ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ ಬಾಲಯ್ಯ, ಅಜಿತ್ ಕುಮಾರ್, ಶೇಖರ್ ಕಪೂರ್

ತೆಲುಗು ನಟ ನಂದಮೂರಿ ಬಾಲಕೃಷ್ಣ, ತಮಿಳು ನಟ ಅಜಿತ್ ಕುಮಾರ್, ಹಿಂದಿ ಸಿನಿಮಾ ನಿರ್ದೇಶಕ ಶೇಖರ್ ಕಪೂರ್ ಮುಂತಾದವರಿಗೆ ಪದ್ಮ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸಂಗೀತ ಸಂಯೋಜಕ ರಿಕ್ಕಿ ಕೇಜ್, ಗಾಯಕ ಅರಿಜಿತ್ ಸಿಂಗ್ ಮುಂತಾದವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಎಲ್ಲ ಸಾಧಕರಿಗೆ ಅಪ್ತರು ಮತ್ತು ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ ಬಾಲಯ್ಯ, ಅಜಿತ್ ಕುಮಾರ್, ಶೇಖರ್ ಕಪೂರ್
Ajith Kumar, Nandamuri Balakrishna

Updated on: Apr 28, 2025 | 9:21 PM

2025ನೇ ಸಾಲಿನ ‘ಪ್ರದ್ಮ ಪ್ರಶಸ್ತಿ’ (Padma Awards 2025) ಪ್ರದಾನ ಸಮಾರಂಭ ಇಂದು (ಏಪ್ರಿಲ್ 28) ನಡೆದಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಖ್ಯಾತ ನಟರಾದ ನಂದಮೂರಿ ಬಾಲಕೃಷ್ಣ (Nandamuri Balakrishna), ಅಜಿತ್ ಕುಮಾರ್, ನಿರ್ದೇಶಕ ಶೇಖರ್ ಕಪೂರ್ ಮುಂತಾದವರು ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ನೀಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಸೆಲೆಬ್ರಿಟಿಗಳಿಗೆ ಪದ್ಮ ಭೂಷಣ (Padma Bhushan) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿಮಾನಿಗಳು, ಆಪ್ತರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ನಂದಮೂರಿ ಬಾಲಕೃಷ್ಣ ಅವರು ತೆಲುಗು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ರಾಜಕೀಯ ಕ್ಷೇತ್ರದಲ್ಲೂ ಅವರು ತೊಡಗಿಕೊಂಡಿದ್ದಾರೆ. ಇನ್ನು, ಅಜಿತ್ ಕುಮಾರ್ ಅವರು ತಮಿಳು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಜನರಿಗೆ ಮನರಂಜನೆ ನೀಡಿದ್ದಾರೆ. ಬಾಲಿವುಡ್​ನಲ್ಲಿ ವಿಭಿನ್ನವಾದ ಸಿನಿಮಾಗಳ ಮೂಲಕ ನಿರ್ದೇಶಕ ಶೇಖರ್ ಕಪೂರ್​ ಅವರು ಜನಮನ ಗೆದ್ದಿದ್ದಾರೆ.

ಇದನ್ನೂ ಓದಿ
‘ನನಗೆ ಅವಾರ್ಡ್ ಸಿಕ್ಕಷ್ಟು ಖುಷಿ ಇದೆ’; ಅನಂತ್ ನಾಗ್​ ನೆನೆದ ಸುದೀಪ್
ಅನಂತ್ ನಾಗ್​ಗೆ ಪದ್ಮಭೂಷಣ, ನೀವೇ ನನಗೆ ಸ್ಪೂರ್ತಿ ಎಂದ ರಿಷಬ್ ಶೆಟ್ಟಿ
19 ಸಾಧಕರಿಗೆ ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ
Padma Awards 2025: ಪದ್ಮ ಪ್ರಶಸ್ತಿ ಪಡೆದ ಕರ್ನಾಟಕ ಸಾಧಕರ ಸಂಪೂರ್ಣ ಪಟ್ಟಿ

ಈ ವರ್ಷ ಜನವರಿಯಲ್ಲಿ ಒಟ್ಟು 139 ಜನರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿತ್ತು. ಈ ಪೈಕಿ 71 ಮಂದಿಗೆ ಇಂದು (ಏ.28) ಪ್ರಶಸ್ತಿ ನೀಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮುಂತಾದವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಗಾಯಕ ಅರಿಜಿತ್ ಸಿಂಗ್, ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಗಾಯಕ ಪಂಕಜ್ ಉದಾಸ್ ಅವರಿಗೆ ಮರಣೋತ್ತರವಾಗಿ ಪದ್ಮ ಭೂಷಣ ಪ್ರಶಸ್ತಿ ನೀಡಲಾಯಿತು. ಅವರ ಪತ್ನಿ ಫರಿದಾ ಉದಾಸ್ ಈ ಪ್ರಶಸ್ತಿ ಸ್ವೀಕರಿಸಿದರು.

ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿಯನ್ನು ಕರ್ನಾಟಕ ಜನರಿಗೆ ಅರ್ಪಿಸಿದ ಅನಂತ್ ನಾಗ್

ಆಂಧ್ರ ಪ್ರದೇಶದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ನಂದಮೂರಿ ಬಾಲಕೃಷ್ಣ ಅವರು ಪ್ರದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದರು. ನಟ ಅಜಿತ್ ಕುಮಾರ್ ಅವರು ಸೂಟ್ ಧರಿಸಿ ಪ್ರಶಸ್ತಿ ಪಡೆದರು. ಸಿನಿಮಾ ಮಾತ್ರವಲ್ಲದೇ ಕ್ರೀಡೆ, ಉದ್ಯಮ, ವೈದ್ಯಕೀಯ ಮುಂತಾದ ಕ್ಷೇತ್ರದ ಸಾಧಕರಿಗೂ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ಈಗ 71 ಜನರಿಗೆ ಮಾತ್ರ ಪ್ರಶಸ್ತಿ ನೀಡಲಾಗಿದ್ದು, ಇನ್ನುಳಿದವರಿಗೆ ಸದ್ಯದಲ್ಲೇ ಪ್ರದಾನ ಮಾಡಲಾಗುವುದು

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.