ಹಾರ್ದಿಕ್ ಜೊತೆ ಡೇಟ್ ಮಾಡುವಾಗಲೂ ಎಕ್ಸ್ ಬಾಯ್​ಫ್ರೆಂಡ್ ಅಲಿನ ಭೇಟಿ ಮಾಡುತ್ತಿದ್ದ ನತಾಶಾ

| Updated By: ರಾಜೇಶ್ ದುಗ್ಗುಮನೆ

Updated on: May 30, 2024 | 8:09 AM

ಹಾರ್ದಿಕ್ ಹಾಗೂ ನತಾಶಾ ಬೇರೆ ಆಗೋ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಹಾರ್ದಿಕ್ ಜೊತೆ ಡೇಟ್ ಮಾಡುತ್ತಿರುವಾಗಲೇ ನತಾಶಾ ಅವರು ಮಾಜಿ ಬಾಯ್​ಫ್ರೆಂಡ್ ಅಲಿ ಅವರನ್ನು ಭೇಟಿ ಮಾಡುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಾರ್ದಿಕ್ ಜೊತೆ ಡೇಟ್ ಮಾಡುವಾಗಲೂ ಎಕ್ಸ್ ಬಾಯ್​ಫ್ರೆಂಡ್ ಅಲಿನ ಭೇಟಿ ಮಾಡುತ್ತಿದ್ದ ನತಾಶಾ
ಹಾರ್ದಿಕ್ ಜೊತೆ ಡೇಟ್ ಮಾಡುವಾಗಲೂ ಎಕ್ಸ್ ಬಾಯ್​ಫ್ರೆಂಡ್ ಅಲಿನ ಭೇಟಿ ಮಾಡುತ್ತಿದ್ದ ನತಾಶಾ
Follow us on

ನತಾಶಾ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಕುಟುಂಬದ ವಿಚಾರ ಬೀದಿಗೆ ಬಂದಿದೆ. ಇವರು ವಿಚ್ಛೇದನ ಪಡೆದುಕೊಳ್ಳುತ್ತಾರೆ ಅನ್ನೋ ಸುದ್ದಿ ಜೋರಾಗಿದೆ. ಹಾರ್ದಿಕ್​ನ ಪ್ರೀತಿಸೋ ಮೊದಲು ನತಾಶಾ ಕಿರುತೆರೆ ನಟ ಅಲಿ ಗೂನಿ ಜೊತೆ ಡೇಟ್​​ ಮಾಡುತ್ತಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರ ನಡುವಿನ ಬ್ರೇಕಪ್ ಬಳಿಕ ನತಾಶಾಗೆ ಹಾರ್ದಿಕ್ ಸಿಕ್ಕರು. ಮೊದಲು ಪ್ರೀತಿಸುತ್ತಿದ್ದ ಇವರು ನಂತರ ಎಂಗೇಜ್​ಮೆಂಟ್ ಮಾಡಿಕೊಂಡರು. ಮಗು ಪಡೆದ ಬಳಿಕ ಮದುವೆ ಆದರು. ಈಗ ಇವರು ಬೇರೆ ಆಗೋ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಹಾರ್ದಿಕ್ ಜೊತೆ ಡೇಟ್ ಮಾಡುತ್ತಿರುವಾಗಲೇ ನತಾಶಾ ಅವರು ಮಾಜಿ ಬಾಯ್​ಫ್ರೆಂಡ್ ಅಲಿ ಅವರನ್ನು ಭೇಟಿ ಮಾಡುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನತಾಶಾ ಹಾಗೂ ಅಲಿ ಇಬ್ಬರೂ ‘ನಚ್ ಬಲಿಯೇ ಸೀಸನ್ 9’ ರಿಯಾಲಿಟಿ ಶೋಗೆ ಒಟ್ಟಾಗಿ ಬಂದಿದ್ದರು. ಈ ರಿಯಾಲಿಟಿ ಶೋ ನಡೆದಿದ್ದು 2018ರಲ್ಲಿ. ಈ ವಿಡಿಯೋದಲ್ಲಿ ಜಡ್ಜ್​ ಅಹ್ಮದ್ ಖಾನ್ ಅವರು ಅಲಿ ಹಾಗೂ ನತಾಶಾಗೆ ಪ್ರಶ್ನೆ ಮಾಡಿದ್ದಾರೆ. ‘ನೀವು ರಿಲೇಶನ್​ಶಿಪ್​ನಲ್ಲಿದ್ದು ಐದು ವರ್ಷಗಳ ಬಳಿಕ ಬ್ರೇಕಪ್ ಮಾಡಿಕೊಂಡಿರೇ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಲಿ, ‘ನಾವು ಬ್ರೇಕಪ್ ಮಾಡಿಕೊಂಡು 4 ವರ್ಷ ಕಳೆದಿದೆ. ಆಗಾಗ ಭೇಟಿ ಆಗುತ್ತ ಇರುತ್ತೇವೆ’ ಎಂದರು. ‘ನಾವು ಎರಡು ಬಾರಿ ರಿಲೇಶನ್​ಶಿಪ್​ನಲ್ಲಿ ಇದ್ದೆವು’ ಎಂದು ನತಾಶಾ ಹೇಳುವಾಗ ಅಹ್ಮದ್ ಖಾನ್ ಗೊಂದಲಕ್ಕೆ ಒಳಗಾದರು.


