ಮದುವೆಯಾದ ಮೊದಲ ವರ್ಷ ನಾಗ ಚೈತನ್ಯ ಅವರನ್ನು ಶೋಭಿತಾ ಭೇಟಿಯಾಗಿದ್ದು ತಿಂಗಳಿಗೆ ಒಮ್ಮೆ ಮಾತ್ರ!

Naga Chaitanya: ನಟ ನಾಗ ಚೈತನ್ಯ ಹಾಗೂ ಶೋಭಿತಾ ಧುಳಿಪಾಳ ತಮ್ಮ ಮದುವೆಯ ಮೊದಲ ವರ್ಷದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಕೆಲಸಗಳ ಒತ್ತಡದಿಂದಾಗಿ ಮದುವೆಯಾದ ಆರಂಭದ ದಿನಗಳಲ್ಲಿ ತಿಂಗಳಿಗೆ ಒಮ್ಮೆ ಮಾತ್ರ ಭೇಟಿಯಾಗಲು ಸಾಧ್ಯವಾಗುತ್ತಿತ್ತು ಎಂದು ಶೋಭಿತಾ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮದುವೆಯಾದ ಮೊದಲ ವರ್ಷ ನಾಗ ಚೈತನ್ಯ ಅವರನ್ನು ಶೋಭಿತಾ ಭೇಟಿಯಾಗಿದ್ದು ತಿಂಗಳಿಗೆ ಒಮ್ಮೆ ಮಾತ್ರ!
Naga Chaitanya
Edited By:

Updated on: Aug 26, 2026 | 11:04 AM

ಮುಖ್ಯಾಂಶಗಳು

  • ಮದುವೆಯಾದ ಕೆಲವೇ ವಾರಗಳಲ್ಲಿ ಶೂಟಿಂಗ್
  • 150 ದಿನಗಳ ಕಾಲ ದೂರ ಉಳಿದಿದ್ದ ಶೋಭಿತಾ
  • ಸಂಸ್ಕೃತಿಗೆ ಗೌರವ ನೀಡುವ ಪತ್ನಿ 

ಅಕ್ಕಿನೇನಿ ನಾಗ ಚೈತನ್ಯ ಹಾಗೂ ಶೋಭಿತಾ ಧುಳಿಪಾಳ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ನಡುವೆ ಬ್ಯಾಲೆನ್ಸ್ ಮಾಡುವುದು ಇಬ್ಬರಿಗೂ ಸವಾಲಾಗಿತ್ತು. ಇತ್ತೀಚಿನ ಸಂದರ್ಶನದಲ್ಲಿ ಶೋಭಿತಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಮದುವೆಯಾದ ಮೊದಲ ವರ್ಷ ತಮ್ಮಿಬ್ಬರ ಭೇಟಿ ಬಹಳ ಅಪರೂಪವಾಗಿತ್ತು ಎಂದು ತಿಳಿಸಿದ್ದಾರೆ.

ಶೋಭಿತಾ ಹಾಗೂ ನಾಗ ಚೈತನ್ಯ ಡಿಸೆಂಬರ್ 2024ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಕೆಲವೇ ವಾರಗಳಲ್ಲಿ ಶೋಭಿತಾ ತಮಿಳುನಾಡಿಗೆ ಶೂಟಿಂಗ್‌ಗಾಗಿ ತೆರಳಿದ್ದರು. ಅಲ್ಲಿ ಅವರು ಸುಮಾರು 150 ದಿನಗಳ ಕಾಲ ಉಳಿದುಕೊಂಡಿದ್ದರು. ಇದರಿಂದಾಗಿ ಮದುವೆಯಾದ ಮೊದಲ ವರ್ಷದಲ್ಲಿ ತಿಂಗಳಿಗೆ ಒಮ್ಮೆ ಮಾತ್ರ ಪತಿಯನ್ನು ಭೇಟಿಯಾಗಲು ಸಾಧ್ಯವಾಯಿತು.

ಮದುವೆಯು ಸಾಂಪ್ರದಾಯಿಕವಾಗಿ ನಡೆಯಬೇಕು ಎಂಬುದು ಶೋಭಿತಾ ಅವರ ಬಾಲ್ಯದ ಕನಸಾಗಿತ್ತು. ತಮ್ಮದೇ ಸಂಸ್ಕೃತಿಯ ಹುಡುಗ ಸಿಗುತ್ತಾನೆ ಎಂದು ಅವರು ಅಂದುಕೊಂಡಿರಲಿಲ್ಲ. ಆದರೆ ತಮ್ಮ ಸಂಸ್ಕೃತಿಯಂತೆಯೇ ಅದ್ಧೂರಿಯಾಗಿ ಮದುವೆಯಾಗಿದ್ದು ಅವರಿಗೆ ಅತ್ಯಂತ ಸಂತಸ ತಂದಿದೆ.

ಇನ್ನೊಂದೆಡೆ ನಾಗ ಚೈತನ್ಯ ಕೂಡ ತಮ್ಮ ಪತ್ನಿಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಶೋಭಿತಾ ಮುಂಬೈನಲ್ಲಿ ಆಧುನಿಕ ಹುಡುಗಿಯಾಗಿದ್ದರೂ ವಿಶಾಖಪಟ್ಟಣಂನಲ್ಲಿ ತಮ್ಮ ಸಂಸ್ಕೃತಿಯನ್ನು ಚೆನ್ನಾಗಿ ಗೌರವಿಸುತ್ತಾರೆ. ಶೋಭಿತಾ ಅವರ ತೆಲುಗು ಭಾಷೆಯ ಮೇಲಿನ ಹಿಡಿತ ನಾಗ ಚೈತನ್ಯಗೆ ತುಂಬಾ ಇಷ್ಟವಾಗಿದೆ.

ಈ ಜೋಡಿ 2022ರಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಇವರ ಮದುವೆ ಸಂಭ್ರಮದಿಂದ ನಡೆದಿತ್ತು. ಪ್ರಸ್ತುತ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಶೋಭಿತಾ ‘ವೆಟ್ಟುವಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾಗ ಚೈತನ್ಯ ‘ವೃಷಕರ್ಮ’ ಸಿನಿಮಾದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಪತ್ನಿ ಶೋಭಿತಾರನ್ನು ಸೀರೆ ಅಂಗಡಿಗೆ ಕರೆತಂದ ನಟ ನಾಗ ಚೈತನ್ಯ: ವಿಡಿಯೋ

ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನದ ಬಳಿಕ ನಾಗ ಚೈತನ್ಯ ಸಾಕಷ್ಟು ಟ್ರೋಲ್ ಆದರು. ಅದರಲ್ಲೂ ನಾಗ ಚೈತನ್ಯ ಅವರು ಶೋಭಿತಾ ಅವರನ್ನು ವಿವಾಹ ಆದ ಬಳಿಕ ಮತ್ತಷ್ಟು ಟೀಕೆಯನ್ನು ಎದುರಿಸಬೇಕಾದ ಪರಿಸ್ಥಿತಿ ಬಂತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us