ರಾಮ್ ಚರಣ್ ಹುಟ್ಟುಹಬ್ಬದಲ್ಲಿ ಪವನ್ ಅಭಿಮಾನಿಗಳ ಪುಂಡಾಟ, ಬುದ್ಧಿಹೇಳಿದ ನಾಗಬಾಬು

Pawan Kalyan Fans: ರಾಮ್ ಚರಣ್ ಹುಟ್ಟುಹಬ್ಬದಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳು ಪುಂಡಾಟ ಮೆರೆದಿದ್ದು, ಪವನ್ ಕಲ್ಯಾಣ್ ಸಹೋದರ ನಾಗಬಾಬು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಮ್ ಚರಣ್ ಹುಟ್ಟುಹಬ್ಬದಲ್ಲಿ ಪವನ್ ಅಭಿಮಾನಿಗಳ ಪುಂಡಾಟ, ಬುದ್ಧಿಹೇಳಿದ ನಾಗಬಾಬು
ಪವನ್-ರಾಮ್ ಚರಣ್-ನಾಗಬಾಬು
Follow us
ಮಂಜುನಾಥ ಸಿ.
|

Updated on: Mar 28, 2023 | 7:09 PM

ಆರ್​ಆರ್​ಆರ್ (RRR) ಸಿನಿಮಾದ ಬಳಿಕ ರಾಮ್ ಚರಣ್ (Ram Charan) ರೇಂಜ್ ಬದಲಾಗಿದೆ. ಆರ್​ಆರ್​ಆರ್ ಸಿನಿಮಾ ಆಸ್ಕರ್ ಗೆದ್ದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇನ್ನೂ ಕೆಲವು ರಾಜಕಾರಣಿಗಳನ್ನು ಭೇಟಿಯಾಗಿ ದೊಡ್ಡದಾಗಿ ತಮ್ಮ ಸಂತಸವನ್ನು ಸೆಲೆಬ್ರೇಟ್ ಮಾಡಿದ್ದ ರಾಮ್ ಚರಣ್, ಇದೀಗ ತಮ್ಮ ಹುಟ್ಟುಹಬ್ಬವನ್ನೂ ಸಹ ಭಾರಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಆದರೆ ರಾಮ್ ಚರಣ್ ಹುಟ್ಟುಹಬ್ಬ ಸಂಭ್ರಮವನ್ನು ಅವರ ಚಿಕ್ಕಪ್ಪ ಪವನ್ ಕಲ್ಯಾಣ್ ಅಭಿಮಾನಿಗಳು (Pawan Kalyan Fans) ಮಂಕುಗೊಳಿಸಿದ್ದಾರೆ. ಇದರಿಂದಾಗಿ ಮೆಗಾ ಕುಟುಂಬದ ಸದಸ್ಯರು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

ಆಗಿರುವುದಿಷ್ಟು, ಮಾರ್ಚ್ 27 ರಂದು ರಾಮ್ ಚರಣ್ ಹುಟ್ಟುಹಬ್ಬವಿತ್ತು. ಈ ಬಾರಿ ತುಸು ಅದ್ಧೂರಿಯಾಗಿಯೇ ಹುಟ್ಟುಹಬ್ಬ ಆಚರಿಸಿಕೊಂಡ ರಾಮ್ ಚರಣ್, ಅವರ ಅಭಿಮಾನಿಗಳು ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಚಿರಂಜೀವಿ, ನಾಗಬಾಬು ಹಾಗೂ ಕೆಲವು ರಾಜಕಾರಣಿಗಳು ಸಹ ಭಾಗಿಯಾಗಿದ್ದರು. ಆದರೆ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದು ಸ್ವತಃ ರಾಮ್ ಚರಣ್ ಕಣ್ಣು ಕೆಂಪಾಗಿಸಿದೆ.

