‘ಹಿಟ್ 3’ ಸಿನಿಮಾ ಹೇಗಿದೆ? ಇಲ್ಲಿದೆ ನೋಡಿ ಟ್ವಿಟ್ಟರ್ ವಿಮರ್ಶೆ

Hit 3 review: ನಟ ನಾನಿ ಹಾಗೂ ಕನ್ನಡತಿ ಶ್ರೀನಿಧಿ ಶೆಟ್ಟಿ ನಟನೆಯ ತೆಲುಗು ಸಿನಿಮಾ ‘ಹಿಟ್ 3’ ಇಂದು ಬಿಡುಗಡೆ ಆಗಿದೆ. ಸಿನಿಮಾಕ್ಕೆ ಭರ್ಜರಿ ಪ್ರಚಾರವನ್ನು ನಾನಿ ಮತ್ತು ಶ್ರೀನಿಧಿ ಶೆಟ್ಟಿ ಮಾಡಿದ್ದಾರೆ. ಸಿನಿಮಾ ಹಲವು ಕಡೆ ಮುಂಜಾನೆಯೇ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಟ್ವಿಟ್ಟರ್ ವಿಮರ್ಶೆ.

‘ಹಿಟ್ 3’ ಸಿನಿಮಾ ಹೇಗಿದೆ? ಇಲ್ಲಿದೆ ನೋಡಿ ಟ್ವಿಟ್ಟರ್ ವಿಮರ್ಶೆ
Hit 3

Updated on: May 01, 2025 | 9:34 AM

ನಟ ನಾನಿ (Nani) ಹಾಗೂ ಕನ್ನಡತಿ ಶ್ರೀನಿಧಿ ಶೆಟ್ಟಿ (Srinidhi Shetty) ನಟಿಸಿರುವ ‘ಹಿಟ್ 3’ ಸಿನಿಮಾ ಇಂದು ಬಿಡುಗಡೆ ಆಗಿದೆ. ‘ಹಿಟ್’ ಸಿನಿಮಾ ಸರಣಿಯ ಮೂರನೇ ಸಿನಿಮಾ ಇದಾಗಿದ್ದು, ಈ ಸಿನಿಮಾ ಮೊದಲೆರಡು ಸಿನಿಮಾಗಳಿಗಿಂತಲೂ ಹೆಚ್ಚು ವೈಲೆಂಟ್ ಆಗಿದೆ. ನಟ ನಾನಿ ‘ಹಿಟ್ 3’ ಸಿನಿಮಾದ ಪ್ರಚಾರವನ್ನು ಬಲು ಜೋರಾಗಿ ಮಾಡಿದ್ದಾರೆ. ಆಂಧ್ರ, ತೆಲಂಗಾಣ ಹಾಗೂ ಇನ್ನೂ ಕೆಲ ಭಾಗಗಳಲ್ಲಿ ಬೆಳ್ಳಂಬೆಳಿಗ್ಗೆ ‘ಹಿಟ್ 3’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ ನೋಡಿ…

ಡಿಲ್ಲಿ ಎನ್​ಟಿಆರ್ ಎಂಬುವರು ಟ್ವೀಟ್ ಮಾಡಿದ್ದು, ‘ಹಿಟ್ 3’ ಸಿನಿಮಾ ಬಗ್ಗೆ ಒಂದೇ ಮಾತಿನಲ್ಲಿ ಹೇಳುತ್ತೀನಿ. ಈ ಸಿನಿಮಾದಲ್ಲಿ ಒಂದು ಫೈಟ್ ಸೀನ್ ಇದೆ. ‘ಪುಷ್ಪ 2’ ಸಿನಿಮಾದ ಜಾತರ ಫೈಟ್ ಸೀನ್ ಸಹ ಅದರ ಮುಂದೆ ಏನೂ ಇಲ್ಲ. ಅಷ್ಟು ಅದ್ಭುತವಾದ ಫೈಟ್ ದೃಶ್ಯ ಅದಾಗಿದೆ. ಈ ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಆಗಲಿದೆ, ಕಣ್ಣು ಮುಚ್ಚಿಕೊಂಡು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬಹುದಾಗಿದೆ’ ಎಂದಿದ್ದಾರೆ.

