ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರಿಗೆ ಮುಂಗೋಪ ಜಾಸ್ತಿ. ಅವರು ಸಹ ನಟರ ಮೇಲೆ, ಫ್ಯಾನ್ಸ್ ಮೇಲೆ ರೇಗಾಡಿದ ಸಾಕಷ್ಟು ಉದಾಹರಣೆ ಇದೆ. ಈಗ ಅವರು ನಟಿ ಅಂಜಲಿ ಅವರನ್ನು ತಳ್ಳಿದ ವಿಡಿಯೋ ವೈರಲ್ ಆಗಿದೆ. ಬಾಲಯ್ಯ ಅವರು ಅಂಜಲಿ ನಟನೆಯ ‘ಗ್ಯಾಂಗ್ ಆಫ್ ಗೋದಾವರಿ’ ಚಿತ್ರದ ಈವೆಂಟ್ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಚಿತ್ರದಲ್ಲಿ ವಿಶ್ವಕ್ ಸೇನ್ ಹಾಗೂ ನೇಹಾ ಶೆಟ್ಟಿ (Neha Shetty) ಕೂಡ ನಟಿಸಿದ್ದಾರೆ. ಈ ಸಿನಿಮಾದ ಕಾರ್ಯಕ್ರಮದ ವೇದಿಕೆ ಮೇಲೆ ನಡೆದ ಘಟನೆ ಅನೇಕರನ್ನು ಬೆಚ್ಚಿ ಬೀಳಿಸಿದೆ.
ಅಂಜಲಿ, ನೇಹಾ ಶೆಟ್ಟಿ ಮೊದಲಾದವರು ವೇದಿಕೆ ಮೇಲೆ ನಿಂತಿದ್ದರು. ಬಾಲಯ್ಯ ಅವರು ಅಂಜಲಿಗೆ ಏನನ್ನೋ ಹೇಳುವ ಪ್ರಯುತ್ನ ಮಾಡಿದ್ದಾರೆ. ಆದರೆ, ಅವರಿಗೆ ಇದು ಕೇಳಿಲ್ಲ. ಇದರಿಂದ ಸಿಟ್ಟಾದ ಬಾಲಯ್ಯ ಅವರು ಅಂಜಲಿಯನ್ನು ತಳ್ಳಿದ್ದಾರೆ. ಅಲ್ಲೇ ಇದ್ದ ನೇಹಾ ಶೆಟ್ಟಿ ಈ ಘಟನೆಯಿಂದ ಶಾಕ್ ಆದರು. ಆದರೆ, ಅಂಜಲಿ ಅವರು ಏನನ್ನೂ ತೋರಿಸಿಕೊಳ್ಳದೆ ನಕ್ಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ.
Appalling behaviour by Balakrishna and an understandable reaction by the junior artist who laughed it off, but the most horrifying part of this video is the crowd’s reaction to a blatant act of assault, cheering and hooting in approval.
— Siddharth (@DearthOfSid) May 29, 2024
‘ಬಾಲಯ್ಯ ಅವರು ಈ ರೀತಿ ಮಾಡಿದ್ದು ಸರಿ ಅಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಬಾಲಯ್ಯ ಅವರು ಈ ರೀತಿ ನಡೆದುಕೊಳ್ಳುತ್ತಿರುವುದು ಹೊಸದಲ್ಲ’ ಎಂದಿದ್ದಾರೆ. ‘ಹಿರಿಯ ನಟನಾಗಿ ಹೇಗೆ ನಡೆದುಕೊಳ್ಳಬೇಕು ಅನ್ನೋದು ಗೊತ್ತಿಲ್ಲ’ ಎಂದು ಅನೇಕರು ಬಾಲಯ್ಯ ಅವರನ್ನು ಟೀಕಿಸುತ್ತಿದ್ದಾರೆ.
ಇದನ್ನೂ ಓದಿ: ಚುನಾವಣೆ ಮುಗಿದರಾಗಿಲ್ಲ, ಫಲಿತಾಂಶವೂ ಬರಬೇಕು; ಸಿನಿಮಾದಿಂದ ದೂರವೇ ಉಳಿದ ಬಾಲಯ್ಯ
ಬಾಲಯ್ಯ ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅಖಂಡ’, ‘ವೀರಸಿಂಹ ರೆಡ್ಡಿ, ‘ಭಗವಾನ್ ಕೇಸರಿ’ ಮೊದಲಾದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿವೆ. 2023ರಲ್ಲಿ ರಿಲೀಸ್ ಆದ ‘ವೀರಸಿಂಹ ರೆಡ್ಡಿ’ ಅವರ ನಟನೆಯ ಕೊನೆಯ ಸಿನಿಮಾ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 132 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ‘ಅಖಂಡ 2’ ಚಿತ್ರದಲ್ಲಿ ಬಾಲಯ್ಯ ನಟಿಸಲಿದ್ದಾರೆ. ಇತ್ತೀಚೆಗೆ ಬೇರೊಂದು ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಅವರು, ‘ಹೊಸ ಚಿತ್ರದ ಕೆಲಸ ಆರಂಭ ಆಗಿಲ್ಲ. ಚುನಾವಣಾ ಫಲಿತಾಂಶ ಬಂದ ಬಳಿಕವೇ ಕೆಲಸ ಶುರು ಮಾಡುತ್ತೇನೆ’ ಎಂದು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.