ಮೃಣಾಲ್ ಅವರ ಖ್ಯಾತಿಯನ್ನೇ ಹೆಚ್ಚಿಸಿತು. ಈ ಸಿನಿಮಾದಿಂದ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಇದಾದ ಬಳಿಕ ಅವರಿಗೆ ಹಲವು ಆಫರ್ಗಳು ಬಂದವು. ಸದ್ಯ ಒಂದೆರಡು ಸಿನಿಮಾಗಳಲ್ಲಿ ಮೃಣಾಲ್ ನಟಿಸುತ್ತಿದ್ದಾರೆ. ಮೃಣಾಲ್ ಠಾಕೂರ್ ಆಗಾಗ ಬೋಲ್ಡ್ ಫೋಟೋಗಳ ಮೂಲಕ ಗಮನ ಸೆಳೆಯುತ್ತಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.