‘ನಿಮ್ಮ ರಿಲೇಶನ್​ಶಿಪ್ ಸ್ಟೇಟಸ್ ಏನು ಹೇಳಿ’ ಎಂದು ಅಹ್ಮದ್ ಕೇಳಿದರು. ‘ನನಗೂ ಗೊತ್ತಿಲ್ಲ’ ಎನ್ನುವ ಉತ್ತರ ಅಲಿ ಕಡೆಯಿಂದ ಬಂತು. 2018ರಲ್ಲಿ ಹಾರ್ದಿಕ್ ಹಾಗೂ ನತಾಶಾ ಲವ್ ಸ್ಟೋರಿ ಆರಂಭ ಆಗಿತ್ತು. ಆದಾಗ್ಯೂ ನತಾಶಾ ಎಕ್​ ಬಾಯ್​ಫ್ರೆಂಡ್​ನ ಏಕೆ ಭೇಟಿ ಮಾಡುತ್ತಿದ್ದರು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಚಿಲ್ ಆಗಿದ್ದಾರೆ ನತಾಶಾ; ಹೊಸ ಫೋಟೋದಲ್ಲಿ ಹೇಗೆ ಕಾಣ್ತಿದ್ದಾರೆ ನೋಡಿ  

ನತಾಶಾ ಹಾಗೂ ಹಾರ್ದಿಕ್ ಪಾಂಡ್ಯ ಜನವರಿ 2020ರಲ್ಲಿ ಎಂಗೇಜ್​ ಆದರು. ಆ ಬಳಿಕ ಅವರು ಮಗುವನ್ನು ಪಡೆದರು. ಮಗನಿಗೆ ಅಗಸ್ತ್ಯ ಎಂದು ಹೆಸರು ಇಡಲಾಗಿದೆ. ಆ ಬಳಿಕ ಈ ಜೋಡಿ ಮದುವೆ ಆಗಿದೆ. 2023ರಲ್ಲಿ ರಾಜಸ್ಥಾನದ ಉದಯ್​ಪುರದಲ್ಲಿ ಇವರು ಮದುವೆ ಆಗಿದ್ದಾರೆ. ಹಾರ್ದಿಕ್ ಪಾಂಡ್ಯಾ ಟಿ20 ವಿಶ್ವಕಪ್ ಆಡಲು ಟೀಂ ಇಂಡಿಯಾ ಜೊತೆ ಅಮೆರಿಕ ತೆರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:09 am, Thu, 30 May 24