ಶಿವಕುಮಾರ್ ಗಾಂಧಿ ಎಂಬುವರು ಟ್ವೀಟ್ ಮಾಡಿ, ‘ಹಿಟ್ 3’ ಸಿನಿಮಾದ ಮೊದಲಾರ್ಧ ಚೆನ್ನಾಗಿದೆ. ನಾನಿಯ ಸ್ಕ್ರೀನ್ ಪ್ರೆಸೆನ್ಸ್, ಎಂಟ್ರಿ ಸೂಪರ್, ನಾನಿಯ ಒನ್ ವರ್ಲ್ಡ್ ಡೈಲಾಗ್, ಬೈಗುಳಗಳು ಮಜಾ ಕೊಡುತ್ತವೆ. ಸೆಕೆಂಡ್ ಆಫ್ ಸಹ ಚೆನ್ನಾಗಿಯೇ ಇರುತ್ತದೆಯೇ ಕಾದು ನೋಡಬೇಕಿದೆ ಎಂದು ಸಿನಿಮಾದ ಮೊದಲಾರ್ಧದ ವಿಮರ್ಶೆಯನ್ನು ನೀಡಿದ್ದಾರೆ.

ಚಾಂಡ್ಲರ್ ಎಂಬ ಖಾತೆಯಿಂದ ಮಾಡಿರುವ ಟ್ವೀಟ್​ನಲ್ಲಿ, ‘ಮೊದಲಾರ್ಧ ಬಹುತೇಕ ಎಲ್ಲವೂ ಅಂದುಕೊಂಡಂತೆ ನಡೆಯುತ್ತದೆ. ಮೊದಲಾರ್ಧ ಲವ್ ಟ್ರ್ಯಾಕ್ ಚೆನ್ನಾಗಿದೆ. ಎರಡನೇ ಅರ್ಧ ಸಂಪೂರ್ಣ ಭಿನ್ನ ಹಾದಿ ಹಿಡಿಯುತ್ತದೆ. ಆ ಪಾರ್ಟ್ ಬಹಳ ಕೆಟ್ಟದಾಗಿ ಏನೂ ಇಲ್ಲ. ಹಾಗೆಂದು ಬಹಳ ಚೆನ್ನಾಗಿದೆ ಎಂದೂ ಸಹ ಹೇಳಲಾಗುವುದಿಲ್ಲ. ಆದರೆ ಸಿನಿಮಾದ ಎರಡನೇ ಅರ್ಧ ಬಹಳ ವೈಯಲೆಂಟ್ ಆಗಿದೆ ಆದರೂ ನೋಡಬಹುದು ಎಂದಿದ್ದಾರೆ.

ಧೀರಜ್ ಎಂಬುವರು ಟ್ವೀಟ್ ಮಾಡಿ, ‘ಹಿಟ್’ ಸಿನಿಮಾ ಸರಣಿಯ ಅತ್ಯಂತ ಕೆಟ್ಟ ಸಿನಿಮಾ ‘ಹಿಟ್ 3’. ಸೀರಿಯಲ್ ಕಿಲ್ಲರ್​ಗಳ ಚೇಸ್ ಮಾಡುವ ಹೀರೋ, ಒಂದು ರೀತಿ ಕ್ಯಾರಿಕೇಚರ್ ಪಾತ್ರದಂತೆ ಕಾಣುತ್ತಾನೆ. ಬಹಳ ವೈಯಲೆಂಟ್ ಆದ ಆಕ್ಷನ್ ಸಿನಿಮಾ ಇದಾಗಿದ್ದು, ಬಹಳ ತೆಳುವಾದ ಕತೆ ಮತ್ತು ಟ್ವಿಸ್ಟ್​ಗಳು ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. 2 ಗಂಟೆ 50 ನಿಮಿಷದ ರನ್ ಟೈಂ ಬಹಳ ಹಿಂಸೆ ನೀಡುತ್ತದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