ಆಗಿದ್ದಿಷ್ಟು, ರಾಮ್ ಚರಣ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪವನ್ ಕಲ್ಯಾಣ್ ಅಭಿಮಾನಿಗಳು, ಕಾರ್ಯಕ್ರಮದ ಉದ್ದಕ್ಕೂ ಪವನ್ ಕಲ್ಯಾಣ್ ಹೆಸರನ್ನು ಕೂಗಿ ಗಲಾಟೆ ಎಬ್ಬಿಸಿದರು. ಯಾರೇ ಮಾತನಾಡಲು ಮೈಕ್ ಹಿಡಿದರೂ ಪವನ್ ಕಲ್ಯಾಣ್ ಪರವಾಗಿ ಜೋರಾಗಿ ಘೋಷಣೆಗಳನ್ನು ಕೂಗುತ್ತಾ ಮಾತನಾಡಲು ಅವಕಾಶ ಕೊಡದೆ ಕಿರಿ-ಕಿರಿ ಉಂಟು ಮಾಡಿದರು. ಕಾರ್ಯಕ್ರಮ ರಾಮ್ ಚರಣ್ ಅವರದ್ದಾದರೂ ಸಹ ಸದ್ದು ಮಾಡಿದ್ದು ಮಾತ್ರ ಪವನ್ ಕಲ್ಯಾಣ್ ಹೆಸರು. ಇದು ರಾಮ್ ಚರಣ್ ಸೇರಿ ವೇದಿಕೆ ಮೇಲಿದ್ದ ಹಲವರಿಗೆ ಕಿರಿ-ಕಿರಿ ಉಂಟು ಮಾಡಿತು.

Also Read: Amrita Rao: ಮ್ಯಾನೇಜರ್ ಮಾಡಿದ ಮೋಸದಿಂದ ದೊಡ್ಡ ಸಿನಿಮಾ ಅವಕಾಶ ಕಳೆದುಕೊಂಡ ನಟಿ

ರಾಮ್ ಚರಣ್​ರ ಮತ್ತೊಬ್ಬ ಚಿಕ್ಕಪ್ಪ ನಾಗಬಾಬು ಮಾತನಾಡಲು ಆರಂಭಿಸಿದಾಗಲೂ ಪವನ್ ಕಲ್ಯಾಣ್ ಪರವಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಇದರಿಂದ ಕೋಪಗೊಂಡ ನಾಗಬಾಬು, ನಾವು ಇಲ್ಲಿ ಬಂದಿರುವುದು ರಾಮ್ ಚರಣ್ ಹುಟ್ಟುಹಬ್ಬ ಸಂಭ್ರಮಕ್ಕೆ. ಹಾಗಾಗಿ ಮೊದಲ ಗೌರವವನ್ನು ನಾವು ರಾಮ್ ಚರಣ್​ಗೆ ಸಲ್ಲಿಸಬೇಕು ಅದು ಸಂಸ್ಕಾರ. ಜನಸೈನಿಕರು (ಪವನ್ ಕಲ್ಯಾಣ್ ಅಭಿಮಾನಿಗಳು) ಅದನ್ನು ಮರೆಯಬಾರದು” ಎಂದರು. ಆಗಲೂ ಸಹ ಪವನ್ ಕಲ್ಯಾಣ್ ಅಭಿಮಾನಿಗಳು ಸುಮ್ಮನಾಗಲಿಲ್ಲ, ಕೆಲ ಕಾಲ ಮೌನವಾಗಿ ನಿಂತ ನಾಗಬಾಬು ತುಸು ಸಿಟ್ಟಿನಿಂದಲೇ, ಪವನ್ ಕಲ್ಯಾಣ್ ಹೇಳುತ್ತಿರುತ್ತಾರಲ್ಲ, ”ಸಿಎಂ ಸಿಎಂ ಎಂದು ಕಿರುಚಿದರೆ ಸಾಕಾಗುವುದಿಲ್ಲ, ಓಟು ಹಾಕಿ ಸಿಎಂ ಮಾಡಿ ಎಂದು. ಹಾಗೆಯೇ ನೀವು ಬರೀ ಇಲ್ಲಿ ಕಿರುಚಿದರೆ ಸಾಕಾಗುವುದಿಲ್ಲ. ತಾಕತ್ತು ಎನ್ನುವುದು ಇದ್ದರೇ ಇದೇ ನಿಮ್ಮ ಧೈರ್ಯ, ಶಕ್ತಿ ತಾಕತ್ತನ್ನು ಚುನಾವಣೆಯಲ್ಲಿ ತೋರಿಸಿ ಎಂದು ಸವಾಲು ಹಾಕಿದರು. ಮಾತ್ರವಲ್ಲ ಗಲಾಟೆ ಮಾಡುತ್ತಿದ್ದ ಕೆಲವರನ್ನು ಸರಿಯಾಗಿ ವಿಚಾರಿಸಿಕೊಳ್ಳುವಂತೆ ತಮ್ಮ ಆಪ್ತರಿಗೆ ಸೂಚಿಸಿ ಬಳಿಕ ಮಾತು ಮುಂದುವರೆಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