
ವಿಶ್ವ ಕಂಡ ಅಪ್ರತಿಮ ಸ್ಪಿನ್ನರ್ಗಳಲ್ಲಿ ಮುತ್ತಯ್ಯ ಮುರಳೀಧರನ್ (Muttiah Muralitharan) ಕೂಡ ಒಬ್ಬರು. ಶ್ರೀಲಂಕಾ ಪರ ಆಡಿದ್ದ ಅವರು, ಹಲವು ಸಾಧನೆ ಮಾಡಿದ್ದಾರೆ. ಅವರು ಬೌಲಿಂಗ್ಗೆ ಇಳಿದರೆ ಎದುರಾಳಿಗಳು ನಡುಗುತ್ತಿದ್ದರು. ಅವರ ಕುರಿತು ಈಗ ಬಯೋಪಿಕ್ ಸಿದ್ಧಗೊಳ್ಳುತ್ತಿದೆ. ಈ ಚಿತ್ರಕ್ಕೆ ‘800’ ಎಂದು ಶೀರ್ಷಿಕೆ ಇಡಲಾಗಿದೆ. ಬಹುಭಾಷೆಯಲ್ಲಿ ನಿರ್ಮಾಣ ಆಗಿರುವ ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಈ ಸಿನಿಮಾ ಅಕ್ಟೋಬರ್ 6ರಂದು ರಿಲೀಸ್ ಆಗಲಿದೆ. ಈ ಕುರಿತು ತಂಡ ಮಾಹಿತಿ ನೀಡಿದೆ.
ಮುತ್ತಯ್ಯ ಮುರಳೀಧರನ್ ಅವರು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಕ್ರಿಕೆಟರ್ ಆಗಬೇಕು ಎನ್ನುವ ಕನಸು ಕಂಡರು. ಒಳ್ಳೆಯ ಸ್ಪಿನ್ ಬೌಲರ್ ಆದರು. ಅವರು ವೃತ್ತಿ ಜೀವನದಲ್ಲಿ 800 ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಮಾಡಿರುವ ಏಕೈಕ ಬೌಲರ್ ಎನ್ನುವ ಖ್ಯಾತಿ ಮುತ್ತಯ್ಯ ಮುರಳೀಧರನ್ಗೆ ಇದೆ. ಈ ಕಾರಣದಿಂದ ಅವರ ಬಯೋಪಿಕ್ಗೆ ‘800’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ರಿಲೀಸ್ ದಿನಾಂಕ ತಿಳಿದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಮುತ್ತಯ್ಯ ಮುರಳೀಧರನ್ ಅವರ ಕ್ರಿಕೆಟ್ ಬದುಕು ಹಲವು ರೋಚಕ ಅಂಶಗಳಿಂದ ಕೂಡಿದೆ. ಸಾಕಷ್ಟು ವಿವಾದಗಳನ್ನು ಅವರು ಮಾಡಿಕೊಂಡಿದ್ದಾರೆ. ಅವುಗಳನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ಶ್ರೀಲಂಕಾ ತಂಡ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ತೆರಳಿತ್ತು. ಈ ವೇಳೆ ಗುಂಡಿನ ದಾಳಿ ಆಗಿತ್ತು. ಈ ದಾಳಿಯ ಸಂದರ್ಭದಲ್ಲಿ ಮುತ್ತಯ್ಯ ಕೂಡ ದಾಳಿಗೆ ಒಳಗಾದ ಬಸ್ನಲ್ಲಿ ಇದ್ದರು. ಇದನ್ನೂ ಬಯೋಪಿಕ್ನಲ್ಲಿ ಸೇರಿಸಲಾಗಿದೆ. ಅವರ ವೈಯಕ್ತಿಕ ವಿಚಾರಗಳು ಈ ಚಿತ್ರದಲ್ಲಿವೆ.
ಇದನ್ನೂ ಓದಿ: ಮುತ್ತಯ್ಯ ಮುರಳೀಧರನ್ ಬಯೋಪಿಕ್ ‘800’ ಟ್ರೇಲರ್ ಬಿಡುಗಡೆಗೆ ಸಚಿನ್ ತೆಂಡೂಲ್ಕರ್ ಅತಿಥಿ
‘800’ ಚಿತ್ರಕ್ಕೆ ಎಂ.ಎಸ್. ಶ್ರೀಪತಿ ನಿರ್ದೇಶನದಲ್ಲಿ ಮಾಡಿದ್ದಾರೆ. ಗಿಬ್ರಾನ್ ಅವರ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಸ್ಲಂ ಡಾಗ್ ಮಿಲಿಯನೇರ್’ ಸಿನಿಮಾದಲ್ಲಿ ನಟಿಸಿದ್ದ ಮಧುರ್ ಮಿತ್ತಲ್ ‘800’ ಚಿತ್ರದಲ್ಲಿ ಮುಖ್ಯಭೂಮಿಕೆ ಮಾಡಿದ್ದಾರೆ. ಮುತ್ತಯ್ಯ ಅವರ ಪತ್ನಿಯ ಪಾತ್ರಕ್ಕೆ ಮಹಿಮಾ ನಂಬಿಯಾರ್ ನಟಿಸಿದ್ದಾರೆ. ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಅಕ್ಟೋಬರ್ 6ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಚಿನ್ ತೆಂಡೂಲ್ಕರ್ ಈ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