‘ಅವಳ ಪರಿಸ್ಥಿತಿ ನೋಡಿದ್ರೆ ಬೇಸರವಾಗುತ್ತೆ’; ಶೋಭಿತಾ ಬಗ್ಗೆ ನಾಗ ಚೈತನ್ಯ ಮಾತು

ನಾಗ ಚೈತನ್ಯ ಅವರು ಪತ್ನಿ ಶೋಭಿತಾ ಧುಲಿಪಾಲ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಸಮಂತಾ ಜೊತೆಗಿನ ವಿಚ್ಛೇದನದ ಬಳಿಕ ಶೋಭಿತಾ ಬಾಳಲ್ಲಿ ಬಂದ ರೀತಿ, ಪ್ರೀತಿ, ಮದುವೆ ಕುರಿತು ವಿವರಿಸಿದ್ದಾರೆ. ತಮ್ಮ ಹಿಂದಿನ ಸಂಬಂಧಕ್ಕೆ ಶೋಭಿತಾ ಕಾರಣವಲ್ಲ ಎಂದು ಸ್ಪಷ್ಟಪಡಿಸಿ, ಹೇಟ್ ಕಮೆಂಟ್ಸ್​ಗಳಿಂದ ಶೋಭಿತಾ ಅನುಭವಿಸಿದ ನೋವು ನೋಡಿ ಬೇಸರವಾಗಿದೆ ಎಂದಿದ್ದಾರೆ. ಪ್ರಬುದ್ಧವಾಗಿ ವರ್ತಿಸಿದ ಶೋಭಿತಾ ಅವರನ್ನು ‘ನಿಜವಾದ ಹೀರೋ’ ಎಂದು ನಾಗ ಚೈತನ್ಯ ಕೊಂಡಾಡಿದ್ದಾರೆ.

‘ಅವಳ ಪರಿಸ್ಥಿತಿ ನೋಡಿದ್ರೆ ಬೇಸರವಾಗುತ್ತೆ’; ಶೋಭಿತಾ ಬಗ್ಗೆ ನಾಗ ಚೈತನ್ಯ ಮಾತು
ಶೋಭಿತ-ಚೈತನ್ಯ

Updated on: Apr 30, 2026 | 8:46 AM

ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ವಿವಾಹ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಸಮಂತಾ ವಿಚ್ಛೇದನದ ಬಳಿಕ ನಾಗ ಚೈತನ್ಯ ಬಾಳಲ್ಲಿ ಶೋಭಿತಾ ಬಂದರು. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಚ್ಯಾಟ್ ಮಾಡಿಕೊಂಡರು. ಆ ಬಳಿಕ ಎದುರು ಭೇಟಿ ಆಗಿ, ಗೆಳೆತನ ಮೂಡಿ, ಅದು ಪ್ರೀತಿಗೆ ತಿರುಗಿ ಈಗ ವಿವಾಹ ಆಗಿದ್ದಾರೆ. ಈಗ ನಾಗಚೈತನ್ಯ ಅವರು ಶೋಭಿತಾ ಬಗ್ಗೆ ಮಾತನಾಡಿದ್ದಾರೆ. ಶೋಭಿತಾ ಅವರನ್ನು ನೋಡಿದರೆ ಬೇಸರವಾಗುತ್ತದೆ ಎಂದಿದ್ದಾರೆ.

ಸಮಂತಾ ಜೊತೆಗಿನ ವಿಚ್ಛೇದನದ ಬಳಿಕ ಕೆಲ ಸಮಯ ನಾಗ ಚೈತನ್ಯ ಒಂಟಿಯಾಗೇ ಇದ್ದರು. ಈ ಒಂಟಿತನವನ್ನು ದೂರ ಮಾಡಿದ್ದು ಶೋಭಿತಾ. ಹಲವು ಸಮಯ ಇಬ್ಬರೂ ಒಟ್ಟಿಗೆ ಸುತ್ತಾಡಿದರು. ಆ ಬಳಿಕ ಮದುವೆ ಆಗುವ ನಿರ್ಧಾರಕ್ಕೆ ಬಂದರು. ಈ ಬೆನ್ನಲ್ಲೇ ಶೋಭಿತಾ ಸಾಕಷ್ಟು ಹೇಟ್ ಕಮೆಂಟ್ ಅನುಭವಿಸಬೇಕಾಯಿತು. ‘ನಾಗ ಚೈತನ್ಯ ಹಾಗೂ ಸಮಂತಾ ದೂರ ಆಗಲು ನೀವು ಕಾರಣ’ ಎಂದು ಅನೇಕರು ಶೋಭಿತಾ ಮೇಲೆ ಆರೋಪ ಹೊರಿಸಿದರು.

ಈ ವಿಷಯವಾಗಿ ನಾಗ ಚೈತನ್ಯ ಅವರು ಓಪನ್ ಆಗಿ ಮಾತನಾಡಿದ್ದು ಕಡಿಮೆ. ಈಗ ಅವರು ಈ ಬಗ್ಗೆ ಮೌನ ಮುರಿದಿದ್ದಾರೆ. ಅವರಿಗೆ ಶೋಭಿತಾ ಅವರ ಪರಿಸ್ಥಿತಿ ನೋಡಿ ಸಂಕಟವಾಗುತ್ತಿದೆ. ಶೋಭಿತಾ ತಮ್ಮನ್ನು ಅರ್ಥೈಸಿಕೊಳ್ಳುತ್ತಿರುವ ರೀತಿ ನೋಡಿ ಖುಷಿ ಕೂಡ ಇದೆ.

ಇದನ್ನೂ ಓದಿ: ನಾಗ ಚೈತನ್ಯ ಸಿಕ್ಸ್ ಪ್ಯಾಕ್: ವೈರಲ್ ಆದ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ

‘ಅವಳನ್ನು ನೋಡಿದ್ರೆ ಬೇಸರವಾಗುತ್ತದೆ. ಇದರಲ್ಲಿ ಅವಳ ತಪ್ಪೇನು ಇಲ್ಲ. ಸೋಶಿಯಲ್ ಮೀಡಿಯಾ ಚ್ಯಾಟ್ ಮೂಲಕ ಇಬ್ಬರೂ ಪರಿಚಯ ಆಗಿ, ಹಂತ ಹಂತವಾಗಿ ನಮ್ಮ ಸಂಬಂಧ ಬೆಳೆಯಿತು. ನನ್ನ ಹಿಂದಿನ ಜೀವನಕ್ಕೂ ಅವಳಿಗೂ ಯಾವುದೇ ಸಂಬಂಧ ಇಲ್ಲ. ಅವಳಿಗೆ ಸಾಕಷ್ಟು ಧನ್ಯವಾದ ಹೇಳಬೇಕು. ಪ್ರಬುದ್ಧವಾಗಿ ವರ್ತಿಸಿದ್ದಾರೆ. ಅವರು ನಿಜವಾದ ಹೀರೋ’ ಎಂದಿದ್ದಾರೆ ನಾಗ ಚೈತನ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us