ಶೀಘ್ರವೇ ಬದಲಾಗಲಿದೆ ಮುದ್ದುಲಕ್ಷ್ಮೀ ಧಾರಾವಾಹಿ ಕಥೆ

‘ಮುದ್ದುಲಕ್ಷ್ಮೀ’ ಧಾರಾವಾಹಿ ರಿಮೇಕ್ ಶೋ ಎನ್ನಲಾಗಿತ್ತು. ಆದರೆ, ಈಗ ಧಾರಾವಾಹಿ ತಂಡದವರು ತಮ್ಮದೇ ಕಥೆಯೊಂದಿಗೆ ಧಾರಾವಾಹಿ ಮುಂದುವರಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಶೀಘ್ರವೇ ಬದಲಾಗಲಿದೆ ಮುದ್ದುಲಕ್ಷ್ಮೀ ಧಾರಾವಾಹಿ ಕಥೆ
ಶೀಘ್ರವೇ ಬದಲಾಗಲಿದೆ ಮುದ್ದುಲಕ್ಷ್ಮೀ ಧಾರಾವಾಹಿ ಕಥೆ
Edited By:

Updated on: Jun 12, 2021 | 5:21 PM

ಸಾಮಾಜಿಕ ಸಂದೇಶ ಹೊಂದಿರುವ ‘ಮುದ್ದುಲಕ್ಷ್ಮೀ’ ಧಾರಾವಾಹಿ ಇತ್ತೀಚೆಗೆ 1000 ಎಪಿಸೋಡ್​​ಗಳನ್ನು ಪೂರೈಸಿದೆ. ಈ ಮೂಲಕ ಧಾರಾವಾಹಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಸಂಭ್ರಮದ ಮಧ್ಯೆಯೇ ‘ಮುದ್ದುಲಕ್ಷ್ಮೀ’ ವೀಕ್ಷಕರಿಗೆ ಅಚ್ಚರಿಯ ವಿಚಾರ ನೀಡಿದೆ. ಈ ಧಾರಾವಾಹಿಯ ಕಥೆ ಸಂಪೂರ್ಣವಾಗಿ ಬದಲಾಗಲಿದೆ ಎನ್ನಲಾಗಿದೆ. ಈ ವಿಚಾರ ತಿಳಿದು ವೀಕ್ಷಕರು ಸಾಕಷ್ಟು ಖುಷಿಯಾಗಿದ್ದಾರೆ.

‘ಮುದ್ದುಲಕ್ಷ್ಮೀ’ ಧಾರಾವಾಹಿ ರಿಮೇಕ್ ಶೋ ಎನ್ನಲಾಗಿತ್ತು. ಆದರೆ, ಈಗ ಧಾರಾವಾಹಿ ತಂಡದವರು ತಮ್ಮದೇ ಕಥೆಯೊಂದಿಗೆ ಧಾರಾವಾಹಿ ಮುಂದುವರಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ, ಹೊಸ ಪಾತ್ರಗಳನ್ನು ಧಾರಾವಾಹಿ ಪರಿಚಯಿಸುತ್ತಿದ್ದು, ಕಥೆಗೆ ಹೊಸ ಆಯಾಮ ಸಿಗುವ ನಿರೀಕ್ಷೆ ಇದೆ.

‘ಮುದ್ದುಲಕ್ಷ್ಮೀ’ ಧಾರಾವಾಹಿಯಲ್ಲಿ ನಾಯಕ ಧ್ರುವಂತ್ ವೃತ್ತಿಯಲ್ಲಿ ವೈದ್ಯ. ಆತ ಸೌಂದರ್ಯವತಿ ಅಲ್ಲದ ಹೆಣ್ಣನ್ನು ಪ್ರೀತಿಸಿ ಮದುವೆ ಆಗುತ್ತಾನೆ. ನಂತರ ಅವರ ಜೀವನದಲ್ಲಿ ಏನೆಲ್ಲ ಆಗುತ್ತದೆ ಎಂಬುದು ಈ ಧಾರಾವಾಹಿಯ ಕಥೆ.

ಇನ್ನು, ಮುದ್ದುಲಕ್ಷ್ಮೀ ಧಾರಾವಾಹಿ ಇತ್ತೀಚೆಗೆ 1000 ಎಪಿಸೋಡ್​ಗಳನ್ನು ಪೂರ್ಣಗೊಳಿಸಿತ್ತು. ಲಾಕ್​ಡೌನ್​ ಸಂದರ್ಭವಾದ್ದರಿಂದ ಇದನ್ನು ಸೆಲೆಬ್ರೆಟ್​ ಮಾಡೋಕೆ ಸಾಧ್ಯವಾಗಿರಲಿಲ್ಲ. ಈಗ ‘ಮುದ್ದುಲಕ್ಷ್ಮೀ’ ತಂಡ ಕೇಕ್ ಕತ್ತರಿಸುವ ಮೂಲಕ ಹೊಸ ಮೈಲಿಗಲ್ಲಿಗೆ ಕಾಲಿಟ್ಟಿದ್ದನ್ನು ಸಂಭ್ರಮಿಸಿದೆ. ತಂಡದ ಎಲ್ಲಾ ಸಿಬ್ಬಂದಿ ಇದರಲ್ಲಿ ಪಾಲ್ಗೊಂಡಿದ್ದು, ಫೋಟೋ ಹಾಗೂ ವಿಡಿಯೋಗಳು ಸಾಕಷ್ಟು ವೈರಲ್​ ಆಗಿವೆ.

ಇನ್ನು, ದೇಶಾದ್ಯಂತ ಕೊವಿಡ್ ಪ್ರಕರಣಗಳು ಹೆಚ್ಚಿವೆ. ಈ ಕಾರಣಕ್ಕೆ ಕೊವಿಡ್​ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಪ್ರಯತ್ನಪಡುತ್ತಿದೆ. ಈ ಧಾರಾವಾಹಿಯಲ್ಲೂ ಕೊವಿಡ್​ ಬಗ್ಗೆ ಜಾಗೃತಿ ಮೂಡಿಸುವ ಎಳೆಯನ್ನು ಸೇರಿಸಲಾಗಿದೆ.

ಇದನ್ನೂ ಓದಿ: ಕನ್ನಡದಲ್ಲಿ ಬರ್ತಿದೆ ನೇತಾಜಿ ಸುಭಾಷ್​ ಚಂದ್ರ ಬೋಸ್​ ಬಗ್ಗೆ ಧಾರಾವಾಹಿ; ಜೂನ್​ 7ರಿಂದ ಶುರು